ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವಿಧಾನ ಮಂಡಲ ಕಲಾಪ ಪ್ರಸಾರ ವ್ಯವಸ್ಥೆ ಮೂಲಕ ಶಾಸಕರು ಧ್ವನಿ ಎತ್ತಿರುವುದನ್ನು ಆಯಾ ಕ್ಷೇತ್ರದ ಜನರು ತಿಳಿಯಲು ಅವಕಾಶವಾಗಿದೆ. ಇದೀಗ ಸದನದಲ್ಲಿ ಶಾಸಕರು ಎಷ್ಟೊತ್ತು ಇದ್ದರು, ಯಾವಾಗ ಹೊರಗೆ ಹೋದರು ಎನ್ನುವುದನ್ನು ದಾಖಲಿಸುವ ವ್ಯವಸ್ಥೆ ಜಾರಿಯಾಗಲಿದೆ.
ಸದನದಲ್ಲಿ ಶಾಸಕರು ಹಾಜರಿದ್ದ ಮಾಪನಕ್ಕೆ ತಂತ್ರಜ್ಞಾನ ಬಳಕೆಯಾಗಲಿದೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಶುಕ್ರವಾರ ತಿಳಿಸಿದರು.
ರಾಜ್ಯ ವಿಧಾನಮಂಡಲ ಅಧಿವೇಶನ ಜು.15ರಿಂದ ಪ್ರಾರಂಭಗೊಳ್ಳಲಿದೆ. ಈ ಬಾರಿ ಶಾಸಕರು ಸದನದಲ್ಲಿ ಹಾಜರಿದ್ದ ಅವಧಿಯನ್ನು ತಂತ್ರಜ್ಞಾನ ಆಧರಿಸಿ ಲೆಕ್ಕ ಹಾಕಲಾಗುವುದು. ಒಟ್ಟು ಒಂಭತ್ತು ದಿನ ಅಧಿವೇಶನ ನಡೆಯಲಿದೆ.
ಕಳೆದ ಅಧಿವೇಶನದಲ್ಲಿ ಕಲಾಪಕ್ಕೆ ಬೇಗ ಹಾಜರಾಗುವ ಸದಸ್ಯರಿಗೆ ಬಹುಮಾನ ನೀಡಲಾಗುತ್ತಿತ್ತು. ಈ ಬಾರಿ ಯಾರು ಎಷ್ಟು ಹೊತ್ತು ಇದ್ದರು? ಎಷ್ಟು ಬಾರಿ ಎದ್ದು ಹೋದರು? ಕಲಾಪದ ಕಡೆವರೆಗೆ ಇದ್ದವರು ಯಾರು? ಎಂಬುದನ್ನೂ ಗಣನೆಗೆ ತೆಗೆದುಕೊಳ್ಳುತ್ತೇವೆ. ತಂತ್ರಜ್ಞಾನ ಆಧರಿಸಿ ಈ ಅವಧಿಯನ್ನು ಲೆಕ್ಕ ಹಾಕುತ್ತೇವೆ ಎಂದು ಯು.ಟಿ.ಖಾದರ್ ಹೇಳಿದರು.
ಚೆಸ್ ಪಂದ್ಯಾವಳಿ:20ರಂದು ವಿಶ್ವ ಚೆಸ್ ದಿನಾಚರಣೆ ಹಿನೆ್ನೆಲೆ ಯಲ್ಲಿ ಶಾಸಕರು, ಅಧಿಕಾರಿಗಳು ಹಾಗೂ ಪತ್ರಕರ್ತರಿಗೆ ಶಾಸಕರ ಕಪ್ ಹೆಸರಿನಲ್ಲಿ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು ಎಂದರು. ಅತ್ಯುತ್ತಮ ಶಾಸಕರ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಅಧಿವೇಶನ ಸಂದರ್ಭದಲ್ಲಿ ಶಾಸಕರು ಕಲಾಪದಲ್ಲಿ ಕುಳಿತು ರ್ಚಚಿ ಸುವುದಕೆ್ಕೆ ಕ್ಷೇತ್ರದ ಜನರು ಅವಕಾಶ ಮಾಡಿಕೊಡಬೇಕು. ನಂತರ ಸಾಕಷ್ಟು ಸಮಯ ಇರುತ್ತದೆ. ಆ ಸಂದರ್ಭದಲ್ಲಿ ಬೇಕಾದರೆ ಶಾಸಕರನ್ನು ಭೇಟಿಯಾಗಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಆಯಾ ಕ್ಷೇತ್ರದ ಜನರಿಗೆ ಅವಕಾಶವಿದೆ ಎಂಬ ಸಲಹೆ ನೀಡಿದರು.
ಜಂಟಿ ಸಮಿತಿ ಸಭೆಯಲ್ಲಿ ನಿರ್ಧಾರ:ಬಸವರಾಜ ಹೊರಟ್ಟಿ ಮಾತನಾಡಿ, ವರ್ಷದಲ್ಲಿ ಕನಿಷ್ಠ 60 ದಿನ ಕಲಾಪ ನಡೆಯಬೇಕೆಂಬ ನಿರೀಕ್ಷೆ ಇದ್ದರೂ ಸಾಧ್ಯವಾಗುತ್ತಿಲ್ಲ. ಈಗ ಗೊತ್ತುಪಡಿಸಿರುವ ಅಧಿವೇಶನದ ಅವಧಿ ವಿಸ್ತರಿಸುವ ಬಗೆ್ಗೆ ಜಂಟಿ ಕಲಾಪ ಸಮಿತಿ ಸಭೆಯಲ್ಲಿ ನಿರ್ಣಯಿಸುತ್ತೇವೆ. ವಿಧಾನ ಪರಿಷತ್ತಿನ ಅತ್ಯುತ್ತಮ ಸದಸ್ಯರ ಆಯ್ಕೆ ಬಹುಪಾಲು ಅಂತ್ಯಗೊಂಡಿದೆ. ಸದ್ಯದಲ್ಲೇ ಪ್ರಕಟ ಮಾಡುತ್ತೇವೆ ಎಂದರು.
ಸೌಂದಯೀಕರಣದ ಧ್ವನಿ ಭಿನ್ನ:ವಿಧಾನಸಭೆ ಸಭಾಂಗಣಕ್ಕೆ ಪ್ರವೇಶಿಸುವ ಪಶ್ಚಿಮದ ಮುಖ್ಯದ್ವಾರ ಸೌಂದಯೀಕರಣ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಧ್ವನಿ ಭಿನ್ನವಾಗಿದ್ದುದು ಗಮನಾರ್ಹ.

ಯು.ಟಿ.ಖಾದರ್ ಮಾತನಾಡಿ ವಿಧಾನಸಭೆ ಪಶ್ಚಿಮ ಪ್ರವೇಶ ದ್ವಾರದ ಕಬ್ಬಿಣದ ಸರಳುಗಳನ್ನು ತೆಗೆದು 70 ವರ್ಷಗಳ ನಂತರ ಮೊದಲ ಬಾರಿಗೆ ಸುಂದರಗೊಳಿಸಲಾಗಿದೆ. ದೇಶ-ವಿದೇಶದ ಗಣ್ಯರು ಭೇಟಿ ನೀಡಲು ಬಂದಾಗ ಮೊದಲಿದ್ದ ದ್ವಾರ ಸೊಗಸಾಗಿ ಕಾಣುತ್ತಿದ್ದಿಲ್ಲ. ಹೀಗಾಗಿ ದ್ವಾರಕ್ಕೆ ಸುಂದರ ರೂಪ ನೀಡಲಾಗಿದೆ. ವಿಧಾನಸೌಧದ ಭವ್ಯ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಸೌಂದಯೀಕರಿಸಲಾಗಿದೆ. 15ರ 10.30ಕೆ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಬಸವರಾಜ ಹೊರಟ್ಟಿ ಮಾತನಾಡುವ ವೇಳೆ ಸೌಂದಯೀಕರಣವನ್ನು ಪರೋಕ್ಷವಾಗಿ ವಿರೋಧಿಸಿದರು. ವಿಧಾನಸೌಧದ ಕೊಠಡಿಗಳ ಮೂಲೆಯನ್ನು ಬದಲಾಯಿಸಬಾರದು ಎಂಬ ನಿಯಮವೇ ಇರುವುದನ್ನು ನೆನಪಿಸಿದರು. ಈ ಹಿಂದೆ ಸಚಿವರೊಬ್ಬರು ಗೋಡೆ ಒಡೆದು ವಿವಾದಕೆ್ಕೆ ಕಾರಣವಾಗಿದ್ದರು. ಸಣ್ಣಪುಟ್ಟ ಬದಲಾವಣೆ ಬೇಕಾದರೆ ಮಾಡಿಕೊಳ್ಳಬಹುದು. ಆದರೆ ಸಂಪೂರ್ಣವಾಗಿ ಗೋಡೆ ಒಡೆಯುವುದಕೆ್ಕೆ ಅವಕಾಶವೇ ಇಲ್ಲ. ಇತಿಹಾಸವನ್ನು ಸ್ವಲ್ಪ ಓದಿದರೆ ಗೊತ್ತಾಗುತ್ತದೆ. ವಿಧಾನಸೌಧದಲ್ಲಿ ವಾಸ್ತು ಪ್ರಕಾರ ನವೀಕರಣ ಮಾಡುವ ಅಗತ್ಯವಿಲ್ಲ. ಇಡೀ ವಿಧಾನಸೌಧ ವಾಸ್ತು ಪ್ರಕಾರ ನಿರ್ವಣಗೊಂಡಿದೆ ಎಂದು ಹೊರಟ್ಟಿ ಹೇಳಿದರು.
ಆಪ್ ಅಭಿವೃದ್ಧಿಗೆ ಚಿಂತನೆ :ಸಚಿವರು ಯಾವ ಸಂದರ್ಭದಲ್ಲಿ ಇರುತ್ತಾರೆ. ಸಾರ್ವಜನಿಕರ ಭೇಟಿ ಸಮಯ ಯಾವಾಗ ಎಂಬಿತ್ಯಾದಿ ಮಾಹಿತಿಗಳು ಲಭಿಸುವಂತಹ ಪ್ರತ್ಯೇಕ ಆಪ್​ವೊಂದರ ಅಭಿವೃದ್ಧಿಗೆ ಚಿಂತನೆ ನಡೆದಿದ್ದು, ಇಷ್ಟರಲ್ಲೇ ಕ್ರಮವಹಿಸಲಾಗುವುದು ಎಂದು ಯು.ಟಿ.ಖಾದರ್ ಹೇಳಿದರು.
ಕುಳಿತುಕೊಳ್ಳಲು ವ್ಯವಸ್ಥೆ:ಕಲಾಪ ವೀಕ್ಷಣೆಗೆ ಬರುವ ಶಾಲಾ ಮಕ್ಕಳು ಬಿಸಿಲು ಮಳೆಯಲ್ಲಿ ನಿಲ್ಲುವುದನ್ನು ತಪ್ಪಿಸುವ ವ್ಯವಸೆ್ಥೆ ಕಲ್ಪಿಸಲಾಗಿದೆ. ಬ್ಯಾಂಕ್ವೆಟ್ ಹಾಲ್ ಸಮೀಪ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದು, ಅದೇ ರೀತಿ ವಿವಿಧ ಕ್ಷೇತ್ರಗಳ ಗಣ್ಯರಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ವಿಧಾನಸಭೆ ಅಧಿವೇಶನ ನಡೆಯುವಾಗ ಸ್ಪೀಕರ್​ಗೆ ಮಾಹಿತಿ ನೀಡಿ ಶಾಸಕರನ್ನು ಬಂಧಿಸಬೇಕಾಗುತ್ತದೆ. ಉಳಿದ ಸಂದರ್ಭದಲ್ಲಿ ಬಂಧನವಾದ 24 ಗಂಟೆಯಲ್ಲಿ ಮಾಹಿತಿ ನೀಡಬಹುದು. ಆದರೆ ಜಾರಿ ನಿರ್ದೇಶನಾಲಯವು ಈ ವರೆಗೆ ಯಾವುದೇ ಮಾಹಿತಿ ನೀಡಿಲ್ಲ.
| ಯು.ಟಿ.ಖಾದರ್ ವಿಧಾನಸಭಾಧ್ಯಕ್ಷ
ತಮಿಳುನಾಡನ್ನು ನಿರ್ಲಕ್ಷಿಸಲಾಗಿದೆ ಎಂಬ ಸಿಎಂ ಎಂಕೆ ಸ್ಟಾಲಿನ್ ಆರೋಪ ಸತ್ಯಕ್ಕೆ ದೂರವಾದುದು: ಕೇಂದ್ರ ಸರ್ಕಾರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven + twelve =
Remember me
