ಬೆಂಗಳೂರು:ರೂಪಾಂತರಿ ಕರೊನಾ ವೈರಸ್​ ಮಾರಿ ರಾಜ್ಯಕ್ಕೆ ಎಂಟ್ರಿ ನೀಡಿರುವುದು ತೀವ್ರ ಆತಂಕಕ್ಕೆ ಎಡಿಮಾಡಿಕೊಟ್ಟಿದೆ. ಸಿಲಿಕಾನ್​ ಸಿಟಿಯ ಮೂವರಿಗೆ ಹೊಸ ತಳಿಯ ವೈರಸ್​ ತಗುಲಿರುವುದು ದೃಢಪಟ್ಟಿದೆ. ಮೊದಲೇ ವೇಗವಾಗಿ ಹರಡುವ ವೈರಸ್​ ಆಗಿರುವುದರಿಂದ ನಗರದಲ್ಲಿ ಮತ್ತೆ ಲಾಕ್​ಡೌನ್​ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇಡೀ ದೇಶದಲ್ಲಿ ರೂಪಾಂತರಿ ಕರೊನಾ ವೈರಸ್​ ಬೆಂಗಳೂರು ಮತ್ತು ಹೈದರಾಬಾದ್​ನಲ್ಲಿ ಮಾತ್ರ ಪತ್ತೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮೂವರಿಗೆ ರೂಪಾಂತರ ಮಾರಿ ಅಂಟಿದೆ. ಡಿಸೆಂಬರ್ 19ರಂದು ಬ್ರಿಟನ್​ನಿಂದ ಬೆಂಗಳೂರಿಗೆ ಬಂದಿದ್ದ ಉತ್ತರಹಳ್ಳಿಯ ವಸಂತಪುರದ ತಾಯಿ-ಮಗು ಸೇರಿ ಮೂವರಿಗೆ ರೂಪಾಂತರಿ ವೈರಸ್​ ತಗುಲಿದೆ. ತಾಯಿ-ಮಗು ಶ್ರೀ ಸಾಯಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಈಗಾಗಲೇ ಮೂವರ ಜತೆ ಸಂಪರ್ಕಕ್ಕೆ ಬಂದವರನ್ನು ಸರ್ಕಾರ ಕ್ವಾರಂಟೈನ್ ಮಾಡಿ, ಪರೀಕ್ಷೆ ಒಳಪಡಿಸಿದೆ. ಅಲ್ಲದೆ ಅವರು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್ ಕೂಡ ಸೀಲ್ ಡೌನ್ ಮಾಡಿದೆ.
ಇದನ್ನೂ ಓದಿ:ಹೆಂಡತಿಯ ಕಾಟ ತಾಳಲಾರದೆ ಮಗನೊಂದಿಗೆ ಬಾವಿಗೆ ಹಾರಿದ ಪತಿ! ಮಲತಾಯಿ ಧೋರಣೆಗೆ ಬಾಲಕ ಬಲಿ
ರೂಪಾಂತರಿ ವೈರಸ್​ ಬ್ರಿಟನ್​ನಲ್ಲಿ ಪತ್ತೆಯಾಗಿದೆ ಎಂಬ ವಿಚಾರ ಬೆಳಕಿಗೆ ಬಂದಾಗಲೇ ಕೇಂದ್ರ ಸರ್ಕಾರ ಬ್ರಿಟನ್​ ವಿಮಾನ ಹಾರಾಟ ನಿಷೇಧಿಸಿದೆ. ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಈ ಹಿನ್ನೆಲೆಯಲ್ಲಿಯೇ ಸಚಿವ ಸುಧಾಕರ್ ಇತ್ತೀಚೆಗೆ ನೈಟ್ ಕರ್ಫ್ಯೂ ಪ್ರಸ್ತಾಪವನ್ನು ಮುಂದಿಟ್ಟು ಅದನ್ನು ಜಾರಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಕರ್ಫ್ಯೂ ನಿರ್ಧಾರವನ್ನು ಜಾರಿಗೊಳಿಸುವ ಮೊದಲೇ ಹಿಂತೆಗೆದುಕೊಂಡಿತು.
ಈಗ ಇಡೀ ದೇಶದಲ್ಲಿ ಬೆಂಗಳೂರಿನಲ್ಲೇ ಅತಿ ಹೆಚ್ಚು ರೂಪಾಂತರಿ ಕರೊನಾ ಪತ್ತೆಯಾಗಿರುವುದರಿಂದ ಸರ್ಕಾರ ಪುನಃ ನೈಟ್ ಕರ್ಫ್ಯೂ, ಲಾಕ್‌ಡೌನ್, ಸೀಲ್ ಡೌನ್ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳುತ್ತದೆಯೇ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಕಂಡುಬರುತ್ತಿದೆ.
ಇದನ್ನೂ ಓದಿ:ಕ್ರಿಸ್​ಮಸ್​ ಉಡುಗೊರೆಯಾಗಿ ಪ್ರೇಯಸಿಯ ಡಿಎನ್​ಎ ಪರೀಕ್ಷೆ ಮಾಡಿಸಿದ ಬಾಯ್​ಫ್ರೆಂಡ್​ಗೆ ಕಾದಿತ್ತು ಶಾಕ್​!
ಇಂದು ಬೆಳಗ್ಗೆ ಬ್ರಿಟನ್ ಕರೊನಾದ ವಿಷಯ ಹೊರಬರುತ್ತಿದ್ದಂತೆಯೇ ಸಚಿವ ಸುಧಾಕರ್ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅದು ಹರಡದಂತೆ ತಡೆಯುವ ನಿಟ್ಟಿನಲ್ಲಿ ಏನೇನು ಮಾಡಬಹುದು ಎಂಬ ಬಗ್ಗೆ ಚರ್ಚಿಸಿದ್ದಾರೆ. ಮತ್ತೆ ರಾಜ್ಯದಲ್ಲಿ ಲಾಕ್‌ಡೌನ್ ಮಾಡುವುದಿಲ್ಲ ಎಂಬುದಾಗಿ ಅವರು ಹೇಳಿದ್ದಾರಾದರೂ, ಈ ಹೊಸ ತಳಿಯ ಕರೊನಾ ಹೇಗೆ ಹರಡುತ್ತದೆ ಎಂಬುದನ್ನು ಆಧರಿಸಿ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಹೊಸ ವರ್ಷದ ಆಚರಣೆಯ ಪಾರ್ಟಿಗಳನ್ನು ಸರ್ಕಾರ ಈಗಾಗಲೇ ನಿಷೇಧಿಸಿದ್ದರೂ ವೈಯಕ್ತಿಕವಾಗಿ ಕುಟುಂಬಸ್ಥರು, ಸ್ನೇಹಿತರು ಸೇರಿ ಪಾರ್ಟಿ ಮಾಡುವುದಕ್ಕೆ ಸೇರಿಯೇ ಸೇರುತ್ತಾರೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಲಾಕ್‌ಡೌನ್ ಮಾಡಿದರೆ ಇದಕ್ಕೆಲ್ಲ ಅವಕಾಶ ಇರುವುದಿಲ್ಲ ಎಂಬ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಕೇರಳದ ಲತಿಕಾ ಮನೆಗೆ ಸುದೀಪ್ ಭೇಟಿ; 15 ವರ್ಷದ ಹಿಂದಿನ ‘ಆಟೋಗ್ರಾಫ್​’ ದಿನಗಳನ್ನು ನೆನೆದ ಕಿಚ್ಚ
ಬ್ರಿಟನ್ ವೈರಾಣು ಸೋಂಕು ತಾಯಿ, ಮಗು ಮತ್ತೊಬ್ಬ ವ್ಯಕ್ತಿಗೆ ದೃಢ ಅಂದ್ರು ಆರೋಗ್ಯ ಸಚಿವ

ಬೆಂಗಳೂರಲ್ಲೂ ಪತ್ತೆಯಾಯಿತು ರೂಪಾಂತರಿ ಕೋವಿಡ್​ !

ಸಿಲಿಕಾನ್​ ಸಿಟಿಯ ಮೂವರಿಗೆ ರೂಪಾಂತರಿ ಮಾರಿ: ಅಪಾರ್ಟ್​ಮೆಂಟ್​ನಲ್ಲೇ 35 ಮಂದಿ ಕ್ವಾರಂಟೈನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 8 =
Remember me
