ಬೆಂಗಳೂರು:ನೂತನ ವಿಧಾನಸಭಾ ಸ್ಪೀಕರ್​ ಆಗಿ ಯು.ಟಿ. ಖಾದರ್​ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಸಭಾಧ್ಯಕ್ಷ ಪೀಠವನ್ನು ಅಲಂಕರಿಸಿದ್ದಾರೆ.
ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯು.ಟಿ. ಖಾದರ್​ ಅವರ ಹೆಸರನ್ನು ಸದನದಲ್ಲಿಂದು ಸೂಚಿಸಿದರು. ಬಳಿಕ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಖಾದರ್​ ಹೆಸರನ್ನು ಅನುಮೋದಿಸಿದರು. ನಂತರ ಬಹುಮತದ ಮೂಲಕ ಖಾದರ್​ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ:ಒಂದು ರಸ್ತೆ ಗುಂಡಿಗೆ 1 ಲಕ್ಷ ರೂ. ದಂಡ! ಗುತ್ತಿಗೆದಾರರಿಗೆ ಬಿಗ್​ ಶಾಕ್​
ಆಯ್ಕೆಯಾದ ಬಳಿಕ ಹಂಗಾಮಿ ಸ್ಪೀಕರ್​ ಆರ್​.ವಿ. ದೇಶಪಾಂಡೆ ಅವರು ಸಭಾಧ್ಯಕ್ಷರ ಹೆಸರನ್ನು ಸದನದಲ್ಲಿ ಘೋಷಣೆ ಮಾಡಿದರು. ನಂತರ ಯು.ಟಿ. ಖಾದರ್​ ಅವರು ಸಭಾಧ್ಯಕ್ಷ ಪೀಠವನ್ನು ಅಲಂಕರಿಸಿದರು.
ಸ್ಪೀಕರ್​ ಆಗಿ ಅಧಿಕಾರ ವಹಿಸಿಕೊಂಡು ಖಾದರ್​ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಆರ್​.ವಿ. ದೇಶಪಾಂಡೆ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಭಿನಂದಿಸಿದರು.
ಕರೊನಾ ಹೋಯ್ತಲ್ಲ ಅಂತ ನಿಟ್ಟುಸಿರು ಬಿಡುವಾಗಲೇ ಮತ್ತೊಂದು ಎಚ್ಚರಿಕೆ ನೀಡಿದ ಡಬ್ಲ್ಯುಎಚ್​ಒ

ಕೊಪ್ಪಳದಲ್ಲಿ ವಿದ್ಯುತ್ ಬಿಲ್ ವಸೂಲಿಗೆ ಹೋದ ಲೈನ್​ಮ್ಯಾನ್​ಗೆ ಚಪ್ಪಲಿಯಿಂದ ಹಲ್ಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + seven =
Remember me
