ಬೆಂಗಳೂರು:ದೇಶ ಸಂಕಷ್ಟ ಪರಿಸ್ಥಿತಿಯಲ್ಲಿದ್ದು ನಿಮ್ಮ ನೇತೃತ್ವದ ಅಗತ್ಯವಿದೆ. ನೀವು ಕರ್ನಾಟಕಕ್ಕೆ ಸೀಮಿತವಲ್ಲ, ಇಡೀ ದೇಶಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಕೇರಳ. ಮಹಾರಾಷ್ಟ್ರ, ಗುಜರಾತ್, ಹರಿಯಾಣ ಸೇರಿ ವಿವಿಧ ರಾಜ್ಯಗಳ ಜೆಡಿಎಸ್ ನಾಯಕರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಒತ್ತಾಯಿಸಿದರು.
ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಮಹಾಧಿವೇಶನದಲ್ಲಿ ಮಾತನಾಡಿದ ಮುಖಂಡರು, ದೇವೇಗೌಡರು ದೆಹಲಿಗೆ ಬರಬೇಕು. ಬಿಜೆಪಿ ವಿರುದ್ಧ ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು. ಪ್ರಾದೇಶಿಕ ಹಾಗೂ ಜಾತ್ಯತೀತ ಪಕ್ಷಗಳನ್ನು ಒಟ್ಟುಗೂಡಿಸ ಬೇಕು. ದೇಶವನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಆಗ್ರಹಿಸಿದರು.
ಅಧಿವೇಶನ ಉದ್ಘಾಟಿಸಿ ಮಾತನಾಡಿದ ಎಚ್.ಡಿ.ದೇವೇಗೌಡ, ಜನತಾ ಪರಿವಾರದಲ್ಲಿದ್ದು ಬೇರೆ ಬೇರೆ ಪಕ್ಷಗಳಿಗೆ ಹೋಗಿರುವವರು ಮತ್ತು ತಟಸ್ಠರಾಗಿ ರುವವರನ್ನು ಮತ್ತೆ ಪಕ್ಷಕ್ಕೆ ಕರೆ ತರುತ್ತೇನೆ. ಕೇರಳದಲ್ಲಿ ಈಗಾಗಲೇ ಆ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ. ಕರ್ನಾಟಕದಲ್ಲೂ ನಾನೇ ಎಲ್ಲರ ಮನೆ ಬಾಗಿಲಿಗೆ ಹೋಗಿ ಕರೆತರುತ್ತೇನೆ. 2023ಕ್ಕೆ ಚುನಾವಣೆ ಬರುತ್ತೋ ಅದಕ್ಕೆ ಮೊದಲು ಬರುತ್ತೋ? ನನ್ನ ಪಕ್ಷವನ್ನು ಸಜ್ಜುಗೊಳಿಸುವುದು ನನ್ನ ಮೊದಲ ಕೆಲಸ ಎಂದರು.
ಜೆಡಿಎಸ್ ಎಲ್ಲಿದೆ ಎಂದು ಅನೇಕರು ವ್ಯಂಗ್ಯ ಮಾಡುತ್ತಿದ್ದವರಿಗೆ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಉತ್ತರ ನೀಡಿದೆ ಎಂದು ಟಾಂಗ್ ಕೊಟ್ಟರು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅನೇಕ ಜನ ಸ್ನೆಹಿತರಿದ್ದಾರೆ. ಅವರಿಗೆ ಯಾರಿಗೂ ಎರಡು ಪಕ್ಷದಲ್ಲಿ ಇರೋಕೆ ಇಷ್ಟ ಇಲ್ಲ. ಆದರೆ ಕೆಲವು ಅಧಿಕಾರಶಾಹಿಗಳಿಗೆ ಹೆದರಿ ಆ ಪಕ್ಷದಲ್ಲಿದ್ದಾರೆ. ಇದು ತಮಾಷೆಯ ಮಾತಲ್ಲ ಎಂದು ಹೇಳಿದರು.
ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ದೆಹಲಿಯಲ್ಲಿ ಆಪ್ ಗೆಲುವು ಸಾಧಿಸಿರುವ ರೀತಿ ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವಂತಾಗಬೇಕು. ಕೇಜ್ರಿವಾಲ್ ಅವರಿಂದ ಆಗಿರುವುದು ನಮ್ಮಿಂದ ಏಕೆ ಆಗುವುದಿಲ್ಲ? ಅಧಿಕಾರ ಇದ್ದರೆ ಮಾತ್ರ ಜನ ನಮ್ಮ ಕಡೆಗೆ ನೋಡುತ್ತಾರೆ ಎಂದರು. ಕೇರಳದಲ್ಲಿ ಸಚಿವರಾಗಿರುವ ಮ್ಯಾಥೂ ಥಾಮಸ್, ಜೆಡಿಎಸ್ ಬಿಹಾರ ಘಟಕದ ರಾಜ್ಯಾಧ್ಯಕ್ಷ ಮಿಶ್ರಾ, ಉತ್ತರಾಖಂಡ ಅಧ್ಯಕ್ಷ ಸಿಂಗ್, ಕರ್ನಾಟಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತಾ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪುರ, ಲೀಲಾದೇವಿ ಆರ್.ಪ್ರಸಾದ್, ಕೋನರೆಡ್ಡಿ ಮತ್ತಿತರರಿದ್ದರು.
ನಿರ್ಣಯ ಅಂಗೀಕಾರ
ಎಚ್​ಡಿಕೆ ಗೈರು
ಮಾಜಿ ಸಿಎಂ ಕುಮಾರಸ್ವಾಮಿ ಜ್ವರದಿಂದ ಬಳಲುತ್ತಿದ್ದ ಕಾರಣ ಮಹಾಧಿವೇಶನಕ್ಕೆ ಹಾಜರಾಗಿರಲಿಲ್ಲ. ಮಧು ಬಂಗಾರಪ್ಪ ಹಾಗೂ ಜಿ.ಟಿ.ದೇವೇಗೌಡ ಸೇರಿ ಬಹುತೇಕರು ಗೈರು ಹಾಜರಾಗಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
