|ಶಶಿಕಾಂತ ಮೆಂಡೆಗಾರವಿಜಯಪುರ
ಹನ್ನೆರಡನೇ ಶತಮಾನದಲ್ಲಿ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದ ವಿಶ್ವಗುರು ಬಸವಣ್ಣನವರು ಹಾಗೂ ಇತರೆ ಶರಣರ ವಚನಗಳಿಗೆ ಶಾಶ್ವತ ರೂಪ ನೀಡಬೇಕೆಂಬ ಮಹದುದ್ದೇಶದಿಂದ ನಿರ್ವಿುಸಲಾಗಿರುವ ವಚನ ಶಿಲಾಶಾಸನ ಮಂಟಪದ ಲೋಕಾರ್ಪಣೆಗೆ ಕಾಲ ಕೂಡಿಬಂದಿದ್ದು, ಇಂದು, ಜೂನ್ 8ರಂದು ಉದ್ಘಾಟನೆಗೊಳ್ಳಲಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರದ ವಿರಕ್ತಮಠದ ಆವರಣದಲ್ಲಿ ನಿರ್ವಿುಸಿರುವ ಈ ವಚನ ಶಿಲಾಶಾಸನ ಮಂಟಪದ ರೂವಾರಿ ಶ್ರೀ ಚೆನ್ನಬಸವ ಮಹಾಸ್ವಾಮಿಗಳು. ಗುರುಗಳು ಲೋಕಪರ್ಯಟನೆಗೆ ತೆರಳಿದಾಗ ಉಂಟಾದ ಸ್ಪೂರ್ತಿಯಿಂದಾಗಿ, ಶರಣರ ವಚನಗಳನ್ನು ಶಾಶ್ವತವಾಗಿ ಉಳಿಸುವ ಉದ್ದೇಶಕ್ಕೆ ಕೈಹಾಕಿದರು. ಶೆಲ್ಲಿಕೇರಿ ಕಲ್ಲಿನಲ್ಲಿ 1.60 ಲಕ್ಷಕ್ಕೂ ಅಧಿಕ ಅಕ್ಷರಗಳಲ್ಲಿ ಬಸವಣ್ಣನವರು ಹಾಗೂ ವಿವಿಧ ಶರಣರ 1500ಕ್ಕೂ ಹೆಚ್ಚು ವಚನಗಳನ್ನು ಹಲವಾರು ಶಿಲ್ಪಿಗಳಿಂದ ಕೆತ್ತಿಸಿ, ಅದನ್ನು ಮಂಟಪದಲ್ಲಿ ಅಳವಡಿಸಿದ್ದಾರೆ. 93 ವರ್ಷ ವಯಸ್ಸಿನ ಹಿರಿಯ ಶ್ರೀಗಳು ಈಗಲೂ ಸದೃಢ, ಸಕ್ರಿಯ. ಈ ಮಹತ್ಕಾರ್ಯದ ಸಂಕಲ್ಪವು ಹಲವು ಅಡೆತಡೆಗಳ ಮಧ್ಯೆಯೂ 40 ವರ್ಷಗಳ ನಿರಂತರ ಶ್ರಮದಿಂದ ಈಗ ಸಾಕಾರಗೊಂಡಿದೆ. ಶ್ರೀಮಠದ ಕಿರಿಯ ಶ್ರೀಗಳಾದ ಡಾ. ಸಿದ್ಧಲಿಂಗ ಸ್ವಾಮೀಜಿ ಅವರ ಮುತುವರ್ಜಿಯಿಂದ ಇತ್ತೀಚಿನ ದಿನಗಳಲ್ಲಿ ಈ ಕಾರ್ಯವು ಹೆಚ್ಚಿನ ತೀವ್ರತೆ ಪಡೆದುಕೊಂಡು, ವಚನ ಶಿಲಾಮಂಟಪ ಉದ್ಘಾಟನೆಗೆ ಸಿದ್ಧವಾಗಿದೆ. ವಚನ ಮಂಟಪವನ್ನು ವಿಶಿಷ್ಟ ರೀತಿಯಲ್ಲಿ ನಿರ್ವಿುಸಲಾಗಿದ್ದು, ಷಟ್ಕೋನದ ಆಕೃತಿಯಲ್ಲಿದೆ. ಅಲ್ಲದೆ, ಕಂಬಗಳನ್ನು ಸಹ ಷಟ್​ಸ್ಥಲ ರೀತಿಯಲ್ಲಿ, ಭೂಕಂಪನಕ್ಕೂ ಜಗ್ಗದಂತೆ ನಿರ್ವಿುಸಲಾಗಿದೆ. ಕಟ್ಟಡಕ್ಕೆ ಬಳಸಲಾದ ಗೋಡೆಯ ಕಲ್ಲುಗಳ ಮೇಲೆಯೇ ವಚನಗಳನ್ನು ಕೆತ್ತಿಸಿ ಒಳಾಂಗಣ ರೂಪಿಸಿರುವುದು ಇಲ್ಲಿನ ವೈಶಿಷ್ಟ್ಯ. ಕಟ್ಟಡಕ್ಕೆ ಸಂಬಂಧಿಸಿದಂತೆ ಇನ್ನೊಂದಿಷ್ಟು ಕೆಲಸಗಳು ಬಾಕಿ ಇವೆ. ಮುಂಬರುವ ದಿನಗಳಲ್ಲಿ ಶಿಲಾಮಂಟಪವು ಪ್ರವಾಸಿತಾಣವಾಗಿ ಕಂಗೊಳಿಸಲಿದೆ.
ನಮ್ಮ ಶರಣರ ವಚನಗಳನ್ನು ಶಾಶ್ವತವಾಗಿ ಉಳಿಸಬೇಕೆಂದು ಕಲ್ಲಿನಲ್ಲಿ ವಚನಗಳನ್ನು ಕೆತ್ತಿಸಲಾಗಿದೆ. ಇದಕ್ಕಾಗಿ ಹಲವು ದಾನಿಗಳು ಸಹಾಯ-ಸಹಕಾರ ನೀಡಿದ್ದಾರೆ. ಸತ್ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದೇವೆ.
|ಚನ್ನಬಸವ ಮಹಾಸ್ವಾಮಿಗಳುವಚನ ಶಿಲಾಮಂಟಪದ ಸಂಸ್ಥಾಪಕರು, ವಿರಕ್ತಮಠ
ಪ್ರಪಂಚದ ವಿಶಿಷ್ಟಗಳಲ್ಲೊಂದಾದ ಲಿಪಿ ಕಟ್ಟಡವನ್ನು ಇಂಗಳೇಶ್ವರದಲ್ಲಿ ನಿರ್ವಿುಸಿರುವುದೇ ದೊಡ್ಡ ಸಾಧನೆ. ಇದರ ಲೋಕಾರ್ಪಣೆಗೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ರಾಜಕೀಯ ಪ್ರಮುಖರನ್ನು ಆಹ್ವಾನಿಸಲಾಗಿದೆ. 300ಕ್ಕೂ ಅಧಿಕ ಶ್ರೀಗಳ ಸಮ್ಮುಖದಲ್ಲಿ ಲೋಕಾರ್ಪಣೆಯಾಗಲಿದೆ. ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
|ಡಾ. ಸಿದ್ಧಲಿಂಗ ಸ್ವಾಮೀಜಿವಿರಕ್ತಮಠ, ಇಂಗಳೇಶ್ವರ
ಕಾರ್ಯಕ್ರಮಕ್ಕೆ ಭರದ ಸಿದ್ಧತೆ:ವಚನ ಶಿಲಾಮಂಟಪದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗಾಗಿ 100 ಕ್ವಿಂಟಲ್ ಬುಂದಿ ಹಾಗೂ 70 ಟ್ರಾ್ಯಕ್ಟರ್ ರೊಟ್ಟಿ ಸೇರಿದಂತೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಇದೆಲ್ಲವನ್ನೂ ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಗಳ 830ಕ್ಕೂ ಅಧಿಕ ಹಳ್ಳಿಗಳ ಭಕ್ತರು ಪೂರೈಸಲಿದ್ದಾರೆ. ಕಾರ್ಯಕ್ರಮಕ್ಕಾಗಿ ಸುಮಾರು ನಾಲ್ಕು ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್ ಹಾಕಿ ಸಿದ್ಧತೆ ನಡೆಸಲಾಗಿದೆ.
ಯುವ ಕಾಂಗ್ರೆಸ್ ಜೀಪ್ ಪಲ್ಟಿ; ಒಬ್ಬ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ..

ಹಿರಿಯ ನಾಗರಿಕರಿಗೊಂದು ಸಂತಸದ ಸಂಗತಿ; ಮತ್ತೊಮ್ಮೆ ಆದೇಶ ಹೊರಡಿಸಿತು ಸರ್ಕಾರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 4 =
Remember me
