ಚಾಮರಾಜನಗರ:ಪ್ರೇಮಿಗಳ ದಿನಾಚರಣೆಗೆ ದಿನಗಣನೆ ಆರಂಭವಾಗಿದೆ. ಯುವಕ-ಯುವತಿಯರು ತಮ್ಮ ಪ್ರೇಮಿಗಳಿಗೆ ಸರ್ಪ್ರೈಸ್​ ಗಿಫ್ಟ್​ ನೀಡಿ ಖುಷಿಪಡಿಸಲು ವ್ಯಾಲಂಟೈನ್ಸ್ ಡೇಗೆ ಎದುರು ನೋಡುತ್ತಿದ್ದಾರೆ. ಆದರೆ, ಈ ಪ್ರೇಮಿಗಳ ದಿನದ ಸಹವಾಸವೇ ಬೇಡ. ನನಗೆ ಐದು ದಿನ ರಜೆ ಕೊಟ್ಟುಬಿಡಿ ಎಂದು ಕಾಲೇಜು ಯುವಕನೊಬ್ಬ ಪ್ರಾಂಶುಪಾಲರಿಗೆ ಬರೆದಿರುವ ಪತ್ರ ವೈರಲ್​ ಆಗಿದೆ.
ಇದನ್ನೂ ಓದಿರಿ:Web Exclusive| ಮುಜುಗರದ ಸ್ಥಿತಿಯಲ್ಲಿ ಸೇವಾ ಹಿರಿತನ: ಕೆಎಟಿ ವಿಳಂಬ ಧೋರಣೆ; ಬಡ್ತಿ ತಾರತಮ್ಯ ನಿವಾರಣೆ ನಿರೀಕ್ಷೆಯಲ್ಲಿ ಪೊಲೀಸರು
ಎಸ್. ಶಿವರಾಜು ವಿಕ್ಟರ್ ರಜೆಗಾಗಿ ಪತ್ರ ಬರೆದ ವಿದ್ಯಾರ್ಥಿ. ಈತ ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿ. ಫೆ. 14ರಂದು ದೇಶಾದ್ಯಂತ ಆಚರಿಸುತ್ತಿರುವ ಪ್ರೇಮಿಗಳ ದಿನದಂದು ಹುಡುಗಿಯರ ಕಾಟವನ್ನು ತಾಳಲಾರೆ, ಹೀಗಾಗಿ ನನಗೆ ಐದು ದಿನಗಳ ಕಾಲ ರಜೆ ಕೊಡಿ ಎಂದು ಪತ್ರದಲ್ಲಿ ಶಿವರಾಜ್​ ಮನವಿ ಮಾಡಿಕೊಂಡಿದ್ದಾರೆ.

ವಿಶೇಷವೆಂದರೆ, ಶಿವರಾಜ್​ ಬರೆದ ಪತ್ರದ ಮೇಲೆ ಪ್ರಾಂಶುಪಾಲರ ಸೀಲ್ ಹಾಗು ಸಹಿ ಸಹ ಇರುವುದು ರಜೆಗೆ ಅನುಮತಿ ದೊರಕಿದೆ ಎನ್ನಲಾಗಿದೆ. ಆದರೆ, ಎಷ್ಟು ಸತ್ಯವೋ ಎಂದು ತಿಳಿದುಬಂದಿಲ್ಲ. ಆದರೂ ಪ್ರಾಂಶುಪಾಲರಿಗೆ ಬರೆದ ಪತ್ರ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿರಿ:ಪಿಡಿಒ ಕೊರತೆ, ಅಭಿವೃದ್ಧಿ ಚಿಂತೆ: 800ಕ್ಕೂ ಹೆಚ್ಚು ಸ್ಥಾನ ಖಾಲಿ, ಹೊಸ ಚುನಾಯಿತರಿಗೆ ಆತಂಕ..
ಟ್ರೋಲಿಗರ ಗಮನಸೆಳೆದ ವಧು-ವರನ ಫೋಟೋ: ವೈರಲ್​ ಆಯ್ತು ‘ಸ್ವಲ್ಪ ತಡಿಯಮ್ಮಾ’ ಮೀಮ್ಸ್​..!

ಚೌಕಟ್ಟು ಮೀರದಿರಲಿ; ಸೂಕ್ತ ನಿಯಂತ್ರಣ ವ್ಯವಸ್ಥೆ ಅಗತ್ಯ…

ಮಹಿಳೆಯ ದಿಟ್ಟ ಹೆಜ್ಜೆ; ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಮತ್ತು ಹೆಣ್ಣುಮಕ್ಕಳ ದಿನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
