ಬೆಂಗಳೂರು:“ಭಾರತೀಯ ರೈಲ್ವೆ ಕೇಟರಿಂಗ್​ ಮತ್ತು ಟೂರಿಸಂ ಕಾಪೋರ್ರೇಷನ್​ ಲಿಮಿಟೆಡ್​’ (ಐಆರ್​ಸಿಟಿಸಿ) ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಆ.22 ತನ್ನ ಗ್ರಾಹಕರಿಗೆ 11 ದಿನಗಳ ಉತ್ತರಾಖಂಡ ಪ್ಯಾಕೇಜ್​ ಪ್ರವಾಸ ಆಯೋಜಿಸಿದೆ.
ಬೆಂಗಳೂರಿನಿಂದ ಆ.22ರಂದು ರೈಲು ಹೊರಡಲಿದ್ದು, ಪ್ರವಾಸಿಗರು ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿಯಿಂದ ರೈಲು ಹತ್ತಬಹುದಾಗಿದೆ. ನೈನಿತಾಲ್​& ನೈನಾ ದೇವಿ ದೇವಸ್ಥಾನ, ಕೈಂಚಿ ಧಾಮ್​ ದೇವಸ್ಥಾನ, ಅಲ್ಮೋರಾ& ನಂದಾ ದೇವಿ ದೇವಸ್ಥಾನ, ಕಸರ್​ ದೇವಿ ದೇವಸ್ಥಾನ, ಜಾಗೇಶ್ವರ್​ ಧಾಮ್​, ಗೋಲು ಚಿತೈ ದೇವಸ್ಥಾನ, ಕಥರ್ಮಲ್​ ದೇವಸ್ಥಾನ, ಕೌಸನಿ& ಬೈಜನಾಥ್​ ದೇವಸ್ಥಾನ, ಬಾಗೇಶ್ವರ್​ ದೇವಸ್ಥಾನ ಭೇಟಿ ನೀಡುವ ಸ್ಥಳಗಳಾಗಿವೆ. ಒಬ್ಬರಿಗೆ ಸ್ಟಾ$ಂಡರ್ಡ್​ 28,020 ರೂ. ಹಾಗೂ ಡಿಲಕ್ಸ್​ 35,340 ರೂ. ಶುಲ್ಕ ನಿಗದಿಪಡಿಸಲಾಗಿದೆ.
7 ದಿನಗಳ ಶ್ರೀಲಂಕಾ, ಭೂತಾನ್​ ಪ್ರವಾಸಐಆರ್​ಸಿಟಿಸಿ ಆ.21ರಂದು ಶ್ರೀಲಂಕಾಗೆ ಪ್ಯಾಕೇಜ್​ ಪ್ರವಾಸ ಆಯೋಜಿಸಿದೆ. 7 ದಿನಗಳ ಪ್ರವಾಸ ಇದಾಗಿದ್ದು, ಒಬ್ಬರಿಗೆ 65,650 ರೂ. ನಿಗದಿಪಡಿಸಿದೆ. ಕೊಲಂಬೊ, ದಂಬುಲ್ಲಾ, ಟ್ರಿಂಕೋಮಲೀ, ಕ್ಯಾಂಡಿ, ನೂವಾರ ಎಲಿಯ ಶ್ರೀಲಂಕಾದಲ್ಲಿ ಭೇಟಿ ನೀಡುವ ಸ್ಥಳಗಳಾಗಿವೆ. ಭೂತಾನ್​ ಪ್ರವಾಸವು ಸೆ.5ರಿಂದ ಪ್ರಾರಂಭವಾಗುತ್ತಿದ್ದು, ಪಾರೋ, ಪುನಾಖಾ ಹಾಗೂ ಥಿಂಪು ಸ್ಥಳಗಳನ್ನು ಒಳಗೊಂಡಿವೆ. ಪ್ಯಾಕೇಜ್​ ಪ್ರವಾಸ ಇದಾಗಿದ್ದು, ಒಬ್ಬರಿಗೆ 78,500 ಶುಲ್ಕ ಇರಲಿದೆ.
ಪ್ಯಾಕೇಜ್​ನಲ್ಲಿ ಟಿಕೆಟ್​ ದರ, ವಸತಿ, ಉಪಾಹಾರ ಪ್ರೇಕ್ಷಣಿಯ ಸ್ಥಳ ವೀಸಲು ವಾಹನ ವ್ಯವಸ್ಥೆ, ಪ್ರವಾಸ ಮಾರ್ಗದರ್ಶಿ, ಪ್ರಯಾಣ ವಿಮೆ ಸೌಕರ್ಯ ಒಳಗೊಂಡಿದೆ. ಬುಕಿಂಗ್​ಗೆ ವೆಬ್​ಸೈಟ್​: ಐಆರ್​ಸಿಟಿಸಿ ವೆಬ್​ಸೈಟ್ ಪರಿಶೀಲಿಸಿ. ದೂ.ಸಂ.: 9003140710/708 (ಬೆಂಗಳೂರು), 85959 31294 (ಮೈಸೂರು), 85959 31293/291 (ಹುಬ್ಬಳ್ಳಿ) ಸಂಪರ್ಕಿಸಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
