ಮಂಡ್ಯ:ಮುಖ್ಯಮಂತ್ರಿಯಾದ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಕ್ಕೆ ಗರಂ ಆಗಿರುವ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡರಿಗೆ ಅವರದೇ ಪಕ್ಷದ ಹಿರಿಯ ಮುಖಂಡ ಹಾಗೂ ವಸತಿ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಸೋಮಣ್ಣ ಅವರು ಪ್ರೀತಮ್ ಗೌಡ ಇನ್ನು ಹುಡುಗ. ತುಂಬಾ ಬೆಳೆಯಬೇಕಾದವನು. ಅವನ ಇತಿಮಿತಿಯಲ್ಲಿ ನೋಡಬೇಕಾಗುತ್ತದೆ. ಒಂದು ಸಾರಿ ಎಂಎಲ್ಎ ಆದತಕ್ಷಣಕ್ಕೆ ದೇವರಲ್ಲ. ನಾನು ಸಚಿವ ಆಗಿದ್ದಾಗ ಪ್ರೀತಮ್ ಗೌಡ ಹುಟ್ಟೇ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರ ಕುಟುಂಬಕ್ಕೆ 50 ವರ್ಷ ರಾಜಕೀಯ ಇತಿಹಾಸವಿದೆ. ರಾಷ್ಟ್ರದ ಪ್ರಧಾನಿಗಳಾಗಿದ್ದವರು. ನಾನು ಕೂಡ ದೇವೇಗೌಡರ ಮನೆ ಹೋಗಿದ್ದೆ. ಇದರಲ್ಲಿ ರಾಜಕಾರಣ ಏನಿಲ್ಲ. ಇಂತಹ ಮಾತುಗಳನ್ನು ಪ್ರೀತಂ ಗೌಡ ಬಿಡಬೇಕು. ಈ ರೀತಿಯ ಮಾತುಗಳನ್ನಾಡುವುದು ಪ್ರೀತಂ ಗೌಡಗೆ ಶೋಭೆ ತರುವುದಿಲ್ಲ ಎನ್ನುವ ಮೂಲಕ ಪ್ರೀತಂ ಗೌಡರಿಗೆ ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್​)
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡವುದಿಲ್ಲ ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣಗಳು..!

ಲವ್ ಯೂ ರಚ್ಚು ಸಿನಿಮಾ ದುರಂತ ಪ್ರಕರಣ: ಮೂವರು ಆರೋಪಿಗಳ ಬಂಧನ, ಜಮೀನು ಮಾಲೀಕ ಪರಾರಿ

ಸ್ಟಾರ್ ಆಗಿ ಬದುಕಬಾರದು; ಅಣ್ಣಾವ್ರ ಮಾತು ನೆನಪಿಸಿದ ಎಸ್. ನಾರಾಯಣ್

Sign in to your account
Please enter an answer in digits:9 − 7 =
Remember me
