ಬೆಂಗಳೂರು:ಪದ್ಮಶ್ರೀ ಪುರಸ್ಕೃತ, ಪ್ರೊಫೆಸರ್​​ ಆರ್​​. ಎಲ್​​​. ಕಶ್ಯಪ್​​​ ಇಂದು ಬೆಳಗ್ಗೆ 10.30ಕ್ಕೆ ಗುಬ್ಬಲಾಳದಲ್ಲಿರುವ ಸ್ವಗೃಹದಲ್ಲಿ ದೈವಾದೀನರಾದರು. 85 ವರ್ಷದ ಪ್ರೊ. ಕಶ್ಯಪ್​​​ ಅವಿವಾಹಿತರಾಗಿದ್ದರು. ಸಾಕ್ಷಿ ಸಂಸ್ಥೆಯ ಸಂಸ್ಥಾಪಕರಾಗಿದ್ದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ವೇದಗಳಲ್ಲಿ ಅಪಾರ ಜ್ಞಾನಿ ಎನಿಸಿಕೊಂಡಿದ್ದ ಪ್ರೊ. ಆರ್​​​. ಎಲ್​​. ಕಶ್ಯಪ್​ (ರಂಗಸ್ವಾಮಿ ಲಕ್ಷ್ಮೀ ನಾರಾಯಣ ಕಶ್ಯಪ್​​) ನಾಲ್ಕು ವೇದಗಳಲ್ಲಿ 25,000ಕ್ಕೂ ಅಧಿಕ ಮಂತ್ರಗಳನ್ನು ಇಂಗ್ಲೀಷಿಗೆ ಅನುವಾದಿಸಿ, 26 ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ವೇದಕ್ಕೆ ಸಂಬಂಧಿಸಿದಂತೆ, 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಪುಸ್ತಕಗಳು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಹಿಂದಿ, ಇಂಡೋನೇಷಿಯನ್, ಜರ್ಮನಿ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಸಾಧನೆಗಳನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಂಶೋಧನೆ ಮತ್ತು ವೇದ ಪ್ರಸಾರದ ಸಾಧನೆಯನ್ನು ಮೆಚ್ಚಿದ ಕೇಂದ್ರ ಸರ್ಕಾರ, 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಶ್ರೀ ಅರಬಿಂದೋ ಹಾಗೂ ಶ್ರೀ ಕಪಾಲಿ ಶಾಸ್ತ್ರಿಗಳ ಭಾರತೀಯ ಸಂಸ್ಕೃತಿಯ ಕುರಿತಾದ ಕಾರ್ಯಗಳನ್ನು ಡಾ. ಕಶ್ಯಪ್ ಎಡಬಿಡದೆ ಮುನ್ನಡೆಸಿದ್ದರು. ಇಳಿವಯಸ್ಸಿನಲ್ಲೂ ಕಿರಿಯರು ಮತ್ತು ಹಿರಿಯರಿಗೂ ಮಾರ್ಗದರ್ಶಕರಾಗಿದ್ದರು.‌ ಬೆಂಗಳೂರಿನ ನ್ಯಾಷನಲ್ ಕಾಲೇಜಿಗೆ ಮೊಟ್ಟಮೊದಲ ಬಂಗಾರದ ಪದಕ ತಂದುಕೊಟ್ಟ ಮಹನೀಯರೆನಿಸಿಕೊಂಡಿದ್ದರು.
ನಾಳೆ (12-11-2022) ಜಯನಗರದಲ್ಲಿರುವ ಸಾಕ್ಷಿ(SAKSHI) ಸಂಸ್ಥೆಯ ಕಚೇರಿಯಲ್ಲಿ, ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಚಾಮರಾಜಪೇಟೆಯ ಟಿ.ಆರ್.‌ಮಿಲ್‌ ರುದ್ರಭೂಮಿಯಲ್ಲಿ 11.30ಕ್ಕೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
