ಯಾದಗಿರಿ:ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವೇಳೆ ವಡಗೇರಾ ತಾಲೂಕಿನ ಉಳ್ಳೆಸೂಗುರು ಗ್ರಾಮದಲ್ಲಿ ಶುಕ್ರವಾರ ಎರಡು ಗುಂಪಿನ ಮಧ್ಯೆ ನಡೆದ ಮಾರಾಮಾರಿ ಪ್ರಕರಣ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ 25 ಜನರ ವಿರುದ್ಧ ಕೇಸ್​ ದಾಖಲಾಗಿದೆ.
ಬಿಜೆಪಿ ಮುಖಂಡ ದೇವರಾಜ್ ನಾಯಕ್, ಬಲದೇವ್ ನಾಯಕ್, ಪ್ರಿಯಾಂಕ್ ನಾಯಕ್ ಸೇರಿದಂತೆ 25 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಜಿಲ್ಲಾಡಳಿತ ಶುಕ್ರವಾರ ಚುನಾವಣೆ ನಿಗದಿಪಡಿಸಿತ್ತು. ಉಳ್ಳೆಸೂಗುರದಲ್ಲಿ ಶುಕ್ರವಾರ ಮಧ್ಯಾಹ್ನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಹೊರಗಡೆ ಜಮಾಯಿಸಿದ್ದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗುಸುಗುಸು ಆರಂಭಗೊಂಡಿತು. ಇತ್ತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು ಘೋಷಣೆ ಕೂಗಿದರು.ಇದನ್ನೂ ಓದಿರಿವೇಶ್ಯೆ ಸೋಗಲ್ಲಿ ಯುವಕರ ಕೋಣೆಗೆ ಆಂಟಿ ಎಂಟ್ರಿ! ಸಲ್ಲಾಪದ ವೇಳೆ ವರಸೆ ಬದಲು, ಬೆಸ್ತುಬಿದ್ದವ ಮಾಡಿದ್ದೇನು?
ಇದರಿಂದ ಕೆರಳಿದ ಮತ್ತೊಂದು ಗುಂಪು ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿತು. ದೊಡ್ಡ ಗಾತ್ರದ ಕಲ್ಲು, ಕಟ್ಟಿಗೆಯಿಂದ ಸಿಕ್ಕ-ಸಿಕ್ಕವರ ಮೇಲೆ ಎರಗಿ ಥಳಿಸಿದ್ದರಿಂದ ಕ್ಷಣಾರ್ಧದಲ್ಲೇ ಇಡೀ ಗ್ರಾಮ ಹೊತ್ತಿ ಉದ್ವಿಗ್ನಗೊಂಡಿತು. 15ಕ್ಕೂ ಹೆಚ್ಚುನ ಜನರಿಗೆ ಗಂಭೀರ ಗಾಯಗಳಾಗಿದ್ದು, ಐದಾರು ಕಾರುಗಳು, 10ಕ್ಕೂ ಹೆಚ್ಚು ಬೈಕ್​ಗಳು ಜಖಂಗೊಂಡಿವು. ಕಾಂಗ್ರೆಸ್ ಮುಖಂಡ ಬಸ್ಸುಗೌಡ ಬಿಳ್ಹಾರ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಡಿವೈಎಸ್ಪಿ ಸಂತೋಷ ಬನಹಟ್ಟಿ ನೇತೃತ್ವದ ತಂಡ ಬಂದೋಬಸ್ತ್ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಸಂಜೆ ಯಾದಗಿರಿ ಹೊಸ ಜಿಲ್ಲಾಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದ್ದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಇದುವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲ.
ವೇಶ್ಯೆ ಸೋಗಲ್ಲಿ ಯುವಕರ ಕೋಣೆಗೆ ಆಂಟಿ ಎಂಟ್ರಿ! ಸಲ್ಲಾಪದ ವೇಳೆ ವರಸೆ ಬದಲು, ಬೆಸ್ತುಬಿದ್ದವ ಮಾಡಿದ್ದೇನು?

ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

ಶೃಂಗೇರಿಯಲ್ಲಿ ಬಾಲಕಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ: ಸರ್ಕಲ್​ ಇನ್​ಸ್ಪೆಕ್ಟರ್​ ಅಮಾನತು

ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
