ಬೆಂಗಳೂರು:ಕೋಟ್ಯಂತರ ರೂ. ಬೆಲೆಬಾಳುವ, ಪುರಾತನ ಕಾಲದ ಆನೆ ದಂತದಿಂದ ಮಾಡಿರುವ ವಾಕಿಂಗ್ ಸ್ಟಿಕ್, ಆಭರಣ ಇಡುವ ಬಾಕ್ಸ್, ಕೈಗಡಗ, ಆನೆಗಳ ಆಕೃತಿ, ಶಂಖ, ನೂರಾರು ವರ್ಷ ಹಳೆಯದಾದ ಅಂಬರ್ ಅನ್ನು ಸಾಗಿಸುತ್ತಿದ್ದ ಆ ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಹಿಮ್ಮತ್ ಸಿಂಗ್, ಪ್ರವೀಣ್ ಸಾಂಬಿಯಾಲ್. ಅಬ್ದುಲ್ ಕಯೂಮ್, ಮಹಮ್ಮದ್ ರಫೀಕ್, ಮೊಹಮ್ಮದ್ ಇಸ್ರಾರ್ ಅಲಿಯಾಸ್​ ಬಾಬು ಮತ್ತು ಅಮ್ಜದ್ ಪಾಷ ಬಂಧಿತರು. ಇವರು ಹರಿಯಾಣ, ಪಂಜಾಬ್, ಬೆಂಗಳೂರು ಮತ್ತು ಮೈಸೂರು ಮೂಲದವರು.
ಪುರಾತನ ಕಾಲದ ಆನೆದಂತಗಳಿಂದ ಮಾಡಿರುವ ವಸ್ತುಗಳನ್ನು ರಾಜ ಮನೆತಗಳಿಂದ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ರಾಜ ಮನೆತನದವರನ್ನು ಸಿಸಿಬಿ ಸಂಪರ್ಕಿಸಿದ್ದು, ಮಾಹಿತಿ ಕೇಳಲಾಗಿದೆ. ವಸ್ತುಗಳು ಮೊಘಲರ ಕಾಲದಲ್ಲಿ ತಯಾರಾಗಿರುವ ರೀತಿ ಕಾಣುತ್ತಿದೆ. ಡೆಹ್ರಾಡೂನ್​ನಲ್ಲಿ ಇರುವ ವೈಲ್ಟ್ ಲೈಫ್ ಇನ್​ಸ್ಟಿಟ್ಯೂಟ್​ಗೆ ಕಳಿಸಿ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ವಶಕ್ಕೆ ಪಡೆದಿರುವ ವಸ್ತುಗಳಿಗೆ ಬೆಲೆ ಕಟ್ಟಲು ಸಾದ್ಯವಾಗಿಲ್ಲ. ಆದರೆ ಕೋಟ್ಯಂತರ ರೂ.ಗೆ ಡೀಲ್ ನಡೆಸಲು ಮುಂದಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.
ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿ… ಎನ್ನುತ್ತಲೇ ಇಂದು ನಡೆಯಬೇಕಿದ್ದ ಬಹುನಿರೀಕ್ಷಿತ ಕಾರ್ಯವನ್ನು ಮುಂದೂಡಿದ ಎಚ್​ಡಿಕೆ!

ಸ್ಕೂಲ್​ ಬಸ್​ಗೆ 3 ವರ್ಷದ ಬಾಲಕಿ ಬಲಿ! ತಾತನ ಮನೆ ಮುಂದೆ ಆಟವಾಡುತ್ತಿರುವಾಗಲೇ ದುರಂತ

ಇಂತಹ ಹೆಂಗಸು ನನಗೆ ಬೇಡ, ಮಗನೇ ನಿನ್ನ ಅಮ್ಮ ಸರಿಯಿಲ್ಲ, ಆಕೆ ಜತೆ ಇರಬೇಡ… ಎಂದು ಮನದ ನೋವು ಬಿಚ್ಚಿಟ್ಟು ದುರಂತ ಅಂತ್ಯ ಕಂಡ ತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 13 =
Remember me
