ಬೆಂಗಳೂರು : ಮಾಜಿ ಸಚಿವ ಆರ್. ವರ್ತೂರ್ ಪ್ರಕಾಶ್ ಅವರನ್ನು ಅಪಹರಣ ಮಾಡಿ 30 ಕೋಟಿ ರೂ. ಬೇಡಿಕೆ ಒಡ್ಡಿದ ಎಂಟು ದುಷ್ಕರ್ಮಿಗಳ ಗ್ಯಾಂಗ್ ಚಿತ್ರ ಹಿಂಸೆ ಕೊಟ್ಟು 48 ಲಕ್ಷ ರೂ. ಸುಲಿಗೆ ಮಾಡಿದೆ. ವರ್ತೂರ್ ಪ್ರಕಾಶ್ ಮಂಗಳವಾರ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದು, ಆರೋಪಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ಬಲೆಬೀಸಿದೆ.
ವರ್ತೂರ್ ಪ್ರಕಾಶ್, ತನ್ನ ದೂರಿನಲ್ಲಿ ‘ನ.25ರ ಸಂಜೆ 7 ಗಂಟೆಯಲ್ಲಿ ಕೋಲಾರದ ಬೆಗ್ಲಿಹೊಸಹಳ್ಳಿ ಗ್ರಾಮದ ಫಾರಂ ಹೌಸ್‌ನಿಂದ ನನ್ನ ಕಾರು ಚಾಲಕ ಸುನೀಲ್ ಜತೆ ಫಾರ್ಚೂನರ್ ಕಾರಿನಲ್ಲಿ ಕೋಲಾರ ನಗರಕ್ಕೆ ತೆರಳುತ್ತಿದ್ದೆ. ಮಾರ್ಗಮಧ್ಯೆ ಅಪರಿಚಿತರು ಏಕಾಏಕಿ ಕಾರನ್ನು ಅಡ್ಡಗಟ್ಟಿ ಇನ್ನೊಂದು ಕಾರನ್ನು ಹಿಂದೆ ನಿಲ್ಲಿಸಿಕೊಂಡು ನನಗೆ ಇಳಿಯುವಂತೆ ಸೂಚಿಸಿದರು.
ಇಳಿಯದೆ ಇದ್ದಾಗ ಲಾಂಗ್‌ಗಳನ್ನು ತೋರಿಸಿ ಕಾರಿನಿಂದ ಕೆಳಗೆ ಎಳೆದು ನನ್ನ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದರು. ನನ್ನ ಮತ್ತು ನನ್ನ ಚಾಲಕ ಸುರೇಶ್‌ನನ್ನು ನಿರ್ಜನ ಪ್ರದೇಶದಲ್ಲಿ ಕೂಡಿ ಹಾಕಿ 30 ಕೋಟಿ ರೂ. ತರಿಸಿ ಕೊಡುವಂತೆ ಬೆದರಿಕೆ ಒಡ್ಡಿದರು. ಅದಕ್ಕೆ ಒಪ್ಪದೆ ಇದ್ದಾಗ 2 ತೋಳು ಮತ್ತು ಕಾಲುಗಳಿಗೆ ಹಗ್ಗದಿಂದ ಕಟ್ಟಿ ಲಾಂಗ್ ಮತ್ತು ರಾಡ್‌ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದರು. ಚಾಲಕನಿಗೂ ನಿಮ್ಮ ಬಾಸ್‌ಗೆ ಹಣ ತರಿಸಿಕೊಡುವಂತೆ ಹೇಳುವಂತೆ ಚಿತ್ರ ಹಿಂಸೆನೀಡಿದರು.
ನ.26ರಂದು ಅಪಹರಣಕಾರರ ಹಿಂಸೆಯನ್ನು ತಾಳಲಾರದೇ ನಯಾಜ್ ಎಂಬಾತನ ಮೂಲಕ ಕೋಲಾರದ ಕಾಫಿ ಡೇ ಬಳಿ 48 ಲಕ್ಷ ರೂ. ತರಿಸಿದೆ. ಆ ಹಣವನ್ನು ದುಷ್ಕರ್ಮಿಗಳ ಕಡೆಯವರು ನಯಾಜ್ ಕಡೆಯಿಂದ ಪಡೆದುಕೊಂಡಿದ್ದಾರೆ. ಆನಂತರ ಮತ್ತೆ ಹಿಂಸೆ ಮುಂದುವರೆಸಿ ಉಳಿಕೆ ಹಣಕ್ಕೆ ಪೀಡಿಸಿದರು. ಹಣ ಕೊಡದಿದ್ದರೇ ಕೊಲೆ ಮಾಡುವುದಾಗಿ ಬೆದರಿಸಿದರು.
ನ.28ರ ಮುಂಜಾನೆವರೆಗೂ ಹಿಂಸೆ ಮುಂದುವರೆದಿದ್ದು, ನನಗೆ ಹಣ ನೀಡಲು ಸಾಧ್ಯವಾಗದೆ ಇದ್ದಾಗ ಚಾಲಕನಿಗೆ ಚಿತ್ರಹಿಂಸೆ ನೀಡಿದರು. ರಾಡು ಮತ್ತು ಮಚ್ಚಿನಿಂದ ತಲೆಗೆ ಹೊಡೆದು ತಡರಾತ್ರಿ 1 ಗಂಟೆಯಲ್ಲಿ ನನ್ನ ಚಾಲಕ ಮೂರ್ಛೆ ತಪ್ಪಿದ. ಭಯಗೊಂಡ ದುಷ್ಕರ್ಮಿಗಳು ಚಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಸ್ವಲ್ಪ ದೂರದಲ್ಲಿ ಡ್ರಿಂಕ್ಸ್ ಮಾಡುತ್ತಿದ್ದರು. ಸ್ವಲ್ಪ ಹೊತ್ತಿಗೆ ಚಾಲಕನಿಗೆ ಜ್ಞಾನ ಸ್ಥಳದಿಂದ ತಪ್ಪಿಸಿಕೊಂಡ. ನೋಡಿದ ದುಷ್ಕರ್ಮಿಗಳು 2 ಗಂಟೆ ಕಾಲ ಆತನನನ್ನು ಹುಡುಕಾಟ ನಡೆಸಿದರು. ಕೊನೆಗೆ ತಪ್ಪಿಸಿಕೊಂಡ ಚಾಲಕ, ಪೊಲೀಸರಿಗೆ ಮಾಹಿತಿ ಕೊಡುತ್ತಾನೆ ಎಂಬ ಭಯಕ್ಕೆ ಹೊಸಕೋಟೆ ಬಳಿ ಇರುವ ಶಿವನಾಪುರ ಗ್ರಾಮದ ಮೈದಾನದಲ್ಲಿ ಬೆಳಗಿನ ಜಾವ 4 ಗಂಟೆಯಲ್ಲಿ ಕಾರಿನಿಂದ ನನ್ನ ತಳ್ಳಿ ಏನಾದರೂ ಪೊಲೀಸರಿಗೆ ದೂರು ಕೊಟ್ಟರೇ ನಿನ್ನ ಮತ್ತು ನಿನ್ನ ಮಕ್ಕಳನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿ ಹೋದರು. ಅಲ್ಲಿಂದ ರಸ್ತೆಗೆ ಬಂದು ಸಾರ್ವಜನಿಕರ ಕಾರು ನಿಲ್ಲಿಸಿ ಅದರಲ್ಲಿ ಕೆ.ಆರ್.ಪುರಕ್ಕೆ ಬಂದು ಸತ್ಯಸಾಯಿ ಆರ್ಥೋಪಿಡಿಕ್ ಆಸ್ಪತ್ರೆ ಡ್ರಾಪ್ ಪಡೆದು ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದೆ.
ಡಿ.1ರಂದು ನನ್ನ ಕಾರು ಬೆಳ್ಳಂದೂರು ಠಾಣೆಯಲ್ಲಿ ಇರುವುದಾಗಿ ತಿಳಿಯಿತು. ಈ ಹಿನ್ನೆಲೆಯಲ್ಲಿ ಠಾಣೆಗೆ ಬಂದು ದೂರು ದಾಖಲಿಸಿದ್ದೆನೆ. ಅಪಹರಣ ಮಾಡಿ ಹಲ್ಲೆ ನಡೆಸಿ 48 ಲಕ್ಷ ರೂ. ಸುಲಿಗೆ ಮಾಡಿ 3 ದಿನಗಳ ಕಾಲ ಹಿಂಸೆ ಕೊಟ್ಟ ಆರೋಪಿಗಳ ಬಂಧಿಸುವಂತೆ ದೂರಿನಲ್ಲಿ ವರ್ತೂರು ಪ್ರಕಾಶ್ ಮನವಿ ಮಾಡಿದ್ದಾರೆ. ಈ ಮೇರೆಗೆ ಬೆಳ್ಳಂದೂರು ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನ್ಯಾಪ್! ಖಾರದ ಪುಡಿ ಎರಚಿ ಚಿತ್ರಹಿಂಸೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 12 =
Remember me
