ತುಮಕೂರು:ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣ ಮತ್ತು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಹೀನಾಯವಾಗಿ ಸೋಲುಂಡ ಮಾಜಿ ಸಚಿವ ವಿ. ಸೋಮಣ್ಣ ಅವರು ಇದೀಗ ನೀಡಿರುವ ಹೇಳಿಕೆಯೊಂದು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವಿ. ಸೋಮಣ್ಣ, ಶ್ರೀಗಳ ಮುಂದೆ ವಿಧಾನಸಭಾ ಚುನಾವಣೆಯ ಸೋಲಿನ ನೋವು ತೋಡಿಕೊಂರು. ಸ್ಥಳೀಯ ಮುಖಂಡರೊಬ್ಬರು ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟು ಹೋಗಬಾರದಿತ್ತು ಎಂದು ಮಾತು ಆರಂಭಿಸಿದಾಗ ಶ್ರೀಗಳ ಎದುರು ಅಳಲು ತೋಡಿಕೊಂಡ ಸೋಮಣ್ಣ, ಹೌದು, ಅದೇ ನಾನು ಮಾಡಿದ ಮಹಾ ಅಪರಾಧ ಎಂದರು.
ಮಾತು ಮುಂದುವರಿಸಿದ ವಿ. ಸೋಮಣ್ಣ, ಅಮಿತ್ ಷಾ ಬಂದು ಎರಡೂವರೆ ಗಂಟೆ ಮನೆಯಲ್ಲಿ ಕುತ್ಕೊಂಡ್ ಬಿಟ್ಟರು. ಅವರೇ ನಿಂತುಕೊಳ್ಳಲು ಹೇಳಿದಾಗ ನಾನೇನು ಮಾಡಲಿ ಹೇಳಿ ಸ್ವಾಮೀಜಿ! ನಾನು ಇಲ್ಲ ಅಂತಾ ಹೇಳಿದೆ. ಆದರೆ, ಪ್ರಧಾನಿ ಮೋದಿ ನನ್ನನ್ನು ದೆಹಲಿಗೆ ಕರೆಸಿ, ನಾಲ್ಕು ದಿನ ಅಲ್ಲೇ ಇಟ್ಟುಕೊಂಡರು. ನೀನು ನಿಲ್ಲು ಅಂತ ಹೇಳಿದಾಗ ಏನ್ ಮಾಡಬೇಕು ಎಂದು ಸಿದ್ದಗಂಗಾ ಶ್ರೀಗಳ ಎದುರು ವಿ. ಸೋಮಣ್ಣ ಸೋಲಿನ ನೋವು ತೋಡಿಕೊಂಡರು.

ಕುಟುಂಬ ಸಮೇತ ಭೇಟಿಮಠದ ಭೇಟಿಯ ವೇಳೆ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸೋಮಣ್ಣ ಅವರು ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ಚರ ಸ್ವಾಮೀಜಿಗಳ ದರ್ಶನ ಪಡೆದರು. ಪತ್ನಿ ಶೈಲಜಾ ಸೋಮಣ್ಣ ಹಾಗೂ ಪುತ್ರ ಅರುಣ್ ಸೋಮಣ್ಣ ಜತೆ ಆಶೀರ್ವಾದ ಪಡೆದರು. ಡಿಸೆಂಬರ್ 6 ರಂದು ಗುರುಭವನ ಲೋಕಾರ್ಪಣೆ ಸಮಾರಂಭ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಲು ಸಿದ್ದಗಂಗಾ ಮಠಕ್ಕೆ ಸೋಮಣ್ಣ ಅವರು ಕುಟುಂಬ ಸಮೇತ ಆಗಮಿಸಿದರು.
ಪುಣ್ಯ ಸಿಕ್ಕಿದೆಸಿದ್ದಗಂಗಾ ಮಠದ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ಸಿದ್ದಗಂಗಾ ಮಠಕ್ಕೆ ಬರೋಕೆ ಇದು ಭೇಟಿಯಲ್ಲ. ನಾನೊಬ್ಬ ಶ್ರೀ ಮಠದ ಭಕ್ತ. ನನಗೂ ದೊಡ್ಡ ಗುರುಗಳಿಗೂ ಅವಿನಾಭಾವ ಸಂಬಂಧವಿದೆ. 44 ವರ್ಷಗಳ ಸಂಬಂಧ ನನ್ನದು. ಶ್ರೀ ಮಠದಲ್ಲಿ ಅಶಿರ್ವಾದ ಪಡೆದವನು ನಾನು. ನಮ್ಮ ಕುಟುಂಬ ನನಗೆ ಮಾಹಿತಿ ನೀಡದೆ ಗುರುಭವನ ನಿರ್ಮಿಸಿದೆ. ಇವತ್ತೇ ಮೊದಲು ನಾನು ಈ ಗುರುಭವನವನ್ನು ನೋಡುತ್ತಿರುವುದು. ಈ ಹಿಂದೆ ಇದ್ದಂಥಾ ಗುರುಗಳು ಆಶಯ ವ್ಯಕ್ತಪಡಿಸಿದ್ರು ಅಂತ ಕಾಣಿಸುತ್ತದೆ. ಇವತ್ತು ನಮ್ಮ ಮನೆಯವರೆಲ್ಲ ಬಂದು ಶ್ರೀಗಳ ಬಳಿ ವಿನಂತಿ ಮಾಡಿದ್ದೇವೆ‌. ಅದಕ್ಕೆ ಅನುಮತಿ ಕೊಟ್ಟು ಇದಕ್ಕೆಲ್ಲ ವ್ಯವಸ್ಥೆ ಮಾಡಿದ್ದಾರೆ. ಡಿಸೆಂಬರ್ 6ರಂದು ಗುರುಭವನ ಲೋಕಾರ್ಪಣೆ ಮಾಡುತ್ತೇವೆ. ಶ್ರೀ ಮಠದಲ್ಲಿ ಗುರುಭವನ ನಿರ್ಮಾಣ ಮಾಡುವ ಪುಣ್ಯ ಸಿಕ್ಕಿದೆ ಎಂದು ಹೇಳಿದರು.
ರಾಜಕೀಯ ಲೇಪನ ಬೇಡಯಾವುದೇ ಮಠದಲ್ಲಿ ಕಾರ್ಯಕ್ರಮ ಮಾಡುವಾಗ ಆ ಭಾಗದ ಜನಪ್ರತಿನಿಧಿಗಳು ಯಾರು ಇರ್ತಾರೆ ಮತ್ತು ಅವರನ್ನೇ ಕರೆಯುವುದು ಸಂಪ್ರದಾಯ. ಅದೇ ರೀತಿ ನಾನು ಯಾವುದೇ ಕಾರ್ಯಕ್ರಮ ಮಾಡಿದ್ರು ನಾನು ಅಹ್ವಾನ ಮಾಡಿಕೊಂಡು ಬಂದಿದ್ದೇನೆ. ಡಿ‌. 6 ರಂದು ನಡೆಯುವ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಈ ಭಾಗದ ಜನ ಪ್ರತಿನಿಧಿಗಳನ್ನು ಆಹ್ವಾನಿಸಿದ್ದೇನೆ. ಸಚಿವರಾದ ರಾಜಣ್ಣ ಮತ್ತು ಪರಮೇಶ್ವರ್ ಇರುತ್ತಾರೆ. ಅಲ್ಲದೆ, ಸಂಸದರು, ಇಬ್ಬರು ಶಾಸಕರು ಹಾಗೂ ಇಬ್ಬರು ಎಂಎಲ್​ಸಿ ಸಹ ಇರುತ್ತಾರೆ. ಅವರಿಗೆಲ್ಲ ಅಹ್ವಾನ ಮಾಡಿದ್ದೇನೆ. ಅದರಲ್ಲಿ ರಾಜಕೀಯ ಮಾಡುವಷ್ಟು ಕೀಳು ಮಟ್ಟಕ್ಕೆ ನಾನು ಇಳಿಯಲ್ಲ. ಶ್ರೀಮಠ ಪವಿತ್ರ ಪುಣ್ಯಕ್ಷೇತ್ರ. ಪಕ್ಷದವರು ಇರಬಹುದು ಅಥವಾ ಹೊರಗಡೆಯವರು ಇರಬಹುದು ಎಲ್ಲರಿಗೂ ಸಮಾನತೆ ಕೊಟ್ಟಿರುವ ಮಠ ಇದು. ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೇಡ ಎಂದರು.
ವಿಜಯೇಂದ್ರ ವಿರುದ್ಧ ಪರೋಕ್ಷ ಅಸಮಾಧಾನನನಗೆ ರಾತ್ರಿ ಒಂದು ಸಂದೇಶ ಬಂದಿದೆ. 7,8,9 ಅಥವಾ 10ರೊಳಗೆ ದೆಹಲಿಗೆ ಹೋಗಿ ನಮ್ಮ ಭಾವನೆ ವ್ಯಕ್ತಪಡಿಸುತ್ತೇವೆ. ಯತ್ನಾಳ, ಅರವಿಂದ ಲಿಂಬಾವಳಿ, ಬೆಲ್ಲದ, ರಮೇಶ್ ಜಾರಕಿಹೊಳಿ ಸೇರಿದಂತೆ‌ ಐದಾರು ಜನ ಸೇರಿ ಹೈಕಮಾಂಡ್​ಗೆ ಭೇಟಿ ಮಾಡಿ ನಮ್ಮ ನೋವು ಹೇಳುತ್ತೇವೆ. ನಾವು ಹಿರಿಯರು, ನಮ್ಮದೇ ಆದ ಅನುಭವ, ಸೇವೆ ಇದೆ ಮತ್ತು ಆಲೋಚನೆಯೂ ಇದೆ. ಅದನ್ನೆಲ್ಲ ಹೈಕಮಾಂಡ್ ಮುಂದೆ ಹೇಳುತ್ತೇವೆ. ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡೋದು, ಇಲ್ಲದೇ ಇದ್ದರೆ ಏನೂ ಆಗಿಲ್ಲ ಅಂತಾ ಸುಮ್ಮನಿರುತ್ತಾಳೆ. ಎಲ್ಲವೂ ನನ್ನದೇ ಅನ್ನೊದು ಸರಿಯಲ್ಲ‌. ಹಾಗಾಗಿ ನಮ್ಮ ನೋವನ್ನು ಹೈಕಮಾಂಡ್​ಗೆ ಹೇಳುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿರೋದಕ್ಕೆ ವಿ. ಸೋಮಣ್ಣ ಅಸಮಾಧಾನ ಹೊರಹಾಕಿದರು.
9.5 ವರ್ಷಗಳಲ್ಲಿ 40,000 KM ರೈಲ್ವೆ ವಿದ್ಯುದೀಕರಣ: ಪ್ರಧಾನಿ ಮೋದಿ ನಾಯಕತ್ವ ಹೊಗಳಿದ ಕೇಂದ್ರ ರೈಲ್ವೆ ಸಚಿವ

ಹುಟ್ಟುಹಬ್ಬದ ಆಚರಣೆಗೆ ದುಬೈಗೆ ಕರೆದೊಯ್ಯಲಿಲ್ಲ ಅಂತ ತಾಳಿ ಕಟ್ಟಿದ ಗಂಡನನ್ನೇ ಕೊಂದ ಪತ್ನಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 7 =
Remember me
