ಬೆಂಗಳೂರು:ಪರಿಶಿಷ್ಟರ ಹಣ ಬಳಕೆ ವಿಚಾರದಲ್ಲಿ ನಾನು ಕಾನೂನು ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ. ಪರಿಶಿಷ್ಟ ಲಾನುಭವಿಗಳಿಗೇ ಆ ಹಣ ಬಳಕೆ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು. ಎಸ್‌ಸಿ/ಎಸ್‌ಟಿ ಹಣವನ್ನು ಆ ವರ್ಗದ ಲಾನುಭವಿಗಳಿಗೇ ಬಳಕೆ ಮಾಡುವುದಾಗಿ ಈಗಾಗಲೇ ನಾವು ಹೇಳಿದ್ದೇವೆ. ಕಾನೂನು ಪ್ರಕಾರವೇ ಖರ್ಚು ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜೆಡಿಎಸ್, ಬಿಜೆಪಿಯವರು ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಂಡಿದ್ದಾರೊ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.
ನಾವು 10 ಸಾವಿರ ಕೋಟಿಗೂ ಹೆಚ್ಚು ಹಣವನ್ನ ಎಸ್‌ಸಿಪಿ/ ಎಸ್‌ಟಿಪಿ ಹಣ ಬೇರೆ ಕಾರ್ಯಕ್ರಮಗಳಿಗೆ ಬಳಕೆ ಮಾಡಿದ್ದೇವೆ ಎಂದು ಹಿಂದಿನ ಸರ್ಕಾರದಲ್ಲಿ ಸದನದಲ್ಲೇ ಬಿಜೆಪಿಯವರು ಒಪ್ಪಿಕೊಂಡಿದ್ದಾರೆ. ಅವರು ಒಪ್ಪುವುದರ ಜತೆಗೆ ಎಜಿ ವರದಿ ಕೂಡ ಇದೆ. ನಾವು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಮೊದಲು ಅವರು ಕಾಯ್ದೆ ಬಗ್ಗೆ ತಿಳಿದುಕೊಳ್ಳಲಿ ಎಂದು ಹೇಳಿದರು.
ಶಕ್ತಿ ಯೋಜನೆಗೆ ಪಾಸ್ ವಿತರಣೆಈಗ ಬಳಕೆ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಸಾರಿಗೆ ಮತ್ತು ಸಮಾಜ ಕಲ್ಯಾಣ ಸಚಿವರು ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಶಕ್ತಿ ಯೋಜನೆಗೆ ನಾವು ಪಾಸ್ ವಿತರಣೆ ಮಾಡುತ್ತೇವೆ. ವಿತರಣೆ ಮಾಡಬೇಕಾದಾಗ ಎಲ್ಲ ಮಾಹಿತಿ ಪಡೆದುಕೊಳ್ಳುತ್ತೇವೆ. ಕಾರ್ಡ್‌ನಲ್ಲಿ ಜಾತಿ ನಮೂನೆ ಇರುವುದಿಲ್ಲ. ಆದಾರ್ ಕಾರ್ಡ್, ವೋಟರ್ ಐಡಿ ಯಲ್ಲಿರುವ ಮಾಹಿತಿ ಪಡೆದುಕೊಳ್ಳುತ್ತೇವೆ. ಯಾವುದೇ ಕಾನೂನು ಉಲ್ಲಂಘನೆ ಅಗುವುದಿಲ್ಲ ಎಂದರು.
ಗ್ಯಾರಂಟಿಗಳಿಂದ ಬಿಜೆಪಿಯಲ್ಲಿ ಆತಂಕಬಿಜೆಪಿಯವರಿಗೆ ಆತಂಕ ಶುರುವಾಗಿದೆ. ಗ್ಯಾರಂಟಿಗಳು ಮೂರು ನಾಲ್ಕು ಕೋಟಿ ಜನಕ್ಕೆ ಹೊಗುತ್ತಿದೆ. ಬಿಜೆಪಿಯವರಿಗೆ ಎಲ್ಲಿ ನೆಲ ಕಚ್ಚುತ್ತೇವೆ ಎಂಬ ಭಯದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಈ ಸರ್ಕಾರ ಎಸ್‌ಸಿ, ಎಸ್‌ಟಿ ಯೋಜನೆಗಳ ಜಾರಿಗೆ ಕಟಿಬದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + 12 =
Remember me
