ಕೋಟ:ಯಕ್ಷಗಾನದ ಏಳು ಬೀಳುಗಳ ಬಗ್ಗೆ ಸದಾ ಚಿಂತನಶೀಲರಾದ ವಾಸುದೇವ ಸಾಮಗರು ಸಂಯಮಂ ಸಂಸ್ಥೆಯನ್ನು ಕಟ್ಟುವುದರ ಮೂಲಕ ಪ್ರಯೋಗಶೀಲ ಕಲಾವಿದರಾಗಿ ಗುರುತಿಸಿಕೊಂಡವರು. ತೆಂಕುತಿಟ್ಟು, ಬಡಗುತಿಟ್ಟು ಯಕ್ಷಗಾನದ ಒಬ್ಬ ನಿರ್ದೇಶಕನಾಗಿ, ಕಲಾವಿದನಾಗಿ, ಸಂಘಟಕನಾಗಿ ಸಾಮಗರ ಅನನ್ಯತೆ ಸ್ತುತ್ಯರ್ಹವಾದುದು ಎಂದು ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಸಂಯಮಂ ಕೋಟೇಶ್ವರ, ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಆಶ್ರಯದಲ್ಲಿ ಮಲ್ಯಾಡಿ ಲೈವ್ ಸಾಮಾಜಿಕ ಜಾಲತಾಣದ ಸಹಕಾರದೊಂದಿಗೆ ಶನಿವಾರ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಸಾಮಗಾಭಿವಂದನಂ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ವಾಸುದೇವ ಸಾಮಗರ ಕಲಾ ಜೀವನದ ಮೂರು ಮಜಲುಗಳಲ್ಲಿ ಜೀವನಾನುಭವವುಳ್ಳ ಕಲಾವಿದರಾಗಿ ನಮ್ಮ ಮುಂದೆ ಅಚ್ಚಳಿಯದೇ ನಿಲ್ಲುತ್ತಾರೆ. ಅವರ ಅಕಾಲಿಕ ಮರಣ ಕಲಾ ಪ್ರಪಂಚಕ್ಕೆ ತುಂಬಲಾರದ ನಷ್ಟ ಎಂದರು.ಸಾಮಗರೊಂದಿಗಿನ ಒಡನಾಟದ ಬಗ್ಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು.ವಿವಿಧ ವಿಷಯದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ಉಜಿರೆ ಅಶೋಕ್ ಭಟ್, ರಮೇಶ್ ಆಚಾರ್ ತೀರ್ಥಳ್ಳಿ, ವರ್ಕಾಡಿ ತಾರಾನಾಥ ಬಲ್ಯಾಯ, ಪಿ. ಕಿಶನ್ ಹೆಗ್ಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಪೂಕಳ ಲಕ್ಷ್ಮಿನಾರಾಯಣ ಭಟ್, ಕಡತೋಕ ಗೋಪಾಲಕೃಷ್ಣ ಭಾಗವತ, ಪ್ರೊ.ಎಂ.ಎಲ್.ಸಾಮಗ, ಮುರಳಿ ಕಡೇಕಾರ್, ಡಾ.ವೈಕುಂಠ ಹೇರ್ಳೆ, ಚಂದ್ರಿಕಾ ಧನ್ಯ, ಶಾಂತಾರಾಮ ಕುಡ್ವ ನುಡಿನಮನ ಸಲ್ಲಿಸಿದರು. ವಾಸುದೇವ ರಂಗ ಭಟ್ ಸಮನ್ವಯ ಭಾಷಣ ಮಾಡಿದರು.ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಸಂಯಮಂ ಸಂಚಾಲಕ ಪ್ರದೀಪ ವಿ. ಸಾಮಗ ವಂದಿಸಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿದರು. ಮಧ್ಯಾಹ್ನ 2ರಿಂದ ಯಕ್ಷಾಂಜಲಿ ಬಹುಮುಖಿ ವಾಸುದೇವ ಎಂಬ ತಾಳಮದ್ದಳೆ ಸಂಪನ್ನಗೊಂಡಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
