ಬೆಂಗಳೂರು:ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮಹಿಳಾ ಐಪಿಎಸ್​ ಅಧಿಕಾರಿಯೊಬ್ಬರು ತಮ್ಮ ಪತಿಯ ವಿರುದ್ಧ ನಗರದ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪತಿ ನಿತೀನ್ ಸುಬಾಶ್ ಮತ್ತು ಕುಟುಂಬಸ್ಥರ ವಿರುದ್ಧ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ. ನಿತೀನ್ ಸುಬಾಶ್ ಸೇರಿದಂತೆ ಒಟ್ಟು 7 ಮಂದಿಯ ವಿರುದ್ಧ ಎಫ್​ಐಆರ್ ದಾಖಲಾಗಿದೆ.
ಇದನ್ನೂ ಓದಿರಿ:ವಿಕ್ರಮನ ಸಾಹಸಗಳು; ಇನ್​ಸ್ಪೆಕ್ಟರ್ ವಿಕ್ರಂ ಸಿನಿಮಾ ವಿಮರ್ಶೆ
2009ರ ಬ್ಯಾಚ್​​ನ ಅಧಿಕಾರಿ ಅಗಿರುವ ವರ್ತಿಕಾ 2011 ರಲ್ಲಿ ವಿವಾಹ ಅಗಿದ್ದರು. ಐಎಫ್​ಎಸ್​ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿಯಾಗಿರುವ ನಿತೀನ್​, ಕೆಲ ರಾಯಬಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಪತಿಗೆ ಕುಡಿಯುವ‌‌ ಮತ್ತು ಧೂಮಪಾನ ಮಾಡುವ ಅತಿಯಾದ ಚಟವಿದೆ. ಇದನ್ನು ಬಿಡುವಂತೆ ಹಲವು ಬಾರಿ ಹೇಳಿದಾಗಲು ಜಗಳ ಮಾಡಿ ಹಲ್ಲೆ ಮಾಡಿದ್ದಾರೆ. 2016ರಲ್ಲಿ ಇದೇ ವಿಚಾರಕ್ಕೆ ಹಲ್ಲೆ ಮಾಡಿದಾಗ ಕೈ ಮುರಿದು ಹೋಗಿತ್ತು ಎಂದು ವರ್ತಿಕಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೀಪಾವಳಿಗೆ ಉಡುಗೊರೆ ನೀಡಲಿಲ್ಲ ಎಂದು ವಿಚ್ಛೇದನದ ಬೆದರಿಕೆ ಹಾಕಿದ್ದರು. ಮದುವೆಯ ಸಂದರ್ಭದಲ್ಲಿ ಚಿನ್ನಾಭರಣ ಪಡೆದುಕೊಂಡಿದ್ದಾರೆ. ಅಲ್ಲದೆ ಹಣಕ್ಕಾಗಿ ಪದೇ ಪದೇ ಪಿಡಿಸುತ್ತಿದ್ದಾರೆ. ನನ್ನ ಅಜ್ಜಿಯ ಬಳಿ ಐದು ಲಕ್ಷದ ಚೆಕ್ ಪಡೆದಿದ್ದ ನಿತೀನ್, ಮನೆ ಮಾಡುವಾಗ 35 ಲಕ್ಷ ಹಣ ಪಡೆದಿದ್ದರು. ಇದೀಗ ಇನ್ನು ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾರೆಂದು ವರ್ತಿಕಾ ಆರೋಪಿಸಿದ್ದಾರೆ.
ಇದನ್ನೂ ಓದಿರಿ:ಕಾಣದ ನೆರಳಲ್ಲಿ ಆತ್ಮದ ಆಟ; ಶ್ಯಾಡೊ ಸಿನಿಮಾ ವಿಮರ್ಶೆ
ಇದೀಗ ವರದಕ್ಷಿಣೆ, ಹಲ್ಲೆ, ಜೀವ ಬೆದರಿಕೆ ಆರೋದಡಿ ವರ್ತಿಕಾ ಅವರು ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.(ಏಜೆನ್ಸೀಸ್​)
ಅವಿರೋಧ ಆಯ್ಕೆಯಾದ್ರು ನಿತ್ಯ ತರಕಾರಿ ಸೊಪ್ಪು ಮಾರುವ ಗ್ರಾ.ಪಂ ಅಧ್ಯಕ್ಷೆ: ಆಕೆ ಮಾತು ಕೇಳಿದ್ರೆ ಹೆಮ್ಮೆ ಪಡ್ತೀರಾ!

ಕೆಲಸದಿಂದ ಮನೆಗೆ ಬಂದ ವ್ಯಕ್ತಿ ಪತ್ನಿಗಾಗಿ ಹುಡುಕಾಡಿದಾಗ ಆಕೆಯ ನಿಜ ಬಣ್ಣ ಬಯಲು: ತಂದೆಯೇ ವಿಲನ್​!

ಇಲ್ಲಿದೆ ಗುಡ್​ ನ್ಯೂಸ್: ಡ್ರೈವಿಂಗ್​ ಟೆಸ್ಟ್​ ಇಲ್ಲದೆ ಲೈಸೆನ್ಸ್​ ಪಡೆಯುವ ಸಮಯ ಬಹಳ ಹತ್ತಿರ..!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × 2 =
Remember me
