ಬೆಂಗಳೂರು:ಡ್ರಗ್ಸ್​ ಕೇಸ್​ನಲ್ಲಿ ಸ್ಯಾಂಡಲ್​ವುಡ್​ನ ‘ಮಾದಕ’ ನಟಿ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ ಅರೆಸ್ಟ್ ಆಗಿದ್ದಾರೆ. ಇದು ಸಿನಿಮಾ ರಂಗ ಮಾತ್ರವಲ್ಲ, ರಾಜ್ಯ ರಾಜಕೀಯ ಕ್ಷೇತ್ರದಲ್ಲೂ ಭಾರೀ ಸಂಚಲನ ಮೂಡಿಸಿದೆ. ಈ ಕೇಸ್​ನಲ್ಲಿ ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳ ಮಕ್ಕಳ ಹೆಸರೂ ಹೊರಬರುವ ಸಾಧ್ಯತೆಯಿದ್ದು, ಹಲವರಲ್ಲಿ ಈಗಾಗಲೇ ಢವಢವ ಶುರುವಾಗಿದೆ.
ನಟಿ ರಾಗಿಣಿ ದ್ವಿವೇದಿ, ಈ ಹಿಂದೆ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಬಗ್ಗೆಯೂ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ಕುರಿತು ಮೊನ್ನೆಯಷ್ಟೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಗೋವಿಂದ ಕಾರಜೋಳ, ‘ನನಗೆ ರಾಗಿಣಿ ಯಾರೆಂದು ಗೊತ್ತಿಲ್ಲ. ಆದರೆ, ಯಾರೇ ತಪ್ಪು ಮಾಡಿದ್ರೂ, ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಬದ್ಧವಾಗಿದೆ’ ಎಂದಿದ್ದರು. ಇದೇ ವಿಚಾರವಾಗಿ ಬುಧವಾರ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ, ನಂಗೆ ಗೊತ್ತಿರೋದು ನನ್ನ ಶ್ರೀಮತಿ ಮಾತ್ರ’ ಎಂದಿದ್ದಾರೆ.
ಇದನ್ನೂ ಓದಿರಿvideo/ ನಟಿ ಸಂಜನಾ ಬಂಧನ ಬೆನ್ನಲ್ಲೇ ವಿಡಿಯೋವೊಂದು ವೈರಲ್​
ಡ್ರಗ್ಸ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ‘ನಾನು ಒಂದು ಸಿನಿಮಾ ನೋಡಿ 25 ವರ್ಷ ಆಯ್ತು. ಉಮಾ ಟಾಕೀಸ್​ನಲ್ಲಿ ಬಂಧನ ಸಿನಿಮಾವನ್ನು ನನ್ನ ಪತ್ನಿಯ ಜತೆ ನೋಡಿದ್ದೆ. ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ, ನಂಗೆ ಗೊತ್ತಿರೋದು ನನ್ನ ಶ್ರೀಮತಿ ಮಾತ್ರ’ ಎಂದರು. ಮುಂದುವರಿದು ‘ಕಾನೂನಿಗಿಂತ ಯಾರೂ ದೊಡ್ಡವರಲ್ಲ’ ಎಂದ ಸೋಮಣ್ಣ, ತಪ್ಪಿತಸ್ಥರಿಗೆ ಶಿಕ್ಷೆ ಗ್ಯಾರಂಟಿ ಎಂಬುದನ್ನು ಸೂಚ್ಯವಾಗಿ ಹೇಳಿದರು.
ಇನ್ನು ಬಿಜೆಪಿಯಲ್ಲಿ ನಟಿ ರಾಗಿಣಿ ಗುರುತಿಸಿಕೊಂಡಿದ್ದರ ಬಗ್ಗೆ ನಿನ್ನೆ(ಮಂಗಳವಾರ)ಯಷ್ಟೇ ಮಾತನಾಡಿದ್ದ ಸಿಎಂ ಬಿಎಸ್​ವೈ ಪುತ್ರ ಬಿ.ವೈ.ವಿಜಯೇಂದ್ರ, ‘ಕೆ.ಆರ್​.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಟಿ ರಾಗಿಣಿ ಬಿಜೆಪಿ ಪರ ಕ್ಯಾಂಪೇನ್​ ಮಾಡಿದ್ದು ನಿಜ. ಆದರೆ ಚಿತ್ರ ನಟ-ನಟಿಯರು ಒಂದೇ ಪಕ್ಷದ ಪರ ಪ್ರಚಾರ ಮಾಡಿದ ಉದಾಹರಣೆ ಇಲ್ಲ. ಒಂದೇ ಚುನಾವಣೆಯಲ್ಲಿ ಬೇರೆ ಬೇರೆ ಪಕ್ಷದ ಪರ ಪ್ರಚಾರ ಮಾಡಿದ್ದಾರೆ. ನಟಿ ರಾಗಿಣಿ ಬಿಜೆಪಿ ಸೇರಿಲ್ಲ. ಒಂದು ವೇಳೆ ಬಿಜೆಪಿ ಬೆಂಬಲವಿದೆ ಎನ್ನುವುದಿದ್ದರೆ ಅವರು ಅರೆಸ್ಟ್​ ಆಗುತ್ತಿರಲಿಲ್ಲ’ ಎಂದಿದ್ದರು.
ಸಿನಿಪ್ರಿಯರಿಗೆ ಗುಡ್ ನ್ಯೂಸ್, ಚಿತ್ರಮಂದಿರ ಓಪನ್​ಗೆ ಡೇಟ್​ ಫಿಕ್ಸ್

ನಟಿ ರಾಗಿಣಿ ಬಗ್ಗೆ ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರ ಹೇಳಿದ್ದೇನು?

ಡ್ರಗ್ಸ್ ಕೇಸ್​ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್​ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 13 =
Remember me
