ಬೆಂಗಳೂರು:ಜೆ.ಸಿ. ರಸ್ತೆಯ ವಾಣಿಜ್ಯ ಕಟ್ಟಡದ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಯುವಕ ಮೃತಪಟ್ಟಿದ್ದಾನೆ.
ಉತ್ತರ ಪ್ರದೇಶ ಮೂಲದ ವಿಕಾಸ್ ಕುಮಾರ್ ಗೌರ್ (25) ಮೃತ ಯುವಕ. 6 ತಿಂಗಳ ಹಿಂದೆ ನೌಕರಿ ಅರಸಿ ಬೆಂಗಳೂರಿಗೆ ಬಂದಿದ್ದ ವಿಕಾಸ್, ಜೆ.ಸಿ.ರಸ್ತೆ ಭರತ್ ಸರ್ಕಲ್ ಸಂಜಯ್ ಆಟೋ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.
ಇದನ್ನೂ ಓದಿ:ಭವಾನಿ ಅಕ್ಕ ನಾಳೆ ನನ್ನನ್ನು ತಮ್ಮ ಎಂದೂ ಕರೆಯಬಹುದು:ಪ್ರೀತಂ ಗೌಡ ಅಚ್ಚರಿಯ ಹೇಳಿಕೆ
4 ಮಹಡಿಯ ಮೊದಲ ಮಹಡಿಯಲ್ಲಿ ಅಂಗಡಿ ಇದ್ದರೇ ಉಳಿದ ಮಹಡಿಗಳಲ್ಲಿ ಗೋದಾಮು ಮಾಡಲಾಗಿತ್ತು. ಮೇಲಿಂದ ಸರಕು ತರಲು ಲಿಫ್ಟ್​ ಅಳವಡಿಸಲಾಗಿದೆ. ಎಂದಿನಂತೆ ಬುಧವಾರ ಸಂಜೆ 6.30ರಲ್ಲಿ ವಿಕಾಸ್, ಲಿಫ್ಟ್​ನಲ್ಲಿ ಸರಕು ತೆಗೆದುಕೊಂಡು ಕೆಳಗೆ ಇಳಿಯಬೇಕಾದರೆ ಲಿಫ್ಟ್​ ಮತ್ತು ಗೋಡೆ ನಡುವೆ ಸಿಲುಕಿಕೊಂಡಿದ್ದಾನೆ. ಎಚ್ಚೆತ್ತ ಅಂಗಡಿ ಮಾಲೀಕ ಸಂಜಯ್ ಮತ್ತು ಮೇಲ್ವಿಚಾರಕ ಬಿನಯ್ ಹರಸಾಹಸ ಪಟ್ಟು ವಿಕಾಸ್‌ನನ್ನು ಹೊರಗೆ ತೆಗೆಯುವ ವೇಳೆಗೆ ಆತ ಮೃತಪಟ್ಟಿದ್ದ.
ವಿಷಯ ತಿಳಿದ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರಗೆ ಸ್ಥಳಾಂತರ ಮಾಡಿದ್ದರು. ಯುವಕನ ತಂದೆ ಲಲ್ಲು ಕುಮಾರ್ ಗೌರ್ ಕೊಟ್ಟ ದೂರಿನ ಮೇರೆಗೆ ಅಂಗಡಿ ಮಾಲೀಕ ಸಂಜಯ್ ಮತ್ತು ಮೇಲ್ವಿಚಾರಕ ಬಿನಾಯ್ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 ಪತ್ನಿಯರ ಜತೆ ಮಲಗಲು ಹಾಸಿಗೆಗಾಗಿ 81 ಲಕ್ಷ ರೂ. ಖರ್ಚು ಮಾಡಿದ ಭೂಪ!

ಮಾವಿನ ಹಣ್ಣುಗಳನ್ನು ಕದ್ದಿದ್ದ ಪೊಲೀಸ್​ ಅಧಿಕಾರಿಗೆ ಬಿಗ್​ ಶಾಕ್​: ಸೇವೆಯಿಂದಲೇ ವಜಾ

ಪ್ರಧಾನಿ ಮೋದಿ ವಿಷ ಸರ್ಪ ಎಂಬ ಹೇಳಿಕೆ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × three =
Remember me
