ಬೆಂಗಳೂರು:ಅಗ್ನಿಸಾಕ್ಷಿ (Agnisakshi) ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಮತ್ತು ವಿರಾಜ್ (Viraj Kannda Film) ಸಿನಿಮಾದ ನಾಯಕ ವಿದ್ಯಾಭರಣ್ (Vidyabharan K S) ಎಂಬುವರ ನಡುವಿನ ನಿಶ್ಚಿತಾರ್ಥ ಕುರಿತು ಅಪರಿಚಿತ ಯುವತಿಯರಿಬ್ಬರ ಆಡಿಯೋ ವೈರಲ್​ ಆದ ಬೆನ್ನಲ್ಲೇ ಪೊಲೀಸ್​ ಕಮಿಷನರ್ ಕಚೇರಿಗೆ ವಿದ್ಯಾಭರಣ್ ದೂರು ನೀಡಿದ್ದಾರೆ.
ಬಳಿಕ ‘ದಿಗ್ವಿಜಯ ನ್ಯೂಸ್​’ ಜತೆ ಮಾತನಾಡಿದ ವಿದ್ಯಾಭರಣ್, ಯಾರೋ ಆಗದೆ ಇರೋರು ಈ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸ್ತೀನಿ. ಮಾತಾಡಿರೋರು ಯಾರು ಅಂತಾ ನಂಗೆ ಗೊತ್ತಿಲ್ಲ. ಆ ಆಡಿಯೋದಲ್ಲಿ ಇರೋರ ವಾಯ್ಸ್ ಕೂಡ ನಾನು ಕೇಳಿಲ್ಲ. ಅವ್ರು ಯಾರು ಅಂತ ಗೊತ್ತಿದ್ರೆ ಅವ್ರನ್ನೇ ಮೀಡಿಯಾ ಮುಂದೆ ಕರೆತಂದು ಮಾತಾಡಿಸ್ತಿದ್ದೆ ಎಂದು ಆಕ್ರೋಶ ಹೊರಹಾಕಿದರು.
ಐದಾರು ಸಾವಿರ ರೂಪಾಯಿಗಾಗಿ ಈ ರೀತಿ ಕೆಲಸ ಮಾಡಿದ್ದಾರೆ. ನಮ್ಮ ತಂದೆಗೆ ಮದುವೆಗಾಗಿ ತುಂಬಾ ಪ್ರಪೋಸಲ್ ಗಳು ಬರ್ತಿದ್ವು. ತುಂಬಾ ಜನರನ್ನ ನಾವು ಒಪ್ಪಿಲ್ಲ. ಅವರಲ್ಲೇ ಯಾರೋ ಒಬ್ರು ಈ ರೀತಿ ಮಾಡಿರುವ ಶಂಕೆ ಇದೆ. ಇದು ನನ್ನ ವಿರುದ್ಧ ಕೇಳಿ ಬಂದಿರೋ ಆರೋಪ. ನಾನು ನನ್ನ ಪರವಾಗಿ ಕಾನೂನು ಮೂಲಕ ಹೋರಾಟ ಮಾಡ್ತಿದ್ದೀನಿ. ಬೆಳಗ್ಗೆ ವೈಷ್ಣವಿ ಅವರ ಜತೆ ಮಾತನಾಡಿದ್ದೀನಿ. ಸದ್ಯಕ್ಕೆ ಎಂಗೇಜ್ಮೆಂಟ್ ವಿಷ್ಯ ಇಲ್ಲಿಗೆ ಬಿಡೋಣ ಅಂತಾ ಹೇಳಿದ್ದಾರೆ. ಅವರನ್ನ ಇದರಲ್ಲಿ ಇನ್ವಾಲ್ ಮಾಡಲ್ಲ. ಅವ್ರ ಕುಟುಂಬ ಕೂಡ ಒಳ್ಳೆಯ ಕುಟುಂಬ. ಎರಡೂ ಕುಟುಂಬಗಳು ಮಾತಾಡಿಕೊಂಡಿದ್ದೀವಿ. ಮುಂದೆ ಅವರ ಸಿನಿಮಾ‌ ಜರ್ನಿ ಇದೆ. ನಾನೂ ಕನ್ನಡ, ತೆಲುಗು ಸಿನಿಮಾಗಳನ್ನ‌ ಮಾಡ್ತಿದ್ದೀನಿ. ನಮ್ಮದು ಬಿಜಿನೆಸ್ ಇದೆ. ರಾಜಕೀಯದಲ್ಲಿ ಕೂಡ ಆ್ಯಕ್ಟಿವ್ ಇದೀವಿ. ಸದ್ಯಕ್ಕೆ ಎಂಗೇಜ್ಮೆಂಟ್ ಬಗ್ಗೆ ಏನೂ ಮಾತಿಲ್ಲ. ಮುಂದೆ ಆದ್ರೆ ನೋಡೋಣ ಎಂದರು.
ಏನಿದು ವಿವಾದ?:ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಸುದ್ದಿ ಹರಿದಾಡಿತ್ತು. ಅಲ್ಲದೆ, ಅದಕ್ಕೆ ಸಂಬಂಧಿಸಿದ ಫೋಟೋಗಳು ಸಹ ವೈರಲ್​ ಆಗಿ, ಮದುವೆ ಆಗುವುದು ಖಚಿತ ಎಂಬ ಸುದ್ದಿಯು ವೈರಲ್​ ಆಗಿತ್ತು. ಆದರೆ, ಇದೀಗ ವೈಷ್ಣವಿ ಅವರಿಗೆ ಮದುವೆಗೂ ಮುನ್ನವೇ ಮೋಸ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿದ್ಯಾಭರಣ್ ಎಂಬುವರ ಜತೆ ವೈಷ್ಣವಿ ನಿಶ್ಚಿತಾರ್ಥ ನೆರವೇರಿತ್ತು. ಫೋಟೋದಲ್ಲಿ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ ಬಿದರಿ ಅವರು ಕೂಡ ಇದ್ದರು. ಫೋಟೋ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿದ್ದ ವೈಷ್ಣವಿ, ಎಂಗೇಜ್ಮೆಂಟ್ ಆಗಿಲ್ಲ, ಹುಡುಗನ ಕಡೆಯವರು ಬಂದು ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ ಎಂದಿದ್ದರು. ಇದೀಗ ಇದ್ದಕ್ಕಿದ್ದ ಹಾಗೇ ಇಬ್ಬರು ಹುಡುಗಿಯರು ಅಖಾಡಕ್ಕಿಳಿದಿದ್ದಾರೆ. ಆ ಹುಡುಗಿಯರಿಗೂ ಹಾಗೂ ವಿರಾಜ್​ಗೂ ಏನು ಸಂಬಂಧ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ, ವಿರಾಜ್​ ಬಗ್ಗೆ ಸಾಕಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, ವೈಷ್ಣವಿಗೆ ಮೋಸ ಆಗಬಾರದು ಎಂದು ಹೇಳಿದ್ದಾರೆ. ಇವರಿಬ್ಬರ ಮಾತುಕತೆಯ ಆಡಿಯೋ ವೈರಲ್​ ಆಗಿದೆ.
ಆಡಿಯೋದಲ್ಲಿ ಏನಿದೆ?:‘ವೈಷ್ಣವಿ ತುಂಬಾ ಒಳ್ಳೆ ಹುಡುಗಿ. ಆಕೆಗೆ ಅವನಿಂದ ಮೋಸ ಆಗಬಾರದು. ವೈಷ್ಣವಿ ಜೀವನ ಹಾಳಾಗುವುದಕ್ಕೆ ನಾವು ಬಿಡುವುದಿಲ್ಲ. ಆಕೆ ಜತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹುಡುಗ ಸರಿಯಿಲ್ಲ. ವೈಷ್ಣವಿಗೂ ಮೊದಲೇ ಆತ ಐದಾರು ಜನ ಹುಡುಗಿಯರ ಜತೆ ರಿಲೇಷನ್​ಶಿಪ್​ನಲ್ಲಿದ್ದ. ಅಲ್ಲದೆ, ಹುಡುಗಿಯರನ್ನು ಮನೆಗೂ ಸಹ ಕರೆದುಕೊಂಡು ಹೋಗುತ್ತಿದ್ದ. ಆತನ ಕೃತ್ಯಕ್ಕೆ ಅವರ ತಂದೆ-ತಾಯಿಯ ಫುಲ್ ಸಪೋರ್ಟ್ ಇದೆ’ ಎಂದು ಇಬ್ಬರು ಅನಾಮಧೇಯ ಹುಡುಗಿಯರು ಆರೋಪ ಮಾಡಿದ್ದಾರೆ,
ಮಾತು ಮುಂದುವರಿಸಿರುವ ಹುಡುಗಿಯರು, ‘ಈಗ ನೋಡಿದರೆ ವೈಷ್ಣವಿ ಅವರ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾನೆ. ತಾನು 150 ಕೋಟಿಗೆ ಬಾಳುತ್ತೇನೆ ಅಂತಾ ಹೇಳಿದ್ದಾರೆ. ಹೀಗಿರುವಾಗ ಅಷ್ಟು ಸಿಂಪಲ್‌ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದೇಕೆ? ವೈಷ್ಣವಿಗೆ ಹಾಗೂ ಅವರ ಕುಟುಂಬಕ್ಕೆ ಈ ವಿದ್ಯಾಭರಣ ಎಂತವನು ಅಂತ ಇನ್ನೂ ಗೊತ್ತಿಲ್ಲ ಅನ್ಸುತ್ತೆ! ಒಂದು ವೇಳೆ ಗೊತ್ತಾದರೆ ವೈಷ್ಣವಿ ಉಗಿದು ಉಪ್ಪಿನಕಾಯಿ ಹಾಕ್ತಾರೆ. ಯಾವುದೇ ಕಾರಣಕ್ಕೂ ವೈಷ್ಣವಿ, ವಿದ್ಯಾಭರಣ್ ಮದುವೆ ಆಗಬಾರದು. ಒಂದ್ವೇಳೆ ಅವರಿಬ್ಬರು ಮದುವೆ ಆದರೆ, ಮೂರು ವರ್ಷವೂ ಸಂಸಾರ ಮಾಡಲ್ಲ. ಯಾವುದೇ ಕಾರಣಕ್ಕೂ ವಿರಾಜ್, ವೈಷ್ಣವಿ ಗೌಡ ಅವರನ್ನು ಬಾಳಸಲ್ಲ. ಅವರಿಬ್ಬರು ಡಿವೋರ್ಸ್ ತೆಗೆಕೊಳ್ಳೋದು ಗ್ಯಾರಂಟಿ’ ಎಂದಿದ್ದಾರೆ.
‘ಮುಂದೆಂದೋ ಅವರ ಲೈಫ್ ಹಾಳಾಗುವ ಬದಲು ಈಗಲೇ ಮದುವೆ ನಿಂತು ಹೋಗಲಿ. ನಟಿ ವೈಷ್ಣವಿ ಗೌಡ (Vaishnavi Gowda) ಬದುಕು ಅಲ್ಲೋಲ-ಕಲ್ಲೋಲ ಆಗಬಾರದು. ನಾವು ಇಷ್ಟು ಹೇಳಿದ ಮೇಲೂ ಕೂಡ ವೈಷ್ಣವಿ ಹಾಗೂ ಅವರ ಕುಟುಂಬಸ್ಥರು ವಿದ್ಯಾಭರಣ್​ (Vidyabharan K S) ಕಡೆ ಮಾತನಾಡಿದರೆ ನಾವು ತಾನೇ ಏನು ಮಾಡುವುದಕ್ಕೆ ಆಗುತ್ತೆ? ಯಾರಾದರೂ ಹಾಳಾಗಿ ಹೋಗಲಿ ಅಂತ ಸುಮ್ಮನಾಗುತ್ತೇವೆ’ ಎಂದು ಆ ಇಬ್ಬರು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಆದರೆ, ಇದರಲ್ಲಿ ಎಷ್ಟು ಸತ್ಯ? ಎಷ್ಟು ಮಿತ್ಯ? ಎಂಬುದೇ ಇದೀಗ ಕಾಡುತ್ತಿರುವ ದೊಡ್ಡ ಪ್ರಶ್ನೆ.
ಆಡಿಯೋ ವೈರಲ್​ ಆದ ಬೆನ್ನಲ್ಲೇ ಆ ಇಬ್ಬರು ಹುಡುಗಿಯರಿಗೆ ಖಡಕ್​ ಎಚ್ಚರಿಕೆ ಕೊಟ್ಟ ನಟ ವಿದ್ಯಾಭರಣ್​!

ಆಡಿಯೋ ವೈರಲ್​ ಆದ ಬೆನ್ನಲ್ಲೇ ಆ ಇಬ್ಬರು ಹುಡುಗಿಯರಿಗೆ ಖಡಕ್​ ಎಚ್ಚರಿಕೆ ಕೊಟ್ಟ ನಟ ವಿದ್ಯಾಭರಣ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + nine =
Remember me
