ಬೆಂಗಳೂರು:ಬಿಜೆಪಿ ಇನ್ನೂ ಮೊದಲನೇ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ನಡುವೆ ಸಚಿವ ವಿ ಸೋಮಣ್ಣ ಹೈಕಮಾಂಡ್​ ಜತೆಗೆ ಚರ್ಚೆ ನಡೆಸಲು ಬೆಂಗಳೂರಿಗೆ ಹೋಗಿದ್ದರು. ಈ ಸಂದರ್ಭ ಅವರು ಅರುಣ್​ ಸೋಮಣ್ಣ ಪರವಾಗಿ ಬ್ಯಾಟಿಂಗ್​ ಮಾಡಿದ್ದು ಅದಕ್ಕಾಗಿ ತಮ್ಮ ಟಿಕೆಟನ್ನೂ ಬಿಟ್ಟು ಕೊಡಲಿದ್ದಾರಾ ಎನ್ನುವ ಪ್ರಶ್ನೆಯೂ ಮೂಡಿದೆ.
ಇದೀಗ ದೆಹಲಿಯಿಂದ ಸಚಿವ ವಿ ಸೋಮಣ್ಣ ವಾಪಾಸ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ಗೋವಿಂದರಾಜ ನಗರ, ಚಾಮರಾಜನಗರ ಟಿಕೆಟ್ ಕೇಳಿದ್ದು ಬಿಜೆಪಿ ಹೈಕಮಾಂಡ್​ ಮಾತ್ರ ಬೇರೆಯದೇ ಯೋಜನೆಗಳನ್ನು ಹಾಕಿಕೊಂಡಿರುವಂತೆ ಕಾಣುತ್ತಿದೆ. ಸಚಿವ ಸೋಮಣ್ಣಗೆ ವರುಣಾ ನಿಲ್ಲುವಂತೆ ಬಿಜೆಪಿ ಹೈ ಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಈ ಮಾಹಿತಿ ದಿಗ್ವಿಜಯ ಚ್ಯಾನಲ್​ಗೆ ಲಭಿಸಿದೆ.
ವರುಣಾ ಕ್ಷೇತ್ರಕ್ಕೆ ನನಗೆ ಟಿಕೆಟ್ ಬೇಡ ಎಂದು ಹೈ ಕಮಾಂಡ್ ನಾಯಕರಿಗೆ ವಿ ಸೋಮಣ್ಣ ಮನವಿ ಮಾಡಿದ್ದು ಪುತ್ರ ಅರುಣ್ ಸೋಮಣ್ಣ ರಾಜಕೀಯ ಭವಿಷ್ಯಕ್ಕಾಗಿ ಸೋಮಣ್ಣ ಕಸರತ್ತು ಮಾಡುತ್ತಿದ್ದಾರೆ ಎನ್ನಲಾಗಿದೆ. ಸಚಿವ ಸೋಮಣ್ಣ, ಅರುಣ್ ಸೋಮಣ್ಣಗೆ ಗುಬ್ಬಿ ಕ್ಷೇತ್ರದ ಟಿಕೆಟ್ ಸಿಗುವಂತೆ ಮಾಡಲು ನಾನಾ ಕಸರತ್ತು ನಡೆಸುತ್ತಿದ್ದು ಹೈಕಮಾಂಡ್​ ಬಳಿ “ನನಗೆ ಟಿಕೆಟ್ ಕೊಡದಿದ್ರೂ ನನ್ನ ಮಗನಿಗೆ ಟಿಕೆಟ್ ಕೊಡಿ” ಎಂದು ಹೇಳಿದ್ದಾರಾ ಎನ್ನುವ ಪ್ರಶ್ನೆ ಕೂಡ ಎದ್ದಿದೆ.
ಸದ್ಯ ದೆಹಲಿಯಿಂದ ಬಂದಿಳಿದಿರುವ ಸಚಿವ ಸೋಮಣ್ಣ ತುಮಕೂರು ಜಿಲ್ಲೆಯತ್ತ ತೆರಳಲಿದ್ದಾರೆ. ಅವರು ನೊಣವಿನಕೆರೆ ಕಾಡು ಸಿದ್ದೇಶ್ವರ ಸ್ವಾಮಿ ಬಳಿ ಹೋಗಿ ಆಶೀರ್ವಾದ ಪಡೆಯಲಿದ್ದಾರೆ. ನಂತರ ಇಂದು ಸಂಜೆ ಸಿದ್ದಗಂಗಾ ಮಠಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 4 =
Remember me
