ಬಾಗಲಕೋಟೆ:ಲೋಕಸಭಾ ಚುನಾವಣೆ 2024ರ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಾಗಲಕೋಟೆ ಕ್ಷೇತಕ್ಕೆ ‘ಕೈ’ ಅಭ್ಯರ್ಥಿಯಾಗಿ ಯಾರು ಹೊರಹೊಮ್ಮಲ್ಲಿದ್ದಾರೆ ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿತ್ತು. ಟಿಕೆಟ್​ ಸ್ಪರ್ಧೆಯಲ್ಲಿದ್ದ ಶಾಸಕ ವಿಜಯಾನಂದ ಪತ್ನಿ ವೀಣಾ ಕಾಶಪ್ಪನವರ ಮತ್ತು ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಮಧ್ಯೆ ಭಾರೀ ಹಣಾಹಣಿ ಇತ್ತು. ಆದ್ರೆ, ನಿನ್ನೆ ಕಾಂಗ್ರೆಸ್​ ತನ್ನ ಮೂರನೇ ಪಟ್ಟಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಸಂಯುಕ್ತಾಗೆ ಟಿಕೆಟ್​ ಅಂತಿಮವಾಯಿತು. ಸದ್ಯ ಈ ವಿಚಾರ ವೀಣಾ ಕಾಶಪ್ಪನವರ ಬೆಂಬಲಿಗರಲ್ಲಿ ಭಾರೀ ಅಸಮಾಧಾನ ತಂದಿದೆ.
ಇದನ್ನೂ ಓದಿ:ವೀಣಾಗೆ ಕಾಶಪ್ಪನವರಿಗೆ ಪಕ್ಷೇತರ ಅಭ್ಯಥಿರ್ಯಾಗಿ ಸ್ಪರ್ಧೆ ಮಾಡಲು ಬೆಂಬಲಿಗರ ಒತ್ತಾಯ
ಕಳೆದ ಕೆಲವು ದಿನಗಳಿಂದಲೂ ಲೋಕಸಭಾ ಚುನಾವಣಾ 2024ರ ಟಿಕೆಟ್​ಗಾಗಿ ವೀಣಾ ಮತ್ತು ಸಂಯುಕ್ತಾ ಪಾಟೀಲ ಮಧ್ಯೆ ಯಾರಿಗೆ ಟಿಕೆಟ್​ ಅಂತಿಮವಾಗಲಿದೆ ಎಂಬ ವಿಷಯ ಭಾರೀ ಕುತೂಹಲ ಕೆರಳಿಸಿತ್ತು. ಆದ್ರೆ, ವೀಣಾ ಟಿಕೆಟ್​ನಿಂದ ವಂಚಿತರಾಗಿದ್ದು, ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಇದರಿಂದ ಮನನೊಂದ ಬೆಂಬಲಿಗರು, ಸಂಯುಕ್ತಾ ವಿರುದ್ಧ ಪ್ರತಿಭಟಿಸಿದ್ದು, ಇದು ಅನ್ಯಾಯ ಎಂದು ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುಂತೆ ವೀಣಾ ಕಾಶಪ್ಪನವರ ಬೆಂಬಲಿಗರು ಒತ್ತಾಯಿಸಿದ್ದಾರೆ.ಬಾಗಲಕೋಟೆಗೆ ಹೊರಗಿನ‌ ಜಿಲ್ಲೆಯ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾಗೆ ಕೈ ಟಿಕೆಟ್ ಘೋಷಣೆಯಾಗಿದೆ. ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್ ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆದಿದ್ದು, ತನಗೆ ಉಂಟಾದ ನೋವಿನಿಂದ ಬೆಂಬಲಿಗರು ಸೇರಿದ್ದ ಸಭೆಯಲ್ಲಿ ಕಣ್ಣೀರಾಕಿದ್ದಾರೆ.
ಇದನ್ನೂ ಓದಿ:ನಟ ಶಿವರಾಜ್​ಕುಮಾರ್​ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು; ಕಾರಣ ಹೀಗಿದೆ
ಭಾಷಣದ ವೇಳೆಯೂ ಕಣ್ಣೀರಿಟ್ಟ ವೀಣಾ, ನಮ್ಮ ಜಿಲ್ಲೆಯ ಜನರು ಅನಾಥರಾಗ್ತಾರೆ. ಜಿಲ್ಲೆಯ ಜನರ ಸೇವೆ ಮಾಡೋದಕ್ಕೆ ಕೊನೆ ಅವಕಾಶ ಮಾಡಿಕೊಡಿ. ಇಲ್ಲದಿದ್ರೆ ಜನರ ಅಭಿಪ್ರಾಯದ‌ ಮೇರೆಗೆ ನಿರ್ಧಾರ ಕೈಗೊಳ್ತಿನಿ ಎಂದಿದ್ದಾರೆ.
ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × five =
Remember me
