ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಜುಗರ ತರಿಸಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ನಿಗಮದ ಹಣವನ್ನು ಅನ್ಯ ಖಾತೆಗಳಿಗೆ ವರ್ಗಾವಣೆ ಮಾಡಲು ಸಚಿವರ ಕಚೇರಿಯಿಂದಲೇ ಒತ್ತಡ ಇತ್ತೆಂಬ ಆಡಿಯೋ ಸ್ಪೋಟಗೊಂಡಿರುವುದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ಹಣ ವರ್ಗಾವಣೆ ವಿಚಾರವಾಗಿ ಮೇ 24ರಂದು ಬೆಂಗಳೂರಿನ ಹೋಟೆಲ್​ವೊಂದರಲ್ಲಿ ಸದ್ಯ ಅಮಾನತುಗೊಂಡಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್ ರಹಸ್ಯ ಸಭೆ ನಡೆಸಿದ್ದು, ಆ ಸಂದರ್ಭದ್ದೆನ್ನಲಾದ ಆಡಿಯೋ, ವಿಡಿಯೋ ಇದೀಗ ಬೆಳಕಿಗೆ ಬಂದಿದೆ.
15 ನಿಮಿಷಗಳ ಮಾತುಕತೆಯಲ್ಲಿ ಅನೇಕ ವಿಚಾರ ಪ್ರಸ್ತಾಪವಾಗಿದೆ. ನಿಗಮದ 97.32 ಕೋಟಿ ರೂ.ಗಳನ್ನು ತೆಲಂಗಾಣದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲು ಪರಿಶಿಷ್ಟ ವರ್ಗಗಳ ಕಲಾಣ್ಯ ಇಲಾಖೆಯ ಅಂದಿನ ಸಚಿವ ಬಿ. ನಾಗೇಂದ್ರ ಅವರ ಕಚೇರಿಯಿಂದಲೇ ಒತ್ತಡ ಬಂದಿದೆ. ನಾಗೇಂದ್ರ ಆಪ್ತ ಸಹಾಯಕ, ಸಹೋದರ ಸಂಬಂಧಿಕರಾದ ನಕ್ಕುಂಟೆ ನಾಗರಾಜು, ನಾಗೇಶ್ವರ್ ರಾವ್ ಇದರ ಕಿಂಗ್​ಪಿನ್​ಗಳು ಎಂಬುದು ಆಡಿಯೋದಲ್ಲಿ ಸ್ಪಷ್ಟವಾಗಿದೆ.
ಎಂಜಿ ರಸ್ತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಗಮದ ಹೆಸರಿನಲ್ಲಿ ಹೊಸ ಖಾತೆ ತೆರೆದು ತೆಲಂಗಾಣದ ವಿವಿಧ ಕಂಪನಿಗಳ 18 ಖಾತೆಗಳಿಗೆ 94.73 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿತ್ತು. ಈ ಬಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸವನಗೌಡ ದದ್ದಲ್​ರ ಕಚೇರಿ ಅಧಿಕಾರಿ ಸುನೀಲ್, ಸ್ಟೇಟ್​ವೆುಂಟ್ ಮತ್ತು ಚೆಕ್ ಬುಕ್ ಕೊಡುವಂತೆ ಪರಶುರಾಮ್ೆ ಸೂಚಿಸಿದ್ದರು.
ಈ ವಿಷಯ ಕುರಿತು ಮೇ 24ರಂದು ಪರಶುರಾಮ್ ಮತ್ತು ಪದ್ಮನಾಭ್ ಹೋಟೆಲ್​ನಲ್ಲಿ ರಹಸ್ಯ ಸಭೆ ನಡೆಸಿದ್ದರು. ಗಾಬರಿಗೊಂಡ ಪರಶುರಾಮ್ ನಿಗಮದ ಅಧ್ಯಕ್ಷರಿಗೆ ಈ ವಿಷಯ ತಿಳಿಸುವುದು ಒಳ್ಳೆಯದು ಎಂದು ಎಂಡಿ ಪದ್ಮನಾಭ್ ಬಳಿ ಹೇಳಿಕೊಳ್ಳುತ್ತಾರೆ. ಅದಕ್ಕೆ ಪದ್ಮನಾಥ್ ಬೇಡ ಇರಪ್ಪ. ಹೇಳಿದರೆ ದೊಡ್ಡ ರಾದ್ಧಾಂತ ಆಗಲಿದೆ. ಮೂರು ದಿನ ಸುಮ್ಮನೆ ಇರು. ಅಷ್ಟರಲ್ಲಿ ಹಣ ಬಂದರೆ ಎಲ್ಲವನ್ನು ಸರಿ ಮಾಡಬಹುದು ಎಂದು ಹೇಳುತ್ತಾರೆ. ಬ್ಯಾಂಕ್ ಖಾತೆ ವಿವರ ಕೇಳಿದರೆ ಏನು ಮಾಡುವುದು? ನಕ್ಕುಂಟೆ ನಾಗರಾಜ್ ಮತ್ತು ನಾಗೇಶ್ವರಾವ್ ಹೆಸರು ಹೇಳಬೇಕಾ ಎಂದು ಪರಶುರಾಮ್ ಕೇಳಿದಾಗ ಅದಕ್ಕೂ ಸಹ ಪದ್ಮನಾಭ್ ಒಪು್ಪವುದಿಲ್ಲ. ಈ ಇಬ್ಬರ ಹೆಸರು ಎಲ್ಲಿಯೂ ಹೇಳಬೇಡ. ಮಿನಿಸ್ಟರ್ ಕಚೇರಿ ಮತ್ತು ಮಿನಿಸ್ಟರ್​ನಿಂದ ಹೆಚ್ಚಿನ ಒತ್ತಡ ಬಂತು, ಅದಕ್ಕಾಗಿ ಮಾಡಿದ್ದೇವೆ ಎಂದು ಹೇಳಿದರೆ ಸಾಕು. ಅಷ್ಟರಲ್ಲಿ ಹಣವನ್ನು ವಾಪಸ್ ಪಡೆದು ಬ್ಯಾಂಕ್ ಖಾತೆಗೆ ಜಮೆ ಮಾಡಿ ಕ್ಲೋಸ್ ಮಾಡಬಹುದು ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ.
ಮಿನಿಸ್ಟರ್ ಗಮನಕ್ಕಿಲ್ಲವೇ?:ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಕ್ಕುಂಟೆ ನಾಗರಾಜ್ ಖಾತೆ ತೆರೆದಿರುವುದು ಮಿನಿಸ್ಟರ್ ಗಮನಕ್ಕೆ ಇಲ್ಲವೇ ಎಂದು ಪರಶುರಾಮ್ ಪ್ರಶ್ನಿಸಿದಾಗ, ಅದಕ್ಕೆ ಎಂ.ಡಿ. ಪದ್ಮನಾಭ್ ‘ಹೌದು..ಮಿನಿಸ್ಟರ್ ಅವರೇ ಶಾಂಘ್ರಿಲಾ ಹೋಟೆಲ್​ಗೆ ನನ್ನ ಕರೆಸಿ ಮಾತನಾಡಿಸಿದ್ದರು. ಅಲ್ಲಿಗೆ ನಕ್ಕುಂಟೆ ನಾಗರಾಜ್ ಅವರೇ ಬಂದು ಬ್ಯಾಂಕ್ ಖಾತೆ ಓಪನ್ ಮಾಡಿಸಿದ್ದು. ಚಿತ್ರ ಹಿಂಸೆ ಕೊಟ್ಟು ಅಕೌಂಟ್ ಓಪನ್ ಮಾಡಿಸಿದರು. ಹಣ ವರ್ಗಾವಣೆಗೆ 50 ಬಾರಿ ಕಾಲ್ ಮೇಲೆ ಕಾಲ್ ಮಾಡಿ ಹಿಂಸೆ ಕೊಟ್ರು ಎಂದು ಹೇಳಿದ್ದಾರೆ.
ಹಗರಣ ಮುಚ್ಚಿಹಾಕುವ ಪ್ಲಾನ್:99.32 ಕೋಟಿ ರೂ. ಅಕ್ರಮ ನಡೆದಿತ್ತು. ಇದರಲ್ಲಿ ತನಗೆ ಬಂದಿದ್ದ 5 ಕೋಟಿ ರೂ. ಗಳನ್ನು ಖಾತೆದಾರ ಭಯದಲ್ಲಿ ವಾಪಸ್ ನಿಗಮದ ಖಾತೆಗೆ ಜಮೆ ಮಾಡಿದ್ದ. ಉಳಿದ ಹಣ ಯಾವಾಗ ಬರುತ್ತದೆ ಎಂಬ ನಂಬಿಕೆ ಇರಲಿಲ್ಲ. ಸಚಿವರ ಆಪ್ತ ನಕ್ಕುಂಟೆ ನಾಗರಾಜು ಇಂದು, ನಾಳೆ ಎಂದು ಸಬೂಬು ಹೇಳ್ತಿದ್ದ. ಇತ್ತ ಪರಶುರಾಮ್ ಮತ್ತು ಪದ್ಮನಾಭ್ ಹಗರಣ ಮುಚ್ಚಿಹಾಕುವ ಪ್ಲಾ್ಯನ್ ಮಾಡಿದ್ದರು. ಅಷ್ಟು ಹಣ ವಾಪಸ್ ಪಡೆದು ಮತ್ತೊಂದು ಹೊಸ ಬ್ಯಾಂಕ್ ಖಾತೆ ತೆರೆದು ಜಮೆ ಮಾಡಿ ಒಟ್ಟು ಹಣದ ಸ್ಟೇಟ್​ವೆುಂಟ್ ಕೊಟ್ಟು ಕ್ಲೋಸ್ ಮಾಡಬೇಕೆಂದು ಪ್ಲಾ್ಯನ್ ಆಗಿತ್ತು.
ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಖಾತೆ ಸ್ಥಗಿತ ಮಾಡಿ ಅದರ ಸ್ಟೇಟ್​ವೆುಂಟ್ ಯಾರಿಗೂ ತೋರಿಸಬಾರದೆಂಬ ಸಂಚು ರೂಪಿಸಿದ್ದರು. 2ನೇ ಪ್ಲಾ್ಯನ್​ನಲ್ಲಿ ನಕ್ಕುಂಟೆ ನಾಗರಾಜು ಕಡೆಯಿಂದ ಹಣ ವಾಪಸ್ ಬಾರದೆ ಇದ್ದರೆ ನಿಗಮದ ಎಲ್ಲ ಬ್ಯಾಂಕ್ ಖಾತೆ ಕ್ಲೋಸ್ ಮಾಡಿ ಇರುವ ಹಣವನ್ನು ಸರ್ಕಾರದ ಖಜಾನೆಗೆ ಜಮೆ ಮಾಡುವುದು. ಉಳಿಕೆ ಹಣ ಯೋಜನೆಗಳಿಗೆ ಖರ್ಚು ಆಗಿರುವುದಾಗಿ ಮ್ಯಾನೇಜ್ ಮಾಡಬೇಕು. ಈ ವಿಷಯ ತಿಳಿದಿರುವ ಮುಖ್ಯ ಲೆಕ್ಕಾಧಿಕಾರಿ ಚಂದ್ರಶೇಖರ್ ಅವರ ಬಾಯಿ ಮುಚ್ಚಿಸಬೇಕೆಂದು ಪರಶುರಾಮ್ ಮತ್ತು ಪದ್ಮನಾಭ್ ಚರ್ಚೆ ನಡೆಸಿರುವ ಆಡಿಯೋದಲ್ಲಿದೆ. ಈ ಚರ್ಚೆ ಮೇ 24ಕ್ಕೆ ನಡೆದಿದ್ದು, ಮೇ 2ರಂದು ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು.
ಅಧಿಕಾರಿಗಳ ವಿರುದ್ಧವೇ ಕೇಸ್ :ನಕ್ಕುಂಟೆ ನಾಗರಾಜ್ ಮತ್ತು ನಾಗೇಶ್ವರಾವ್ ಹಣವನ್ನು ವಾಪಸ್ ಕೊಡದೆ ಇದ್ದರೆ ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳ ವಿರುದ್ಧವೇ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಪರಶುರಾಮ್ೆ ಪದ್ಮನಾಭ್ ಸಲಹೆ ಕೊಟ್ಟಿದ್ದರು. ನಿಗಮದ ಕಡೆಯಿಂದ ಚೆಕ್​ಬುಕ್, ಸ್ಟೇಟ್​ವೆುಂಟ್​ಗೆ ಅಧಿಕೃತ ಪತ್ರ, ಇಮೇಲ್ ಹೋಗಿಲ್ಲ. ಚೆಕ್​ಬುಕ್ ಸಹ ಸ್ಪೀಕರಿಸಿಲ್ಲ. ಆದರೂ ಹಣ ವರ್ಗಾವಣೆಯಾಗಿದೆ ಎಂದು ಕೇಸ್ ಕೊಟ್ಟು ಬ್ಯಾಂಕ್ ಅಧಿಕಾರಿಗಳು ನಕಲಿ ಸಹಿ ಮಾಡಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಅವರ ಮೇಲೆ ಆರೋಪ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಪದ್ಮನಾಭ್ ಒಳಸಂಚು ರೂಪಿಸಿರುವುದು ಬಹಿರಂಗವಾಗಿದೆ.
ತನಿಖೆಗೆ ಸಿದ್ಧರಾಗಿದ್ದ ಎಂಡಿ:ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಿಗಮದಿಂದ ಎಫ್​ಐಆರ್ ದಾಖಲಿಸಿದಲ್ಲಿ ಸಿಬಿಐ ತನಿಖೆ ನಡೆಸಲಿದೆ. ಬ್ಯಾಂಕ್ ಅಧಿಕಾರಿಗಳ ಜತೆ ನಾವು ಸಹ ಕೇಸ್​ನಲ್ಲಿ ಸಿಲುಕುವ ಸಾಧ್ಯತೆ ಇದೆ. ಏನಾದರೂ ಸಿಬಿಐ ಬಂಧನಕ್ಕೆ ಒಳಗಾದರೆ 2-3 ವರ್ಷ ಜಾಮೀನು ಸಿಗುವುದಿಲ್ಲ ಎಂದು ಎಂ.ಡಿ. ಪದ್ಮನಾಭ್ ಹೇಳಿದರೆ ಅದಕ್ಕೆ ಪರಶುರಾಮ್ ನನ್ನ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಏನೂ ತಪು್ಪ ಮಾಡದೆ ಜೈಲಿಗೇ ಹೋಗಬೇಕಾ ಸರ್ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಪದ್ಮನಾಭ್, ‘ನಾನೂ ಏನೂ ತಪು್ಪ ಮಾಡಿಲ್ಲ. ಸಚಿವರ ವಿಶ್ವಾಸ ಗಳಿಸಿ ಮತ್ತಷ್ಟು ಹತ್ತಿರ ಆಗಲು ಹೋಗಿ ಈ ರೀತಿ ಮಾಡಿದೆ’ ಎಂದು ಹೇಳುತ್ತಾರೆ.
ಚಂದ್ರಶೇಖರ್​ಗೂ ನೋಟಿಸ್ :ಚಂದ್ರಶೇಖರ್ ಹಗರಣ ಬಹಿರಂಗ ಮಾಡುತ್ತಾರೆಂಬ ಭಯದಲ್ಲಿ ಪದ್ಮನಾಭ್ ಆತನ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದ್ದರು. ಅದಕ್ಕಾಗಿ ಮಾ.31ರ ಒಳಗೆ ಬ್ಯಾಂಕ್ ಖಾತೆಯಿಂದ ಸ್ಟೇಟ್​ವೆುಂಟ್,ಚೆಕ್ ಬುಕ್ ಮಾಹಿತಿ ಪಡೆದಿಲ್ಲ. ಅವರ ನಿರ್ಲಕ್ಷ್ಯದಿಂದ ಇಷ್ಟೆಲ್ಲ ಆಗಿದೆ ಎಂದು ನೋಟಿಸ್ ಕೊಡುವಂತೆ ಪರಶುರಾಮ್ೆ ಪುಸಲಾಯಿಸಿದ್ದರು. ಅಲ್ಲದೆ, ಚಂದ್ರಶೇಖರ್ ಸಹ ನಕ್ಕುಂಟೆ ನಾಗರಾಜ್ ಮತ್ತು ನಾಗೇಶ್ವರ ರಾವ್ ಜೊತೆ ಕೈಜೋಡಿಸಿದ್ದಾರೆ ಎನ್ನಲಾಗಿದೆ.
. ನಿಗಮದ ಎಂಡಿ ಮತ್ತು ಲೆಕ್ಕ ಪರಿಶೋಧಕರ ನಡುವೆ ಮಾತುಕತೆ
. ಮೇ 24ರಂದು ಬೆಂಗಳೂರಿನ ಹೋಟೆಲ್​ನಲ್ಲಿ ನಡೆದಿದ್ದ ಗೌಪ್ಯ ಸಭೆ
. ಎಂಡಿ, ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್ ಚರ್ಚೆ
. ಒಟ್ಟು 15 ನಿಮಿಷ ಕಾಲ ನಡೆದಿದ್ದ ಮಾತುಕತೆ
. ನಿಗಮದ ಹಣ ವರ್ಗಾ ವಣೆಗೆ ತೀವ್ರ ಒತ್ತಡ
. ಅಂದಿನ ಸಚಿವರ ಕಚೇರಿಯಿಂದಲೇ ಒತ್ತಡ
. ಸಚಿವರ ಆಪ್ತ ಸಹಾಯಕ ಹಾಗೂ ಸಂಬಂಧಿಯಿಂದ ಒತ್ತಡ
ನಾನು ಯಾವ ಆಡಿಯೋ ಕೇಳಿಲ್ಲ. ಮುಕ್ತ ತನಿಖೆಗಾಗಿ ಸಚಿವರೇ ರಾಜೀನಾಮೆ ನೀಡಿದ್ದಾರೆ. ತನಿಖೆ ವಿಚಾರದಲ್ಲಿ ನಾನು ಮೂಗು ತೂರಿಸಲು ಹೋಗುವುದಿಲ್ಲ. ಭ್ರಷ್ಟಾಚಾರದಲ್ಲಿ ನಮ್ಮ ಮಂತ್ರಿ, ಶಾಸಕರ ಪಾತ್ರವಿಲ್ಲ, ಆದರೆ ಬೇರೆಯವರು ಇದರಲ್ಲಿ ಭಾಗಿಯಾಗಿದ್ದಾರೆ.
| ಡಿ.ಕೆ.ಶಿವಕುಮಾರ್ ಡಿಸಿಎಂ
ಭ್ರಷ್ಟಾಚಾರದ ವಿಚಾರದಲ್ಲಿ ರಾಹುಲ್ ಗಾಂಧಿ ಝೀರೋ ಟಾಲರೆನ್ಸ್ ಎಂದು ಹೇಳಿದ್ದಾರೆ. ಯಾರು, ಎಷ್ಟೇ ದೊಡ್ಡವರಿದ್ದರೂ ಸಹ ಕ್ರಮ ಆಗಬೇಕು. ವಾಲ್ಮೀಕಿ ಸಮಾಜ ಮುಂದೆ ಬರುವುದೇ ಕಷ್ಟ, ಅಂತಹ ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ದರೆ ಸಹಿಸಲು ಸಾಧ್ಯವಿಲ್ಲ. ಇದರಲ್ಲಿ ವಿರೋಧ ಪಕ್ಷಗಳು ವಿಫಲವಾದರೂ ಸಹ ನಾವು ಬಿಡುವುದಿಲ್ಲ.
| ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್ ಹಿರಿಯ ನಾಯಕ
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್ ಆಯ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 11 =
Remember me
