|ಮಂಜುನಾಥ ಕೆ.ಬೆಂಗಳೂರು
ಬೋಧನೆ ಆರಂಭಿಸಿ ಇನ್ನೂ ಕೆಲ ತಿಂಗಳು ಕಳೆದಿಲ್ಲ. ಎಷ್ಟರ ಮಟ್ಟಿಗೆ ಪಾಠ ಮಾಡಿದ್ದಾರೋ ಗೊತ್ತಿಲ್ಲ? ಅಂಥ ಅನನುಭವಿಗಳೀಗ ದ್ವಿತೀಯ ಪಿಯು ಮೌಲ್ಯಮಾಪನಕ್ಕೆ ನಿಯೋಜಿತರಾಗಿದ್ದಾರೆ! ಹೌದು, ಶಿಕ್ಷಕರ ಕೊರತೆ, ಪಠ್ಯಪುಸ್ತಕಗಳ ಅಲಭ್ಯತೆ, ಪಠ್ಯ ಪರಿಷ್ಕರಣೆಯ ಗೊಂದಲದ ನಡುವೆ ನಲುಗಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ ನಿಡಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾತುರರಾಗಿದ್ದಾರೆ. ಆದರೆ, ಪ್ರೊಬೇಷನರಿ ಅವಧಿಯನ್ನೂ ಪೂರ್ಣಗೊಳಿಸದ, 4-5 ತಿಂಗಳ ಕೆಳಗೆ ಬೋಧಕರಾಗಿ ನೇಮಕಗೊಂಡವರನ್ನೂ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದಾಗಿ ಮೌಲ್ಯಮಾಪನದ ಗುಣಮಟ್ಟ ಕುಸಿಯುವ ಆತಂಕ ಒಂದೆಡೆಯಾದರೆ, ವಿದ್ಯಾರ್ಥಿಗಳ ಭವಿಷ್ಯದ ಜತೆ ಇಲಾಖೆ ಚೆಲ್ಲಾಟವಾಡುತ್ತಿದೆ ಆಕ್ರೋಶವೂ ವ್ಯಕ್ತವಾಗಿದೆ.
ಸರ್ಕಾರವೇ ಹೊಣೆ:ಮೌಲ್ಯಮಾಪನದ ಅನುಭವ ಇಲ್ಲದೆ ಇರುವವರನ್ನು ಆ ಕೆಲಸಕ್ಕೆ ನಿಯೋಜಿಸಿದರೆ ಅವರಿಂದ ಆಗುವ ತಪು್ಪಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ನೇಮಕವಾಗಿ 5 ತಿಂಗಳಾದವರಿಗೂ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಬೇಕೆಂದು ಸಂದೇಶ ಹೋಗಿದೆ. ಕನ್ನಡ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯ ವಿಭಾಗದ ಹೊಸ ಉಪನ್ಯಾಸಕರಿಗೆ ಈ ರೀತಿಯ ಸಂದೇಶ ರವಾನೆಯಾಗಿದೆ. 2020 ಡಿಸೆಂಬರ್​ನಲ್ಲಿ ನೇಮಕಗೊಂಡ ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ನಿಯೋಜಿಸಲಾಗಿದೆ.
ನಿಯಮವೇನು?:ಗುಣಮಟ್ಟ ಕಾಪಾಡಲು, ಸರ್ಕಾರಿ ಮತ್ತು ಅನುದಾನರಹಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 3 ವರ್ಷಕ್ಕೂ ಹೆಚ್ಚು ಬೋಧನಾನುಭವವಿರುವ ಉಪನ್ಯಾಸಕರನ್ನು ಮೌಲ್ಯಮಾಪನ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂಬ ನಿಯಮವಿದೆ. ಜತೆಗೆ, 5 ವರ್ಷಕ್ಕೂ ಹೆಚ್ಚು ಅನುಭವವಿರುವ ಅನುದಾನರಹಿತ ಸಂಸ್ಥೆಗಳ ಉಪನ್ಯಾಸಕರನ್ನು ಬಳಸಿಕೊಳ್ಳಬಹುದು. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕೂಡ ಭರವಸೆ ನೀಡಿದ್ದರು. ಅದು ಭರವಸೆಯಾಗಿಯೇ ಉಳಿದಂತಾಗಿದೆ.
ಅನುಭವವಿರದ ಉಪನ್ಯಾಸಕರಿಗೆ ದ್ವಿತೀಯ ಪಿಯು ಮೌಲ್ಯಮಾಪನಕ್ಕೆ ಹಾಜರಾಗಲು ಸಂದೇಶ ಹೋಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅಂಥವರು ಇದ್ದಲ್ಲಿ ಇಲಾಖೆ ಗಮನಕ್ಕೆ ತಂದರೆ ಸರಿಪಡಿಸಲಾಗುವುದು.
|ಆರ್. ರಾಮಚಂದ್ರನ್ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ
ಸಾವಿರಾರು ತಪ್ಪುಗಳು:ಅಸಮರ್ಪಕ ಮೌಲ್ಯಮಾಪನದಿಂದ ಕಳೆದ 3 ವರ್ಷದ ಅವಧಿಯಲ್ಲಿ (2019- 21) 2,777 ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಿದ್ದರು. ಈ ಬಾರಿಯೂ ಅಂತಹ ಸಮಸ್ಯೆ ತಲೆದೋರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಕಲಬುರಗಿ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ಹೊಸ ಉಪನ್ಯಾಸಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಗಳಿಕೆಗಾಗಿ ಗೈರು?:ಹಿರಿಯ ಉಪನ್ಯಾಸಕರು ಗೈರಾಗಿರುವ ಹಿನ್ನೆಲೆಯಲ್ಲಿ ಪ್ರೊಬೆಷನರಿ ಅವಧಿಯಲ್ಲಿರುವ ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ನಿಯೋಜಿಸಲಾಗಿದೆ. ಹಲವು ಹಿರಿಯ ಉಪನ್ಯಾಸಕರು ನಕಲಿ ವೈದ್ಯಕೀಯ ಸರ್ಟಿಫಿಕೆಟ್ ನೀಡಿ ಮೌಲ್ಯಮಾಪನದಿಂದ ವಿನಾಯಿತಿ ಪಡೆದುಕೊಳ್ಳುವ ಚಾಳಿ ಮೊದಲಿನಿಂದಲೂ ಇದೆ. ಕೆಲವರು ನೀಟ್, ಸಿಇಟಿಗೆ ಟ್ಯೂಷನ್ ಹೇಳಿಕೊಡುವು ದರಲ್ಲಿ ಬಿಜಿಯಾಗಿ ಮೌಲ್ಯಮಾಪನಕ್ಕಿಂತ ಗಳಿಕೆಯ ಹಾದಿ ಹಿಡಿದಿದ್ದಾರೆ ಎಂಬುದು ಉಪನ್ಯಾಸಕರ ವಲಯದಲ್ಲಿಯೇ ಕೇಳಿಬರುವ ದೂರು.
ಪ್ರೊಬೇಷನರಿ ಅವಧಿಯಲ್ಲಿದ್ದೇನೆ:ಉಪನ್ಯಾಸಕ ಹುದ್ದೆಗೆ ನೇಮಕವಾಗಿ ಒಂದೂವರೆ ವರ್ಷವಾಗಿದೆ. ನಾನಿನ್ನೂ ಪ್ರೊಬೆಷನರಿ ಅವಧಿಯಲ್ಲಿ ಇದ್ದೇನೆ. ಮೌಲ್ಯಮಾಪನದ ಬಗ್ಗೆ ನನಗೆ ಯಾವುದೇ ಅನುಭವವಿಲ್ಲ. ಸರಿಯಾದ ಮೌಲ್ಯಮಾಪನ ಸಾಧ್ಯವಾಗದಿದ್ದರೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಕನ್ನಡ ಉಪನ್ಯಾಸಕರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.
ಯಾವ ಹುಡ್ಗಿಯೂ ಮದ್ವೆಗೆ ಒಪ್ಪಲಿಲ್ಲ ಎಂದು ಬೇಸತ್ತ ಯುವಕ ಆತ್ಮಹತ್ಯೆ!

ಉಡುಪಿಯಲ್ಲೊಂದು ಪವಾಡ! ಕಳೆದುಹೋಗಿದ್ದ ಚಿನ್ನದ ಸರ ವಾಪಸ್ ಕೊಡಿಸಿದ ದೇವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 18 =
Remember me
