ಇತ್ತೀಚಿನದಿನಗಳಲ್ಲಿ ಯಾರನ್ನೇ ಕೇಳಿದರೂ, ಮಧುಮೇಹ, ರಕ್ತದೊತ್ತಡ ಮತ್ತು ಸ್ಥೂಲಕಾಯದಂತಹ ಸಮಸ್ಯೆಗಳಿಂದ ಬಳಲುವರರೇ ಹೆಚ್ಚು. ಬದಲಾದ ಕಾಲಕ್ರಮದಲ್ಲಿ ಜೀವನಶೈಲಿಯು ಬದಲಾದ ಕಾರಣ ಇಂದು ನಾವೆಲ್ಲರೂ ಹಲವು ಸಮಸ್ಯೆಗಳ ಕೂಪವಾಗಿದ್ದೇವೆ. ಸಮಸ್ಯೆಗಳಿಗೆ ಕಾರಣ ತಿಳಿದ ಬಳಿಕ ಮತ್ತೆ ನಮ್ಮ ಹಿಂದಿನ ಆಹಾರ ಪದ್ಧತಿಯನ್ನೇ ಅಳವಡಿಸಿಕೊಳ್ಳುವತ್ತ ನಮ್ಮ ಚಿತ್ತ ಹರಿದಿದೆ. ಹಾಗಾಗಿ ಇಷ್ಟು ವರ್ಷಗಳವರೆಗೂ ರಾಗಿ ಎಂದರೆ ಮೂಗು ಮುರಿಯುತ್ತಿದ್ದವರು ಇಂದು ಅದರ ಬಳಕೆಯತ್ತ ಗಮನ ಹರಿಸಿದ್ದಾರೆ.
ಖನಿಜಗಳು ಮತ್ತು ವಿಟಮಿನ್‌ಗಳ ಜೈವಿಕ ಲಭ್ಯತೆ ಮತ್ತು ಇದರ ವಿವಿಧ ಆರೋಗ್ಯ ಪ್ರಯೋಜನಗಳಿಂದಾಗಿ ರಾಗಿಯ ಬಳಕೆ ತುಂಬ ಪರಿಣಾಮಕಾರಿಯಾಗಿದೆ. ಸ್ಥೂಲಕಾಯತೆ ಅಥವಾ ಮಧುಮೇಹದ ಕಡಿವಾಣಕ್ಕೆ ರಾಗಿ ಸೇವನೆ ಪರಿಣಾಮಕಾರಿ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಹಾಗಾದರೆ ಜೀವನಶೈಲಿಯ ಅಸ್ವಸ್ಥತೆಗಳನ್ನು ಎದುರಿಸಲು ರಾಗಿ ಹೇಗೆಲ್ಲ ಸಹಾಯಕವಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.
ರಾಗಿ ಮತ್ತು ಅದರ ವಿಧಗಳುರಾಗಿಯು ಪ್ರಧಾನವಾಗಿ ಪೂರ್ವ ಮತ್ತು ಮಧ್ಯ ಆಫ್ರಿಕಾ ಹಾಗೂ ಭಾರತದ ದಕ್ಷಿಣ ಭಾಗಗಳಲ್ಲಿ ಬೆಳೆಯುವ ಪ್ರಮುಖ ಆಹಾರ ಧಾನ್ಯವಾಗಿದೆ. ಇದನ್ನು ಶುಷ್ಕ, ಬಿಸಿ ವಾತವರಣದಲ್ಲಿ ಮತ್ತು ಎತ್ತರದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
ಇದನ್ನು ಫಿಂಗರ್ ರಾಗಿ ಎಂದೂ ಕರೆಯಲಾಗುತ್ತದೆ. ಏಕೆಂದರೆ ರಾಗಿ ಧಾನ್ಯದ ತಲೆಯು ಅಂಗೈಗೆ ಜೋಡಿಸಲಾದ ಬೆರಳುಗಳಂತೆ ಕೇಂದ್ರ ಬಿಂದುವಿನಿAದ ಭಾಗವಾಗಿ ಐದು ಸ್ಟ್ರೈಕ್​ಗಳನ್ನು ಹೊಂದಿದೆ. ರಾಗಿಯ ಗಾತ್ರವು 1-2 ಮಿಮೀವರೆಗೆ ಬದಲಾಗುತ್ತದೆ. ಇದು ವಿವಿಧ ಬಣ್ಣಗಳಲ್ಲಿ ಕಂಡುಬರುತ್ತದೆ. ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಕಾಣಸಿಗುತ್ತದೆ. ಇದು ಇತರ ಸಿರಿಧಾನ್ಯಗಳಿಗಿಂತ ಹೆಚ್ಚಿನ ಫೈಬರ್ ಮತ್ತು ಕ್ಯಾಲ್ಸಿಯಂ ಅಂಶ ಹೊಂದಿದೆ.”ರಾಗಿಯಲ್ಲಿನ ಸಂಯುಕ್ತಗಳು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಹಾಗಾಗಿ ಜನರು ಕಡುಬು, ಮುದ್ದೆ, ಡಂಪ್ಲಿಂಗ್ಸ್, ಚಪಾತಿ, ಮೊಳಕೆಯೊಡೆದ ಹಾಗೂ ಆವಿಯಲ್ಲಿ ಬೇಯಿಸಿದ ರಾಗಿ ಭಕ್ಷ್ಯಗಳನ್ನು ತಯಾರಿಸುತ್ತಾರೆ. ರಾಗಿಯಲ್ಲಿರುವ ನಿಧಾನವಾಗಿ ಜೀರ್ಣವಾಗುವ ಪಿಷ್ಠ ಮತ್ತು ನಿರೋಧಕ ಪಿಷ್ಠದಿಂದಾಗಿ ಪ್ರಾಮುಖ್ಯತೆ ಪಡೆದಿದೆ. ಇದು ಹೊಟ್ಟೆ ತುಂಬಿಸುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ರಾಗಿಯಲ್ಲಿನ ಪೌಷ್ಠಿಕಾಂಶದ ಗುಣಗಳುರಾಗಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಏಕದಳ ಧಾನ್ಯಗಳಿಗಿಂತ ಹೆಚ್ಚು ಪೌಷ್ಠಿಕಾಂಶ ಹೊಂದಿವೆ. ಇದು ಅಪಾರ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ, ಆಹಾರದ ಫೈಬರ್, ಅಗತ್ಯವಾದ ಅಮೈನೋ ಆಮ್ಲಗಳು ಮತ್ತು ಇತರ ಖನಿಜಗಳನ್ನು ಹೊಂದಿದೆ.
ಇದು ಫೀನಾಲಿಕ್ ಸಂಯಕ್ತಗಳು ಮತ್ತು ಫೈಟೊಕೆಮಿಕಲ್‌ಗಳಿಂದ ಸಮೃದ್ಧವಾಗಿದೆ. ಹೆಚ್ಚಿನ ಉತ್ಕರ್ಷಣ ನಿರೋಧಕ ಚಟುವಿಟಿಕೆ ಪ್ರದರ್ಶಿಸುತ್ತದೆ. ಇದರೊಂದಿಗೆ ಉತ್ತಮ ಗುಣಮಟ್ಟದ ಪ್ರೋಟಿನ್, ವಿಟಮಿನ್ ಎ, ಬಿ ಕಾಂಪ್ಲೆಕ್ಸ್ ಮತ್ತು ರಂಜಕ ಹೊಂದಿದೆ. ಅಲ್ಲದೆ ಮೆಥೆಯೋನಿನ್, ಐಸೋಲ್ಯೂಸಿನ್, ಲ್ಯೂಸಿನ್, ಫೆನೈಲಾಲನೈನ್ ಮತ್ತು ಇತರ ಅಗತ್ಯ ಅಮೈನೋ ಆಮ್ಲಗಳ ಆಗರವೇ ಆಗಿದೆ.
ರಾಗಿಯ ಪ್ರಯೋಜನಕಾರಿ ಗುಣಗಳುರಾಗಿಯು ಹೇರಳವಾಗಿರುವ ಪೈಟೊಕೆಮಿಕಲ್‌ಗಳನ್ನು ಹೊಂದಿದ್ದು, ಇದು ನ್ಯೂಟ್ರಾಸ್ಯುಟಿಕಲ್ ಗುಣಗಳನ್ನು ಹೆಚ್ಚಿಸುತ್ತದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ರಾಗಿಯು ಮಧುಮೇಹ ವಿರೋಧಿ, ಪ್ರಾಥಮಿಕವಾಗಿ ಟೈಪ್ ೨ ಡಯಾಬೀಟಿಸ್, ಮೆಲ್ಲಟಿಸ್, ಉರಿಯೂತ-ವಿರೋಧಿ, ಅತಿಸಾರ-ವಿರೋಧಿ, ಹುಣ್ಣು ನಿರೋಧಕ ಮತ್ತು ಆಂಟಿಟ್ಯುಮೊರಿಜೆನಿಕ್ ಗುಣಲಕ್ಷಣಗಳಂತಹ ವಿವಿಧ ಕ್ರಿಯಾತ್ಮಕ ಮತ್ತು ಪೌಷ್ಠಿಕಾಂಶದ ಗುಣಲಕ್ಷಗಳನ್ನು ಹೊಂದಿದೆ. ರಾಗಿ ಇಷ್ಟೆಲ್ಲ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಜನರಿಗೆ ಅರಿವಿನ ಕೊರತೆಯ ಕಾರಣದಿಂದ ರಾಗಿಯ ಬಳಕೆ ವಿರಳವಾಗಿದೆ ಎನ್ನುತ್ತವೆ ಸಂಶೋಧನಾ ವರದಿಗಳು.
ರಾಗಿಯ ಆರೋಗ್ಯ ಪ್ರಯೋಜನಗಳುರಾಗಿಯು ಉತ್ಕರ್ಷಣ ನಿರೋಧಕ ಚಟುವಟಿಕೆ ಹೊಂದಿರುವ ಸಂಭಾವ್ಯ ಫೀನಾಲಿಕ್ ಸಂಯುಕ್ತಗಳನ್ನು ಹೊಂದಿದೆ. ಇವು ವೈರಾಣುಗಳ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುವುದರಿಂದ ಜೀವನಶೈಲಿಯ ಅಸ್ವಸ್ಥತೆಗಳೊಂದಿಗೆ ಸಂಬಂಧಿಸಿದ ತೊಡಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ರಾಗಿಯಲ್ಲಿನ ಫಿನಾಲಿಕ್ ಸಂಯುಕ್ತಗಳು ಹೃದಯರಕ್ತನಾಳದ ಕಾಯಿಲೆ ಮತ್ತು ಕ್ಯಾನ್ಸರ್‌ನಂತಹ ವಿವಿಧ ಆರೋಗ್ಯ ಪರಿಸ್ಥಿತಿಯಲ್ಲಿ ಎದುರಿಸುವ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ಉತ್ಕರ್ಷಣ ನಿರೋಧಕ ಅಂಶಗಳು ವಯಸ್ಸಾಗುವ ಪ್ರಗತಿಯನ್ನು ವಿಳಂಬಗೊಳಿಸುವಲ್ಲಿ ನೆರವಾಗುತ್ತದೆ.
ಫಿಂಗರ್ ರಾಗಿ ಕಾಲಜನ್ ಕ್ರಾಸ್‌ಲಿಂಕಿAಗ್ ಅನ್ನು ತಡೆಯುತ್ತದೆ ಎನ್ನುತ್ತದೆ ಅಧ್ಯಯನಗಳು. ಇದು ಸ್ನಾಯುರಜ್ಜು, ಚರ್ಮ ಮತ್ತು ರಕ್ತನಾಳಗಳಲ್ಲಿನ ಸ್ಥಿತಿಸ್ಥಾಪಕ ಅಂಗಾAಶಗಳ ಬಿಗಿತವನ್ನು ಕಡಿಮೆ ಮಾಡುವ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
1. ಹೆಚ್ಚಿನ ಕ್ಯಾಲ್ಸಿಯಂ ಅಂಶ ಹೊಂದಿದೆ: ರಾಗಿಯು ಲಿನೋಲಿಕ್ ಮತ್ತು ಲಿನೋಲೆನಿಕ್ ಆಮ್ಲದಂಹ ಬಹುಅಪರ್ಯಾಪ್ತ ಕೊಬ್ಬಿನ ಆಮ್ಲಗಳನನ್ನು ಹೊಂದಿದೆ. ಇದು ನರಮಂಡಲ ಕೇಂದ್ರದ ಸಾಮಾನ್ಯ ಬೆಳವಣಿಗೆಯನ್ನು ಸುಗಮಗೊಳಿಸುತ್ತದೆ. ಜತೆಗೆ ಇದು ಕ್ಯಾಲ್ಸಿಯಂ ಮೂಲವಾಗಿದ್ದು, ಈ ಧಾನ್ಯಗಳಲ್ಲಿ ೩೫೦ ಮಿಗ್ರಾಂ/೧೦೦ ಗ್ರಾಂ ಕ್ಯಾಲ್ಸಿಯಂ ಇರುತ್ತದೆ.
ಇದರ ಕ್ಯಾಲ್ಸಿಯಂ ಅಂಶವು ಇತರ ಧಾನ್ಯಗಳಿಗಿಂತ ೫-೧೦ ಪಟ್ಟು ಹೆಚ್ಚಾಗಿದೆ. ರಾಗಿಯಲ್ಲಿ ಲ್ಯಾಕ್ಟೋಸ್ ಸಕ್ಕರೆಯ ಅನುಪಸ್ಥಿತಿಯು ಸುಲಭÀವಾಗಿ ಜೀರ್ಣವಾಗುವಂತೆ ಮಾಡುತ್ತದೆ ಮತ್ತು ದೇಹವು ಗರಿಷ್ಠ ಕ್ಯಾಲ್ಸಿಯಂ ಹೀರಿಕೊಳ್ಳುವಂತೆ ಪ್ರಚೋದಿಸುತ್ತದೆ.
2.. ಹೃದಯರಕ್ತನಾಳದ ಅಸ್ವಸ್ಥತೆ ತಡೆಗಟ್ಟುವುದು: ಹೃದಯ ರಕ್ತನಾಳದ ಸಮಸ್ಯೆಗಳು ಪ್ರಪಂಚದಾದ್ಯAತ ಜನರ ಸಾವಿಗೆ ಪ್ರಾಥಮಿಕ ಕಾರಣವಾಗಿದೆ. ಅಸಹಜ ರಕ್ತದೊತ್ತಡ, ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟಗಳು, ಅಧಿಕ ರಕ್ತದೊತ್ತಡ, ಖಿನ್ನತೆ, ಬೊಜ್ಜು ಮತ್ತು ಮಧುಮೇಹವು ಹೃದಯ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ರಾಗಿಯನ್ನು ಸೇವಿಸುವುದರಿಂದ ಸೀರಮ್ ಟ್ರೈಗ್ಲಿಸರೈಡ್‌ಗಳು ಮತ್ತು ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಇಳಿಸುತ್ತದೆ.
ಫಿಂಗರ್ ರಾಗಿಯಲ್ಲಿ ಕಂಡುಬರುವ ಫೀನಾಲಿಕ್ ಸಂಯುಕ್ತಗಳು ಲಿಪಿಡ್ ಪೆರಾಕ್ಸಿಡೇಶನ್ ಅನ್ನು ಕಡಿಮೆ ಮಾಡುತ್ತದೆ. ಮತ್ತು ಎಲ್‌ಡಿಎಲ್ ಕೊಲೆಸ್ಟ್ರಾಲ್ ‌ನ ಆಕ್ಸಿಡೇಟಿವ್ ಮಾರ್ಪಾಡುಗಳನ್ನು ಪ್ರತಿಬಂಧಿಸುತ್ತದೆ. ಪರಿಣಾಮವಾಗಿ ಇದು ಅಪಧಮನಿ ಸಂಬಂಧಿತ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಅಂತಿಮವಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ಜತೆಗೆ ರಾಗಿಯಲ್ಲಿರುವ ಕರಗುವ ಫೈಬರ್ ಪಿತ್ತರಸ ಆಮ್ಲಗಳು ಮತ್ತು ಎಲ್‌ಡಿಎಲ್ ಕೊಲೆಸ್ಟ್ರಾಲ್ ಮರುಹೀರಿಕೆಯನ್ನು ಕಡಿಮೆ ಮಾಡುತ್ತದೆ.
3. ಉದರದ ಕಾಯಿಲೆಗೆ ಪರಿಹಾರ: ಇತ್ತೀಚಿನ ದಿನಗಳಲ್ಲಿ ರೋಗನಿರೋಧಕ ಶಕ್ತಿಯ ಅಸ್ವಸ್ಥತೆಯಿಂದಾಗಿ ಹಲವು ಕಾಯಿಲೆಗಳು ಹರಡುತ್ತಿರುವುದು ತಿಳಿದಿರುವ ವಿಚಾರ. ಉದರದ ಕಾಯಿಲೆಯು ರೋಗನಿರೋಧಕ ಶಕ್ತಿ ಕುಂಠಿತಗೊಂಡಾಗ ಉಂಟಾಗುವ ಒಂದು ಸಮಸ್ಯೆ. ಇದು ಗ್ಲುಟನ್ ಎಂಬ ಹೆಸರಿನ ಪ್ರೋಟಿನ್‌ಗಳ ಗುಂಪಿನ ಸೇವನೆಯ ಸಮಯದಲ್ಲಿ ಪ್ರಚೋದನೆಯಿಂದಾಗಿ ಎದುರಾಗುವ ಸಾಮಾನ್ಯ ಸಮಸ್ಯೆ. ಗೋಧಿ, ರೈ ಮತ್ತು ಬಾರ್ಲಿ ಧಾನ್ಯಗಳು ಪ್ರಾಥಮಿಕವಾಗಿ ಅಂಟು ಗುಣ ಹೊಂದಿದ್ದು, ಇದರಿಂದಾಗಿ ಈ ಸಮಸ್ಯೆ ಉಂಟಾಗುವ ಸಂಭವ ಹೆಚ್ಚು.
ಹಾಗಾಗಿ ಉದರದ ಕಾಯಿಲೆಯನ್ನು ಕಾಪಾಡಿಕೊಳ್ಳಲು ಗ್ಲುಟನ್ ಹೊಂದಿರುವ ಆಹಾರವನ್ನು ತಪ್ಪಿಸುವುದು ಮತ್ತು ಅದೇ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದು ಅವಶ್ಯಕ. ಅಕ್ಕಿ, ಜೋಳ, ಸೋರ್ಗಮ್, ಕ್ವಿನೋವಾ, ಅಮರಂಥ್, ರಾಗಿ ಮತ್ತು ಓಟ್ಸ್ ಅಂಟುರಹಿತ ಸ್ವಭಾವ ಹೊಂದಿರುವ ಧಾನ್ಯಗಳಾಗಿವೆ.
4. ಕರುಳಿನ ಚಲನೆ ಸುಧಾರಣೆ: ರಾಗಿಯು ಕರಗುವ ಮತ್ತು ಕರಗದ ಆಹಾರದ ಫೈಬರ್ ಮತ್ತು ನಾರಿನ ಪದಾರ್ಥಗಳಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆ ಸಮಯದಲ್ಲಿ ಒಡೆಯುವುದಿಲ್ಲ, ಜೀರ್ಣಾಂಗ ವ್ಯೂಹದ ಅಸ್ವಸ್ಥತೆಗಳು ಕರುಳಿನ ಕ್ಯಾನ್ಸರ್, ಪರಿಧಮನಿಯ ಹೃದಯ ಕಾಯಿಲೆಗಳು ಮತ್ತು ಮಧುಮೇಹವನ್ನು ತಡೆಯಲು ಫೈಬರ್ ಸಹಾಯ ಮಾಡುತ್ತದೆ. ಇದು ಕರುಳಿನ ಚಲನಶೀಲತೆಯನ್ನು ಉತ್ತೇಜಿಸುವ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ. ಪೆರಿಸ್ಟಲ್ಸಿನ್ ಅನ್ನು ಉತ್ತೇಜಿಸುವ ಮೂಲಕ ಮಲಬದ್ಧತೆ ತಡೆಯುತ್ತದೆ. ಕರಗುವ ಫೈಬರ್ ಅಂಶವು ಉರಿಯೂತದ ಜೀರ್ಣಾಂಗವನ್ನು ನಯಗೊಳಿಸುವಿಕೆ ಮತ್ತು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದು ಪೆಪ್ಟಿಕ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ರಾಗಿಯ ಕಾರ್ಬೋಹೈಡ್ರೇಟ್ ಸಂಯೋಜನೆಯು ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ಹೀರಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಪರಿಣಾಮವಾಗಿ ಇದು ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ ಮತ್ತು ಅತಿಯಾದ ಕ್ಯಾಲರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಹಸಿವನ್ನು ಕಡಿಮೆ ಮಾಡಿ, ತೂಕ ನಷ್ಟವನ್ನು ಉತ್ತೇಜಿಸುತ್ತದೆ.
5. ಕ್ಯಾನ್ಸರ್ ತಡೆಗಟ್ಟುವಿಕೆ: ಕ್ಯಾನ್ಸರ್ ತಡೆಗಟ್ಟಲು ಜನರು ಅನಿವಾರ್ಯವಾಗಿ ಸಂಸ್ಕರಿಸಿದ ಆಹಾರಗಳಿಂದ ಆರೋಗ್ಯಕರ ಆಹಾರಗಳ ಬಳಕೆಯತ್ತ ಗಮನಹರಿಸಬೇಕಿದೆ. ಕ್ಯಾನ್ಸರ್‌ನಿಂದ ಬಳಲುವ ವೇಳೆ ಆಹಾರ ಪಥ್ಯದಲ್ಲಿ ರಾಗಿಯಂತಹ ಪದಾರ್ಥಗಳನ್ನು ಸೇರಿಸಿಕೊಳ್ಳುವುದರಿಂದ ಇದರ ಕ್ಯಾನ್ಸರ್ ವಿರೋಧಿ ಅಂಶಗಳು ಸ್ವಯಂಪ್ರೇರಿತ ಅಥವಾ ರಾಸಾಯನಿಕ ಟ್ಯೂಮರ್‌ಗಳ ಬೆಳವಣಿಗೆಗೆ ವಿರೋಧಪಡಿಸುತ್ತದೆ. ರಾಗಿಯು ಫೈಟೋಕೆಮಿಕಲ್ಸ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಅಲ್ಲದೆ ಇದು ವ್ಯಾಪಕ ಆಂಟಿ ಕಾರ್ಸಿನೋಜೆನಿಕ್ ಗುಣಲಕ್ಷಣಣಗಳನ್ನು ಹೊಂದಿದೆ. ರಾಗಿಯು ಧೀರ್ಘಾವಧಿ ಜೀವಿತಾವಧಿಯನ್ನು ಹೊಂದುವ ಸಮೃದ್ಧ ಪೋಷಕಾಂಶಗಳನ್ನು ಹೊಂದಿದೆ. ಇದನ್ನು ಬರ ಪ್ರದೇಶದಲ್ಲಿಯೂ ಬೆಳೆಯಬಹುದು. ಆಹಾರದ ಅಭದ್ರತೆಯ ವಿರುದ್ಧ ಹೋರಾಡಲು ಮತ್ತು ಹವಾಮಾನ ಅಸ್ಥಿರತೆಯ ಸಮಯದಲ್ಲಿ ಜನರನ್ನು ರಕ್ಷಿಸಲು ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯಬಹುದೇ ಎಂದು ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ.
6. ಮಧುಮೇಹ ಕಡಿವಾಣಕ್ಕೆ ರಾಗಿಯೇ ಮದ್ದು: ಮಧುಮೇಹವು ಧೀರ್ಘಕಾಲದ ಚಯಾಪಚಯ ಅಸ್ವಸ್ಥತೆಯಾಗಿದ್ದು, ಇನ್ಸುಲಿನ್ ಅಸಮರ್ಪಕ ಉತ್ಪಾದನೆಯಿಂದಾಗಿ ಅಥವಾ ಇನ್ಸುಲಿನ್ ಪ್ರತಿರೋಧದಿಂದಾಗಿ ಮಧುಮೇಹ ಉಂಟಾಗುತ್ತದೆ. ಫಿಂಗರ್ ರಾಗಿಯ ಫೀನಾಲಿಕ್ ಸಾರಗಳು, ಪರಿಣಾಮಕಾರಿ ಆಲ್ಫಾ-ಗ್ಲುಕೋಸಿಡೇಸ್ ಮತ್ತು ಪ್ಯಾಂಕ್ರಿಯಟಿಕ್‌ಅಮಲೇಸ್ ಪ್ರತಿರೋಧಕಗಳನ್ನು ಹೊಂದಿದೆ. ಇದರ ಪರಿಣಾಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆ.
ರಾಗಿ ಆಧಾರಿತ ಆಹಾರ ಪದಾರ್ಥಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ತೋರಿಸುತ್ತದೆ ಎನ್ನುತ್ತವೆ ಅಧ್ಯಯನಗಳು. ಇದರ ಜತೆಗೆ ಬಹುಧಾನ್ಯದ ಹಿಟ್ಟಿಗೆ ಶೇ.೩೦ ರಷ್ಟು ರಾಗಿಹಿಟ್ಟನ್ನು ಸೇರಿಸುವುದರಿಂದ ಪ್ಲಾಸ್ಮಾ ಗ್ಲೂಕೋಸ್ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಮಹಿಳೆಯರಲ್ಲಿ ಟೈಪ್ 2 ಮಧುಮೇಹಕ್ಕೆ ಸಂಬಂಧಿಸಿದಂತೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇವನೆಯು ಈ ರೋಗ ನಿವಾರಣೆಗೆ ಸಹಾಯ ಮಾಡುತ್ತದೆ. ಅಲ್ಲದೆ ರಾಗಿಯು ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಅನ್ನು ಹೇರಳವಾಗಿ ಹೊಂದಿದ್ದು, ಟೈಪ್ 2 ಡಯಾಬಿಟಿಸ್ ಅಪಾಯವನ್ನು ತಪ್ಪಿಸುತ್ತದೆ.
ಮಧುಮೇಹ ರೋಗಿಗಳಿಗೆ ಗಾಯಗಳು ಮಾಸುವುದೇ ದೊಡ್ಡ ತಲೆನೋವಿನ ವಿಷಯ. ಆದರೆ ರಾಗಿ ಬಳಕೆಯು ಮಧುಮೇಹಿಗಳ ಗಾಯವು ಶೀಘ್ರ ಶಮನವಾಗುವಂತೆ ಮಾಡುತ್ತದೆ. ಉತ್ಕರ್ಷಣ ನಿರೋಧಕ ಸ್ಥಿತಿಯನ್ನು ಸುಧಾರಿಸುತ್ತದೆ ಈ ಮೂಲಕ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ.
ಮೂತ್ರಪಿಂಡದ ತೊಂದರೆಗಳು, ಥೈರಾಯ್ಡ್ ಸಮಸ್ಯೆ ಮತ್ತು ಅತಿಸಾರ ಇರುವವರು ರಾಗಿ ತಿನ್ನುವುದನ್ನು ತಪ್ಪಿಸಬೇಕು. ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಆರೋಗ್ಯ ಜೋಪಾನ, ಮುನ್ನೆಚ್ಚರಿಕೆಯೇ ಸೋಪಾನ: ಇಂದು ವಿಶ್ವ ಹೃದಯ ದಿನ

ಹೃದ್ರೋಗ ತಡೆಗೆ ಎಲ್ಲರೂ ಸಹಕರಿಸಿ: ಜಿಲ್ಲಾಧಿಕಾರಿ ಸೆಲ್ವಮಣಿ ಕರೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × 3 =
Remember me
