ವರಮಹಾಲಕ್ಷ್ಮಿ ಹಬ್ಬವೆಂದರೆ, ಅತ್ಯಂತ ಸಂತೋಷ ಏಕಂದರೆ, ಬೇಡಿದ ವರವನ್ನು ದೇವಿ ನೀಡುತ್ತಾಳೆ ಎನ್ನುವ ಕಾರಣದಿಂದ ಮಹಿಳೆಯರಿಗೆ ಈ ಹಬ್ಬ ವಿಶೇಷ. ಈ ಹಬ್ಬದಂದು ಸಿಹಿ ಅಡುಗೆ ಮಾಡಬೇಕು ಎಂದುಕೊಂಡಿರುವ ಮಹಿಳೆಯರಿಗಾಗಿ ನಾವು ಇಂದು ಗಸಗಸೆ ಹಾಗೂ ಕಾಯಿ ಹೋಳಿಗೆ ಮಾಡುವ ವಿಧಾನ ಹೇಳುತ್ತೇವೆ.

ಗಸಗಸೆ ಪಾಯಸ:ಬೇಕಾಗುವ ಸಾಮಗ್ರಿಗಳು:ಗಸಗಸೆ – ಅರ್ಧ ಕಪ್​ಕೊಬ್ಬರಿ ತುರಿ – ಅರ್ಧ ಸ್ವಲ್ಪಏಲಕ್ಕಿ, ಲವಂಗ – 2ಬಾದಾಮಿ,ಗೋಡಂಬಿ, ಒಣದ್ರಾಕ್ಷಿ- ಸ್ವಲ್ಪಬೆಲ್ಲದ ಪುಡಿ – ಅರ್ಧ ಕಪ್​ಕಾಯಿಸಿದ ಹಾಲು – 1 ಲೋಟಅಕ್ಕಿ – 3 ಚಮಚತುಪ್ಪ – 3 ಚಮಚ
ಮಾಡುವ ವಿಧಾನ:* ಗಸಗಸೆ, ಅಕ್ಕಿ ಬೇರೆಬೇರೆಯಾಗಿ ಹುರಿದು ತೆಗೆದಿಟ್ಟುಕೊಳ್ಳಬೇಕು.* ಹಸಿ ಕೊಬ್ಬರಿ ತುರಿ, ಅಕ್ಕಿ ಮತ್ತು ಗಸಗಸೆ ಸೇರಿಸಿ ನುಣ್ಣಗೆ ರುಬ್ಬಿ ಸ್ವಲ್ಪ ನೀರು ಸೇರಿಸಿ ಒಂದು ಪಾತ್ರೆಗೆ ಹಾಕಿಕೊಂಡು ಒಂದು ಕುದಿ ಕುದಿಯಲು ಇಟ್ಟುಕೊಳ್ಳಬೇಕು. ಸ್ವಲ್ಪ ಮಸಯದ ನಂತರ ಹಾಲು ಹಾಗೂ ಬೆಲ್ಲ, ಏಲಕ್ಕಿ. ಲವಂಗ ಪುಡಿ ಮಾಡಿ ಸೇರಿಸಿ ಚೆನ್ನಾಗಿ ಕುದಿಸಿಬೇಕು.* ತುಪ್ಪದಲ್ಲಿ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಸ್ವಲ್ಪ ಹುರಿದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಗಸಗಸೆ ಪಾಯಸ ಸಿದ್ದವಾಗುತ್ತದೆ.
ಕಾಯಿ ಹೋಳಿಗೆ:ಬೇಕಾಗುವ ಸಾಮಗ್ರಿಗಳು:ಮೈದಾ ಹಿಟ್ಟು – 2ಕಪ್ಅಡುಗೆಎಣ್ಣೆ – ಅರ್ಧ ಕಪ್​​ತೆಂಗಿನ ತುರಿ – 2 ಕಪ್ಬೆಲ್ಲ – 1 ಕಪ್ಏಲಕ್ಕಿ ಪುಡಿ – ಅರ್ಧ ಚಮಚಅರಸಿನ ಪುಡಿ – ಅರ್ಧ ಚಮಚಉಪ್ಪು – ಸ್ವಲ್ಪ ( ಬೇಕಾದಲ್ಲಿ ಮಾತ್ರ)
ಮಾಡುವ ವಿಧಾನ:* ಒಂದು ಪಾತ್ರೆಗೆ 2 ಕಪ್ ಮೈದಾ ಹಿಟ್ಟು, ಅರಸಿನಪುಡಿ, ಉಪ್ಪು, ಅಡುಗೆ ಎಣ್ಣೆ, ಸ್ವಲ್ಪ ನೀರು ಹಾಕಿ ಮೆತ್ತಗೆ ಕಲಸಿಟ್ಟುಕೊಳ್ಳಿ.* ಈಗ ಒಂದು ಪಾತ್ರೆಗೆ 2 ಕಪ್ ತೆಂಗಿನ ತುರಿಯನ್ನು ತರಿ ತರಿಯಾಗಿ ರುಬ್ಬಿ ಹಾಕಿ.* ಒಂದು ಬಾಣಲೆಗೆ ಬೆಲ್ಲ, ನೀರು ಹಾಕಿ ಬೆಲ್ಲ ಕರಗುವ ತನಕ ಬಿಸಿಮಾಡಿ. ತರಿ ತರಿಯಾಗಿ ರುಬ್ಬಿದ ತೆಂಗಿನ ತುರಿ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ.* ನಂತರ ಕಲಸಿಟ್ಟ ಮೈದಾ ಹಿಟ್ಟಿನಿಂದ ಸಣ್ಣ ಉಂಡೆ ತೆಗೆದುಕೊಂಡು, ಬೆರಳುಗಳಿಂದ ಅಗಲ ಮಾಡಿ. ಈಗ ಕಾಯಿ ಹೂರಣವನ್ನು ಇದರ ಒಳಗಡೆ ಇಟ್ಟು, ಹೂರಣ ತುಂಬಿದ ಹಿಟ್ಟಿನ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.* ನಂತರ ಒಂದು ಬೇಕಿಂಗ್ ಹಾಳೆಯ ಮೇಲೆ ಎಣ್ಣೆ ಸವರಿ, ಹೂರಣ ತುಂಬಿದ ಹಿಟ್ಟಿನ ಉಂಡೆಗಳನ್ನು ಲಟ್ಟಿಸಿಕೊಳ್ಳಿ. ನಂತರ ಬೇಕಿಂಗ್ ಹಾಳೆಯಿಂದ ಬೇರ್ಪಡಿಸಿ ತವಾಗೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿದರೆ ರುಚಿಯಾದ ಕಾಯಿ ಹೋಳಿಗೆ ಸಿದ್ಧವಾಗುತ್ತದೆ.
ಆರೋಗ್ಯಕ್ಕೂ ರುಚಿಗೂ ಬೆಸ್ಟ್ ಸಬ್ಬಕ್ಕಿ ದೋಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
