ಬೆಂಗಳೂರು:ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದು ಕಠಿಣ ಕ್ರಮಕ್ಕೆ ಆಗ್ರಹಿಸಿವೆ. ಈ ಪ್ರಕರಣವನ್ನು ಮನಗಂಡ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಪ್ರತಿಕ್ರಿಯೆ” ಕೇಳಿ ನೋಟಿಸ್​ ಜಾರಿ ಮಾಡಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆ ಸರಣಿ ಸಭೆ ನಡೆಸುತ್ತಿದ್ದು, ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆಯುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ನೋಟಿಸ್​ ಜಾರಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ವಾಟಾಳ್​ ನಾಗರಾಜ್​, ಈ ವಿಚಾರದಲ್ಲಿ ರಾಜ್ಯಪಾಲರು ರಾಜಕೀಯ ಮಾಡೊಲ್ಲ ಎಂದುಕೊಂಡಿದ್ದೆ. ರಾಜ್ಯದ ಮುಖ್ಯಮಂತ್ರಿಗೆ ನೋಟಿಸ್ ಕೊಡೋದು ಪ್ರಜಾಪ್ರಭುತ್ವ ಅಲ್ಲ. ನೋಟಿಸ್ ನೀಡಿರುವುದರ ಹಿಂದೆ ಕೇಂದ್ರದ ರಾಜಕಾರಣವಿದೆ. ರಾಜ್ಯಪಾಲರ ನೀತಿ ಖಂಡಿಸಿ ಹೋರಾಟ ಮಾಡಬೇಕಾಗುತ್ತದೆ.
ನಾನು ಈ ಹಿಂದೆ ರಾಜ್ಯಪಾಲರ ಬಗ್ಗೆ ಪ್ರಶಂಸೆ ಮಾಡಿದ್ದೇನೆ. ಒಂದು ಕಾರ್ಯಕ್ರಮದಲ್ಲಿ ಅವರನ್ನು ಹೊಗಳಿ ಮಾತಾಡಿದ್ದೇನೆ. ರಾಜ್ಯಪಾಲರ ಗಲಾಟೆ ಹಲವು ರಾಜ್ಯಗಳಲ್ಲಿ ಇದೆ. ಕೇರಳ, ತಮಿಳುನಾಡು, ದೆಹಲಿ, ಬಂಗಾಳದಲ್ಲಿ ರಾಜ್ಯಪಾಲರು ಗಲಾಟೆ ಮಾಡ್ತಿರೋದು ಕೇಳಿದ್ದೆವು. ಆದರೆ ನಮ್ಮ ರಾಜ್ಯದಲ್ಲಿ ರಾಜ್ಯಪಾಲರು ರಾಜಕೀಯ ಮಾಡಿಲ್ಲ, ಗೊಂದಲ ಮಾಡಿಲ್ಲ. ರಾಜ್ಯಪಾಲರು ಇಲ್ಲೇ ಇರಬೇಕು ಎಂದು ಹೇಳಿದ್ದೆ.
ಇದನ್ನೂ ಓದಿ:ಆಗಷ್ಟ್​ 14ರವರೆಗೆ ದರ್ಶನ್​ಗೆ ಜೈಲೂಟವೇ ಗತಿ; ಪವಿತ್ರಾ ಗೌಡ ಸೇರಿದಂತೆ 17 ಮಂದಿಗೆ ಸೆರೆವಾಸ ಅನಿವಾರ್ಯ
ಈ ಹಿಂದೆ ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಅವರನ್ನ ರಾಜ್ಯಪಾಲರು ಕೆಳಗಿಳಿಸಿದ್ದರು. ರಾಜ್ಯದ ಮುಖ್ಯಮಂತ್ರಿಯನ್ನ ರಾಜ್ಯಪಾಲರು ಕೆಳಗಿಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮುಡಾ ಹಗರಣ ವಿಚಾರಣೆಗೆ ಈಗಾಗಲೇ ನ್ಯಾಯಾಧೀಶರನ್ನ ನೇಮಕ ಮಾಡಲಾಗಿದೆ. ಅದರ ನಡುವೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ರಾಜ್ಯಪಾಲರ ಅನಿಸಿಕೆಯಲ್ಲ, ರಾಜಕೀಯ ಅನಿಸಿಕೆಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಸಿಎಂ ಸಿದ್ದರಾಮಯ್ಯ ಮೇಲೆ ರಾಜ್ಯಪಾಲರು ಬಹಳ ದಿನಗಳಿಂದ ಕಣ್ಣಿಟ್ಟಿದ್ದಾರೆ. ವಿಶೇಷ ಅಧಿವೇಶನ ಕರೆದು ಮುಡಾ ಹಗರಣದ ಸಮಗ್ರ ಚರ್ಚೆ ಮಾಡಿ ಎಂದು ಸಿಎಂಗೆ ರಾಜ್ಯಪಾಲರು ಹೇಳಬಹುದಿತ್ತು. ಆದರೆ ಯಾವುದೇ ಸ್ಪಷ್ಟನೆ ಕೇಳದೇ ಏಕಾಏಕಿ ನೋಟಿಸ್ ಕೊಡುವುದು ಸರಿಯಲ್ಲ. ಇದರಲ್ಲಿ ಕೇಂದ್ರದ ರಾಜಕಾರಣ ಇದೆ. ನೋಟಿಸ್ ಕೊಡುವ ಮೂಲಕ ಪ್ರಜಾಪ್ರಭುತ್ವ ಆಧಾರದಲ್ಲಿ ರಚನೆಯಾದ ಸರ್ಕಾರವನ್ನ ಅಲುಗಡಿಸಲು ಯತ್ನಿಸಬಾರದು. ಹಾಗೇನಾದರೂ ಆದರೆ ಹೋರಾಟ ಮಾಡಬೇಕಾಗುತ್ತೆ ಎಂದು ವಾಟಾಳ್​ ನಾಗರಾಜ್​ ಎಚ್ಚರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + one =
Remember me
