ಜೊಯಿಡಾ:ಬೀದರ್ ನಿಂದ ಆಗಮಿಸಿದ ಯುವ ಜೋಡಿ ಸೋಮವಾರ ಕಾಳಿ ಪಾಲಾಗಿದ್ದು, ಮಂಗಳವಾರ ಇಬ್ಬರ ಬೆಳಗ್ಗೆ ಶವ ಪತ್ತೆಯಾಗಿದೆ.
ಬೀದರ್ ನ ಕರ್ನಾಟಕ ಕಾಲೇಜ್ ನ ಬಿಎ ವಿದ್ಯಾರ್ಥಿ ಪುರುಷೋತ್ತಮ ಪಾಟೀಲ ಹಾಗೂ ಬೀದರ್ ಮೂಲದ ಕಲಬುರ್ಗಿಯಲ್ಲಿ ಕಾಲೇಜ್ ವಿದ್ಯಾಭ್ಯಾಸ ಮಾಡುತ್ತಿರುವ ರಕ್ಷಿತಾ ಎಸ್. ಮೃತರು.
ಇದನ್ನೂ ಓದಿರಿ:VIDEO| ಅತ್ತ ಅಪ್ಪ-ಅಮ್ಮ ಯುಗಾದಿ ಶಾಪಿಂಗ್; ಇತ್ತ ಕಾರಿನಲ್ಲಿ ಉಸಿರುಗಟ್ಟಿ ಮಗು ನರಳಾಟ
ಸೋಮವಾರ ದಾಂಡೇಲಿಯಿಂದ ಆಟೋ ರಿಕ್ಷಾ ಮೇಲೆ ಬಂದಿದ್ದ ಜೋಡಿ ಅಂಬಿಕಾ ನಗರದ ಸೂಪಾ ಅಣೆಕಟ್ಟೆಯ ಸಮೀಪ ಇರುವ ಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದರು. ಇಬ್ಬರೂ ಆಯ ತಪ್ಪಿ ಕಾಳಿ ನದಿಗೆ ಬಿದ್ದಿದ್ದರು. ಸೇತುವೆ ಮೇಲೆ ಸಿಕ್ಕ ಯುವತಿಯ ಮೊಬೈಲ್ ಆಧಾರದ ಮೇಲೆ ಆಕೆಯ ಮನೆಗೆ ಕರೆ ಮಾಡಿ ಗುರುತು ತಿಳಿದುಕೊಳ್ಳಲಾಗಿತ್ತು.

ಮಂಗಳವಾರ ಬೆಳಗ್ಗೆ ಫ್ಲೈ ಕ್ಯಾಚರ್ ಎಂಬ ರ್ಯಫ್ಟಿಂಗ್ ತಂಡದ ಸದಸ್ಯರು ಇಬ್ಬರ ಶವಗಳನ್ನು ಕಾಳಿ ನದಿಯಿಂದ ಹುಡುಕಿ ಹೊರ ತೆಗೆದಿದ್ದಾರೆ. ರಾಮನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮರ್ಸ್‌ ಪದವೀಧರರಿಗೆ ಭರ್ಜರಿ ಅವಕಾಶ: ಆರ್ಥಿಕ ವ್ಯವಹಾರ ಇಲಾಖೆಯಲ್ಲಿ 34 ಹುದ್ದೆಗಳು

ಸಿನಿ ಯುಗಾದಿ: ತಾರೆಯರ ಮನದ ತುಂಬ ಹರುಷದ ಹೂರಣ

ಭಾವ ಕರೆದನೆಂದು ಆತನ ಮನೆಗೆ ಹೋದ ಇಂಜಿನಿಯರ್​ ವಿದ್ಯಾರ್ಥಿನಿಗೆ ಕಾದಿತ್ತು ಬಿಗ್​ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 9 =
Remember me
