ಬೆಂಗಳೂರು: ಪ್ರತಿ ಮನುಷ್ಯ ‘ನಾನು ಶಾಶ್ವತನಲ್ಲ, ನನಗೆ ಸಾವಿದೆ ಎಂಬುದನ್ನು ಸ್ಮರಿಸಿಕೊಂಡೇ ನಡೆದಾಗ, ಬದುಕು ಸರಿಯಾದ ದಾರಿಯಲ್ಲಿ ಸಾಗುತ್ತದೆ. ಪ್ರತಿಯೊಬ್ಬರಲ್ಲೂ ಆತ್ಮವಿದ್ದು, ಆತ್ಮಜ್ಞಾನಕ್ಕಿಂತ ದೊಡ್ಡದಾದ ಬೇರೊಂದು ಜ್ಞಾನವಿಲ್ಲ ಎಂದು ವೇದಬ್ರಹ್ಮ ಮಂಕಾಳ ಶ್ರೀಹರಿ ಶರ್ಮ ಹೇಳಿದ್ದಾರೆ.
ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಸನ್ಯಾಸ ಸ್ವೀಕರಿಸಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಶ್ರೀಶಂಕರ ಭವತ್ಪಾದರ ಅದ್ವೆತ ಸಿದ್ಧಾಂತ ಪ್ರಚಾರ ಅಭಿಯಾನಕ್ಕಾಗಿ ಉಲುಚಕಮ್ಮೆ ಬ್ರಾಹ್ಮಣ ಮಹಾಸಭೆಯ ಅಂಗ ಸಂಸ್ಥೆಯಾದ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ಸಂಸ್ಥೆಯು ಏರ್ಪಡಿಸಿದ್ದ ಸರದಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.
ಶಂಕರ ಎಂದರೆ ವೈಶಾಖ ಮಾಸದಲ್ಲಿ ಹುಟ್ಟಿದ ಸರ್ವ ಶ್ರೇಷ್ಠ ಮಹಾಪುರುಷ ಎಂದರ್ಥ. ಶಂಕರಾಚಾರ್ಯರ ವಿಷಯದಲ್ಲಿ 8ರ ಸಂಖ್ಯೆ ಮಹತ್ವದ್ದಾಗಿದೆ. ಶಂಕರಾಚಾರ್ಯರು 8ನೇ ವರ್ಷಕ್ಕೆ ಸನ್ಯಾಸ ದೀಕ್ಷೆ ಪಡೆದರು, 16ನೇ ವಯಸ್ಸಿಗೆ ಚತುರ್ವೇದ, ಉಪನಿಷತ್ತು, ಬ್ರಾಹ್ಮಣಕಗಳು, ಅರಣ್ಯಕಗಳಲ್ಲಿ ಪಾರಂಗತರಾದರು, 24ನೇ ವಯಸ್ಸಿಗೆ ಅದ್ವೈತ ಸಿದ್ಧಾಂತ ಪ್ರತಿಪಾದನೆ ಮಾಡುತ್ತಾ ಲೋಕಸಂಚಾರ ಮಾಡಿದರು. 32ನೇ ವಯಸ್ಸಿಗೆ ಸ್ವರ್ಗಸ್ಥರಾದರು.
ವೇದೋಪನಿಷತ್ತುಗಳಿಗೆ ಧಕ್ಕೆಯಾಗುವ ಪ್ರಮೇಯ ಬಂದಾಗ ಸಾಕ್ಷಾತ್ ಶಿವನೇ ಭುವಿಯ ಮೇಲೆ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿ, ಅವುಗಳನ್ನು ರಕ್ಷಿಸಿ, ಪ್ರಚಾರ ಮಾಡಿದ್ದಾರೆ ಎಂದು ಮಂಕಾಳ ಅವರು ಉಪನ್ಯಾಸದಲ್ಲಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಲುಚಕಮ್ಮೆ ಸಭಾದ ಗೌರವ ಅಧ್ಯಕ್ಷ ಜಿ.ಎನ್.ಲಕ್ಷ್ಮೀನಾರಾಯಣ ರಾವ್, ಉಪಾಧ್ಯಕ್ಷ ಚಂದ್ರಶೇಖರ್ ಕೆ.ಎಸ್, ಕಾರ್ಯದರ್ಶಿ ವೈ.ಜಿ.ಮುರಳೀಧರ್, ಜಂಟಿ ಕಾರ್ಯದರ್ಶಿ ಸುರೇಶ್.ಬಿ.ಕೆ, ಪುರುಷೋತ್ತಮ ಆರ್, ಸುಬ್ರಹ್ಮಣ್ಯ ಪಿ.ಎಸ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
