ಕಾರವಾರ/ಶಿರಸಿ: ಆಕೆಗಿನ್ನೂ ಏಳು ವರ್ಷ. ಇನ್ನೂ ನಾಲ್ಕಡಿಯೂ ಬೆಳೆದಿಲ್ಲ. ಆದರೆ, ಆಕೆಗಿಂತ ಉದ್ದದ ವಿಷಕಾರಿ ಹಾವುಗಳ ಜತೆಗೆ ಸರಸವಾಡುವ ಸಾಹಸ ನೋಡಿದರೆ ಮೈ ಝುಂ ಎನ್ನುತ್ತದೆ.ಶಿರಸಿಯ ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರ ಪುತ್ರಿ 2 ನೇ ತರಗತಿಯ ಆಕರ್ಷಾ ವಿಷಕಾರಿ ಹಾವುಗಳ ಜತೆ ಕಿಂಚಿತ್ತೂ ಭಯವಿಲ್ಲದೇ ಆಟವಾಡುತ್ತಾಳೆ.ಹಾವಿನ ಜತೆ ಸ್ನೇಹ ಆಕೆಗೆ ಅಜ್ಜ, ತಂದೆಯಿಂಲೇ ಬಂದಿದೆ. ಇಬ್ಬರೂ ಶಿರಸಿಯ ಪ್ರಸಿದ್ಧ ಉರಗ ತಜ್ಞರು. ಹಾವುಗಳ ಸಂರಕ್ಷಣೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದ್ದಾರೆ.ಪ್ರಶಾಂತ ಹುಲೇಕಲ್ ಇದುವರೆಗೂ ಸಾವಿರಾರು ಹಾವುಗಳನ್ನು ಹಿಡಿದು ಜನರ ಭಯ ದೂರ ಮಾಡಿದ್ದಾರೆ. ಅದೇ ವಿದ್ಯೆ ಮಗಳಿಗೂ ರಕ್ತಗತವಾಗಿ ಬಂದಿದೆ.ಈಗಾಗಲೇ ಬಾಲಕಿ ಏಳೆಂಟು ಹಾವುಗಳನ್ನು ಹಿಡಿದು ರಕ್ಷಣೆ ಮಾಡಿದ್ದಾಳೆ. ತಂದೆ ಪ್ರಶಾಂತ ಹುಲೇಕಲ್ ಅವರ ಜತೆ ತೆರಳಿ ಸ್ವತಃ ಹಾವು ಹಿಡಿದು ಚೀಲಕ್ಕೆ ತುಂಬುತ್ತಾಳೆ. ಆಕೆಗಿಂತಲೂ ಉದ್ದದ ಸರ್ಪನಂತ ವಿಷಕಾರಿ ಹಾವುಗಳನ್ನು ಮೈಮೇಲೆ ಹಾಕಿಕೊಂಡು ಸರಸವಾಡುತ್ತಾಳೆ.ಕಚ್ಚಲು ಬಂದರೆ ಚುರುಕಾಗಿ ತಪ್ಪಿಸಿಕೊಳ್ಳುವ ಕೌಶಲವನ್ನೂ ಹೊಂದಿದ್ದಾಳೆ. ಮೊದಲು ಮನೆಯಲ್ಲೇ ಹಾವುಗಳ ಜತೆ ಆಟವಾಡುತ್ತಿದ್ದಳು. ಈಗ ನನ್ನ ಜತೆ ಹಾವು ಹಿಡಿಯಲು ಹೊರಗೂ ಬರುತ್ತಾಳೆ ಎನ್ನುತ್ತಾರೆ ಪ್ರಶಾಂತ.ಆಕರ್ಷಾ ಹಾವು ಹಿಡಿಯುವುದರಲ್ಲಿ ಮಾತ್ರವಲ್ಲ. ಹಾವಿನಂತೆ ಮೈ ಸುತ್ತಿ ಯೋಗ ಮಾಡುತ್ತಾಳೆ, ನೃತ್ಯ ಮಾಡುತ್ತಾಳೆ. ಕೆಎಚ್‌ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುವ ಆಕೆ ಓದಿನಲ್ಲೂ ಮುಂದಿದ್ದಾಳೆ ಎಂಬುದು ಹೆಮ್ಮೆಯ ಸಂಗತಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − one =
Remember me
