ಮಂಡ್ಯ:ಇಂದು ಸಕ್ಕರೆ ನಾಡು ಮಂಡ್ಯದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ರೋಡ್ ಶೋ ಹಾಗೂ ಬಹಿರಂಗ ಸಭೆಯ ಮೂಲಕ ಯೋಗಿ ಮತಬೇಟೆ ಆಡಲಿದ್ದಾರೆ.
ಬೆಳಗ್ಗೆ 10.30ಕ್ಕೆ ಮೈಸೂರಿಗೆ ವಿಮಾನ ನಿಲ್ದಾಣಕ್ಕೆ ಸಿಎಂ ಯೋಗಿ ಬಂದಿಳಿಯಲಿದ್ದಾರೆ. ಬಳಿಕ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಬರಲಿದ್ದಾರೆ. 10.50ಕ್ಕೆ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್​ಗೆ ಯೋಗಿ ಬಂದಿಳಿಯಲಿದ್ದಾರೆ. 11 ಗಂಟೆಗೆ ರೋಡ್ ಶೋ ಆರಂಭವಾಗಲಿದೆ.ಇದನ್ನೂ ಓದಿ:ಬೆಂಗಳೂರಿನಲ್ಲಿ 14 ಅಡಿ ಉದ್ದದ ಹೆಬ್ಬಾವು ಪತ್ತೆ: ನೀರಿನ ಚಾನಲ್​ನಲ್ಲಿ ಅವಿತಿದ್ದ ಉರಗ
ಸಂಜಯ್ ವೃತ್ತದಿಂದ ಪ್ರಾರಂಭವಾಗಲಿರುವ ರೋಡ್ ಶೋ ಮಹಾವೀರ್ ವೃತ್ತದವರೆಗೆ ಸುಮಾರು 800 ಮೀಟರ್ ನಡೆಯಲಿದೆ. ರೋಡ್ ಶೋ ಬಳಿಕ ಸಿಲ್ವರ್ ಜ್ಯೂಬಿಲಿ ಪಾರ್ಕ್​ನಲ್ಲಿ ಪ್ರಚಾರ ಸಭೆ ನಡೆಯಲಿದ್ದು, ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಯೋಗಿ, ಮತಯಾಚನೆ ಮಾಡಲಿದ್ದಾರೆ.
ಮಂಡ್ಯ ಕ್ಷೇತ್ರದ ಅಭ್ಯರ್ಥಿ ಜೊತೆಗೆ ಜಿಲ್ಲೆಯ ಎಲ್ಲ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಯೋಗಿ ಮತ ಶಿಕಾರಿ ಮಾಡಲಿದ್ದಾರೆ. ಹೀಗಾಗಿ ಯೋಗಿ ಆದಿತ್ಯನಾಥ್ ಸ್ವಾಗತಕ್ಕೆ ಮಂಡ್ಯ ಬಿಜೆಪಿ ಭರ್ಜರಿ ತಯಾರಿ ಮಾಡಿಕೊಂಡಿದೆ. ಮಂಗಳ ವಾದ್ಯ, ಪೂರ್ಣಕುಂಭ ಸೇರಿದಂತೆ ಕಲಾತಂಡಗಳಿಂದ ಯೋಗಿಗೆ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ನಡೆದಿದೆ.ಇದನ್ನೂ ಓದಿ:ಬೆಂಗ್ಳೂರಲ್ಲಿ ರ‍್ಯಾಪಿಡೋ ಸವಾರನ ದುರ್ವರ್ತನೆ: ಬೈಕ್​ನಿಂದ ಜಿಗಿದು ಕಾಮುಕನಿಂದ ಪಾರಾದ ಯುವತಿ
ಒಕ್ಕಲಿಗ ಸಮುದಾಯದ ಮನಗೆಲ್ಲಲು ಬಿಜೆಪಿ ಯೋಗಿ ಅಸ್ತ್ರ ಪ್ರಯೋಗಿಸುತ್ತಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮೂಲಕ ಒಕ್ಕಲಿಗ ಮತ ಕಬಳಿಸಲು ಬಿಜೆಪಿ ಪ್ಲಾನ್ ಮಾಡಿದೆ. ಮಂಡ್ಯಕ್ಕೆ ಯೋಗಿ ಆಗಮನದಿಂದ ಬಿಜೆಪಿಯಲ್ಲಿ ಹೊಸ ಲೆಕ್ಕಾಚಾರವೊಂದು ಶುರುವಾಗಿದೆ. ಯೋಗಿ ಅಬ್ಬರದ ಪ್ರಚಾರದಿಂದ ಜೆಡಿಎಸ್ ಮತ ಬ್ಯಾಂಕ್ ಅನ್ನು ಬಿಜೆಪಿ ಕಸಿಯಲಿದೆ ಎನ್ನಲಾಗುತ್ತಿದೆ. ಆದಿಚುಂಚನಗಿರಿ ಮಠಕ್ಕೂ ಯೋಗಿ ಆದಿತ್ಯ ನಾಥ್ ಅವರಿಗೂ ಅವಿನಾಭಾವ ಸಂಬಂಧ ಇದೆ. ಯೋಗಿ ಅವರು ಉತ್ತರ ಪ್ರದೇಶದ ಗೋರಖ್​ಪುರ ಮಠದ ಮಠಾಧಿಪತಿಯಾಗಿದ್ದಾರೆ. ಗೋರಖ್ ಪುರ ಮಠ ಕೂಡ ಚುಂಚನಗಿರಿಯಂತೆ ಪರಂಪರೆ ಮಠ. ಆದಿಚುಂಚನಗಿರಿ ಮಠದ ಭಕ್ತರಲ್ಲಿದೆ ಯೋಗಿ ನಮ್ಮ ಸ್ವಾಮೀಜಿ ಎಂದೇ ಭಾವನೆ. ಯೋಗಿ ಬಂದು ಮತ ಕೇಳಿದ್ರೆ ಒಕ್ಕಲಿಗ ಸಮುದಾಯ ಬಿಜೆಪಿ ಕಡೆ ವಾಲುತ್ತದೆ ಎಂಬ ಲೆಕ್ಕಾಚಾರ. ಒಕ್ಕಲಿಗ ಮತಗಳನ್ನೇ ಟಾರ್ಗೆಟ್ ಮಾಡಿ ಇಂದು ಯೋಗಿ ಅಬ್ಬರ ಪ್ರಚಾರ ಮಾಡಲಿದ್ದಾರೆ.(ದಿಗ್ವಿಜಯ ನ್ಯೂಸ್​)
ಜಯಂ ರವಿ ಕಣ್ಣೀರು: ಬೆಂಗಳೂರಿನಲ್ಲಿ ‘ಪೊನ್ನಿಯಿನ್ ಸೆಲ್ವನ್ 2’ ಪ್ರಚಾರದ ವೇಳೆ ಘಟನೆ

ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
