ಬೆಂಗಳೂರು:ಚುನಾವಣಾ ಪೂರ್ವದಲ್ಲಿ ಗುತ್ತಿಗೆದಾರರು ಬಾಕಿ ಹಣ ಇನ್ನೂ ಬಂದಿಲ್ಲ ಎಂದು ತಕರಾರು ತೆಗೆದಿದ್ದರು. ಅದರೊಂದಿಗೆ 40% ಕಮಿಷನ್ ಆರೋಪವೂ ಬಿಜೆಪಿಗೆ ಮುಳುವಾಗಿತ್ತು. ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್‍ ಮುಂದೆ ಇದೀಗ ಗುತ್ತಿಗೆದಾರರಿಗೆ ನೀಡಬೇಕಾಗಿರುವ ಹಣ ಭೂತದ ರೂಪದಲ್ಲಿ ಮತ್ತೆ ಎದುರಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, “ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೇವೆ” ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದನ್ನು ಈ ಸಂದರ್ಭ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ:ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ: ಸರ್ಕಾರದ ವಿರುದ್ಧ ಕೆಂಪಣ್ಣ ಕಿಡಿ
ಇದೀಗ ವಿ ಸೋಮಣ್ಣ, ಸುದ್ದಿಗೋಷ್ಟಿಯಲ್ಲಿ ಗುತ್ತಿಗೆದಾರರ ಸಮಸ್ಯೆ ಕುರಿತಾಗಿ ಮಾತನಾಡಿದ್ದು, ಕೆಲ ವಿಚಾರಗಳ ಬಗ್ಗೆ ಕಿಡಿ ಕಾರಿದ್ದು ಜತೆಗೆ ಸರ್ಕಾರ ತನಿಖೆ ನಡೆಸಿ ಹಣ ಬಿಡುಗಡೆ ಮಾಡುತ್ತೇವೆ ಎನ್ನುವುದನ್ನು ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿ ಸೋಮಣ್ಣ, “ಚುನಾವಣೆ ‌ಬಳಿಕ‌ ಕೆಲವು ಕಹಿ ಘಟನೆಗಳಿಂದ ಸ್ವಯಂಕೃತ ಅಪಚಾರ ಎಸಗಿದ ನೋವು‌ ಕಾಡುತ್ತಿತ್ತು. ನಾನು ಕಳೆದ 40 ವರ್ಷಗಳಿಂದ ಈ ನಗರದಲ್ಲಿ ಹಲವು ಕೆಲಸಗಳನ್ನು ಮಾಡಿದ್ದೇನೆ.
ಇದನ್ನೂ ಓದಿ:20 ಸಾವಿರ ಕೋಟಿ ರೂ. ಬಿಲ್​ ಬಾಕಿ ಇರುವ ಹಿನ್ನೆಲೆ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದ ಗುತ್ತಿಗೆದಾರರು
ನಾನಾಗಿ ‌ನಾನೇ ನನ್ನ‌ಕಾಲಿನ ಮೇಲೆ ಕಲ್ಲು‌ ಹಾಕೊಂಡಿದೀನಿ. ಸರ್ಕಾರಗಳು ಬರ್ತಾವೆ, ‌ಹೋಗ್ತವೆ.. ಆದ್ರೆ ‌ನಾವು ಪಾರದರ್ಶಕ ವಾಗಿ‌ ಕೆಲಸ ಮಾಡಬೇಕಿದೆ. ಎಲ್ಲಾ ಗುತ್ತಿಗೆದಾರರು ಪ್ರಾಮಾಣಿಕದಾರರು ಅಂತಾ ನೀವೇ ಹೇಳ್ತಿದ್ರಿ. ಈಗ ಗುತ್ತಿಗೆದಾರರು ಅಪ್ರಮಾಣಿಕರಾದ್ರಾ? ಈ ಸರ್ಕಾರ ಕೈಗೊಂಡಿರೋ ಕ್ರಮ ಸ್ವಾಗತಿಸ್ತೇನೆ.. ಪಾರದರ್ಶಕ ವಾಗಿ ಮಾಡ್ತೇವೆ ಅಮಥಾ ಡಿಕೆಶಿ ಹೇಳಿದಾರೆ. ಅದಕ್ಕೆ ನನ್ನ ತಕರಾರಿಲ್ಲ. ಹಾಗೆಯೇ ಹಿಂದೆ ಎಸ್ಎಂ‌ ಕೃಷ್ಣ ಕಾಲದಲ್ಲೂ ತನಿಖೆಗೆ ಹೋಗಿವೆ.
ಅವುಗಳನಗನ್ನೂ ತನಿಖೆ ಮಾಡಿ. ನಾನು ಡಿಕೆಶಿ ಅವರಲ್ಲಿ ಮನವಿ ಮಾಡ್ತೇನೆ. ನನ್ನ ಕ್ಷೇತ್ರದಲ್ಲೂ ತನಿಖೆ ಮಾಡಿ. ಪರಿಶೀಲನೆ ಮಾಡಿ. ತಪ್ಪಿದರೆ ತಲೆಬಾಗುತ್ತೇ‌ನೆ. ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಬೆಂಗಳೂರಿಗೆ 6 ಸಾವಿರ ಕೋಟಿ ರೂ. ಕೊಟ್ಟಿದ್ರು. ಡಿಸೆಂಬರ್ ನಲ್ಲಿ‌ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು ಎಂದಿದ್ದರು. ಆದ್ರೆ ಕಾರಣಾಂತರದಿಂದ ಮಾಡಲು ಆಗಲಿಲ್ಲ” ಎಂದು ತಮ್ಮ ಸರ್ಕಾರದ ಅವಧಿಯಲ್ಲಿ ನಡೆದಿದ್ದನ್ನು ನೆನೆಸಿಕೊಂಡಿದ್ದಾರೆ.
ಇದನ್ನೂ ಓದಿ:ಮತ್ತೆ ಸದ್ದು ಮಾಡಲಿದೆ ಕಮಿಷನ್ ಸುದ್ದಿ; ಗುತ್ತಿಗೆದಾರರ ಸಂಘದಿಂದ ನಾಡಿದ್ದು ಭಾರಿ ಪ್ರತಿಭಟನೆ
ಗುತ್ತಿಗೆದಾರರ ಸಂಕಷ್ಟದ ಬಗ್ಗೆ ಮಾತನಾಡಿದ ವಿ.ಸೋಮಣ್ಣ, “ಇವತ್ತು ನೂರಾರು ಕುಟುಂಬಗಳು ಒದ್ದಾಡುತ್ತಿವೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದು ಕೂಲಿ ಮಾಡ್ತಿದಾರೆ. ಗುತ್ತಿಗೆದಾರರಿಗೆ ಕಾನೂನಿನ ಅಡಿಯಲ್ಲಿ ಹಣ‌ ಬಿಡುಗಡೆ‌ ಮಾಡಿ. ನಿಮ್ಮ ದೂರದೃಷ್ಟಿಗೆ ಅಭಿನಂದನೆ.
ಆದರೆ, ಎಲ್ಲಾ ಕಡೆಯೂ ಬಿಜೆಪಿ ಶಾಸಕರಿಲ್ಲ. ಕೆಲಸ ಮಾಡಿದವರ ಹೊಟ್ಟೆ ಮೇಲೆ ಹೊಡೆಯೋದು ಎಷ್ಟು ಸರಿ? ಎನ್ ಕ್ವಯರಿ‌ ನೆಪದಲ್ಲಿ ಎಲ್ಲರನ್ನೂ ಕೆಟ್ಟವರು ಅನ್ನಬೇಡಿ. ಎರಡು ತಿಂಗಳ ಹಿಂದೆ ನೀವೆ ನಮ್ಮನ್ನು ಜರಿದಿದ್ದೀರಿ. ನೀವು ಪಾರದರ್ಶಕವಾಗಿ ಪಡೆದುಕೊಳ್ಳಿ. ಹಿಂದೆ ಬಿಡುಗಡೆಯಾದ ಹಣವನ್ನು ನೀವು, 20%, ಇಡ್ಕೋತೀರೋ.‌ 30% ಇಡ್ಕೋತಿರೋ? ಗುತ್ತಿಗೆದಾರರು ಬಿಜೆಪಿ ಏಜೆಂಟ್‍ಗಳಲ್ಲ. ಬಿಲ್‍ಗಳು ಪಾವತಿಗೆ ಬಂದು ನಿಂತಿವೆ. ಅವನ್ನು‌ ಕೊಡಿ. ನೀವು ರಾಜ್ಯದ ‌ಉಪಮುಖ್ಯಮಂತ್ರಿಗಳು. ‌ಕೇವಲ ಕಾಂಗ್ರೆಸ್‍ನ ಉಪ ಮುಖ್ಯಮಂತ್ರಿ ಅಲ್ಲ. 20% , 30% ಇಡ್ಕೊಳ್ಳಿ‌‌.. ನಾನೇನು‌ ಬೇಡ ಅನ್ನಲ್ಲ. ಒಟ್ಟಿನಲ್ಲಿ ಹಣ‌ ಬಿಡುಗಡೆ ಮಾಡಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೆಂಪಣ್ಣ ಅಕ್ರಮಗಳಲ್ಲಿ ಅಕ್ರಮಗಳ ಸರದಾರ: ಮಂಡ್ಯ ಬಿಲ್ಡರ್ ಅಸೋಸಿಯೇಷನ್ ಅಧ್ಯಕ್ಷ ನೃಪತುಂಗ ವಾಗ್ದಾಳಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
