ಬಾಗಲಕೋಟೆ:ಲೋಕಸಭಾ ಚುನಾವಣೆ 2024ರ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಾಗಲಕೋಟೆ ಕ್ಷೇತಕ್ಕೆ ಕೈ ಅಭ್ಯರ್ಥಿಯಾಗಿ ಯಾರು ಹೊರಹೊಮ್ಮಲ್ಲಿದ್ದಾರೆ ಎಂಬ ಪ್ರಶ್ನೆ ಸದ್ಯ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಮಧ್ಯೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಮತ್ತು ವೀಣಾ ಕಾಶಪ್ಪನವರ ಮಧ್ಯೆ ಟಿಕೆಟ್​ಗಾಗಿ ಭಾರೀ ಹಣಾಹಣಿ ನಡೆಯುತ್ತಿದೆ. ಸದ್ಯ ಟಿಕೆಟ್​ ಕದನ ಈಗ ಜೋರಾಗಿದ್ದು, ಕಾಂಗ್ರೆಸ್​ ಅಭ್ಯರ್ಥಿಯಾಗಿ ಸಂಯುಕ್ತಾ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇದನ್ನೂ ಓದಿ:ಒಳ್ಳೆಯ ಕಂಟೆಂಟ್ ಇದ್ದರೂ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗಿಲ್ಲ ಉಳಿವು! ಹೀಗಾದರೆ….
ಸಂಯುಕ್ತಾಗೆ ಕೈ ಟಿಕೆಟ್​ ಫೈನಲ್ ಎಂಬ ಸುದ್ದಿಯ ಬೆನ್ನಲ್ಲೇ ಅತ್ತ ದೆಹಲಿಯಲ್ಲಿ ವೀಣಾ ಕಾಶಪ್ಪನವರ ಕಣ್ಣೀರಿಟ್ಟಿದ್ದಾರೆ. ಕ್ಷೇತ್ರದಲ್ಲಿ ಸದ್ದಿಲ್ಲದೇ ಓಡಾಡುತ್ತಿರುವ ಸಂಯುಕ್ತಾ ಪಾಟೀಲ ಚುನಾವಣಾ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ಟಿಕೆಟ್ ಫೈನಲ್ ಆಗುವ ಸುಳಿವು ಸಿಕ್ಕ ಹಿನ್ನೆಲೆ ಜಿಲ್ಲೆಯ ಸ್ಥಳೀಯ ನಾಯಕರನ್ನು ಪಾಟೀಲ ಭೇಟಿ ಮಾಡುತ್ತಿದ್ದಾರೆ.
ಬೀಳಗಿ ಪಟ್ಟಣದಲ್ಲಿ ಶಾಸಕ ಜೆ.ಟಿ ಪಾಟೀಲ, ಹಿರಿಯ ನಾಯಕ ಎಸ್. ಆರ್. ಪಾಟೀಲ, ಬಾಗಲಕೋಟೆ ಶಾಸಕ ಹೆಚ್.ವೈ ಮೇಟಿ ಸೇರಿದಂತೆ ಸ್ಥಳೀಯ ನಾಯಕರ ಭೇಟಿಯಾಗುತ್ತಿರುವ ಸಂಯುಕ್ತಾ ಪಾಟೀಲ, ಇನ್ನು ಹಲವು ನಾಯಕರನ್ನು ಭೇಟಿ ಮಾಡಲು ಭರ್ಜರಿ ಓಡಾಟ ನಡೆಸುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಟಿಕೆಟ್ ಘೋಷಣೆಯಾಗುವ ಸಾಧ್ಯತೆಯಿದ್ದು, ಹಿರಿಯ ನಾಯಕರ ವಿಶ್ವಾಸ, ಆಶೀರ್ವಾದ ಪಡೆಯುತ್ತಿದ್ದಾರೆ.
ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

ಒಳ್ಳೆಯ ಕಂಟೆಂಟ್ ಇದ್ದರೂ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗಿಲ್ಲ ಉಳಿವು! ಹೀಗಾದರೆ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
