ಬೆಂಗಳೂರು:ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್ ಪ್ರಧಾನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ಜ.20ರಿಂದ 22ರವರೆಗೆ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್​ನಲ್ಲಿ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್’ ಕಾನ್​ಕ್ಲೇವ್ ಕಾರ್ಯಕ್ರಮ ನಡೆಯಲಿದೆ.
ಶುಕ್ರವಾರ (ಜ.20) ಸಂಜೆ 4.30ಕ್ಕೆ ಶೃಂಗಸಭೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಸಂಜೆ 6ಕ್ಕೆ ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ಮನರಂಜನೆ ಕಾರ್ಯಕ್ರಮ ಜರುಗಲಿದೆ. ಶನಿವಾರ (ಜ.21) ಬೆಳಗ್ಗೆ 11ಕ್ಕೆ ತಜ್ಞರ ಸಮಿತಿ ಚರ್ಚೆ, ಮಧ್ಯಾಹ್ನ 12ಕ್ಕೆ ಸಂಪರ್ಕ ಜಾಲ ವಿಸ್ತರಣೆ, 3ಕ್ಕೆ ಅಗ್ರಿಟೆಕ್ ಬಗ್ಗೆ ತಜ್ಞರ ಸಂವಾದ, ಸಂಜೆ 4ಕ್ಕೆ ಸಂಪರ್ಕ ಜಾಲ, 4.30ಕ್ಕೆ ಪರಿಣತರ ಚರ್ಚೆ, 6ಕ್ಕೆ ಮನರಂಜನೆ ಕಾರ್ಯಕ್ರಮ. ಭಾನುವಾರ (ಜ.22) ಬೆಳಗ್ಗೆ 11ಕ್ಕೆ ತಜ್ಞರ ಸಮಿತಿ ಚರ್ಚೆ ಮತ್ತು ಜೀವಶಾಸ್ತ್ರಗಳ ತಂತ್ರಜ್ಞಾನ ಗೋಷ್ಠಿ, 12ಕ್ಕೆ ಸಂಪರ್ಕ ಜಾಲ ವಿಸ್ತರಣೆ (ನೆಟ್​ವರ್ಕಿಂಗ್), 4.30ಕ್ಕೆ ‘ನನ್ನ ನವೋದ್ಯಮ ಕಥೆ’ ಕುರಿತು ಚರ್ಚೆ ಹಾಗೂ 6ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಇರಲಿದೆ.
ಪ್ರಮುಖ ಮುಖ್ಯಾಂಶ: ಜಾಗತಿಕ ಸಂಪರ್ಕ, ಬಿಟುಬಿ, ಬಿಟುಸಿ, ಸಿಟುಸಿ, ವಿಚಾರ ಸಂಕಿರಣ, ವಿದ್ಯಾರ್ಥಿಗಳಿಗೆ ಆಪ್ತ ಸಲಹೆ, ಕಲೆ ಮತ್ತು ಸಂಸ್ಕೃತಿ, ಪ್ರಮುಖ ಭಾಷಣಕಾರರು, ನವೋದ್ಯಮ ಪ್ರಾರಂಭ ಕೋಶ, ಬೃಹತ್ ಉದ್ಯೋಗ ಮೇಳ ಹಾಗೂ ಕೃಷಿ ತಂತ್ರಜ್ಞಾನ. 250ಕ್ಕೂ ಹೆಚ್ಚು ಮಳಿಗೆಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಾಗುತ್ತದೆ. ಕೈಗಾರಿಕೆಗಳ ಮಾಲೀಕರು, ಜಾಗತಿಕ ನವೋದ್ಯಮಿಗಳ ಮತ್ತು ಸ್ವಉದ್ಯೋಗಿಗಳು, ನೀತಿ ರೂಪಿಸುವವರು ಮತ್ತು ಆಡಳಿತಗಾರರ ಭಾಷಣ ಇರಲಿದೆ. ಕಾನ್​ಕ್ಲೇವ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಂಪರ್ಕ, ವೃತ್ತಿಪರ ಸಲಹೆ ನಡೆಸಲು ಶೈಕ್ಷಣಿಕ ಸಂಸ್ಥೆಗಳಿಂದ ಪ್ರತ್ಯೇಕ ಮಳಿಗೆ ಸ್ಥಾಪನೆ, ಹೊಸ ಸ್ವ-ಉದ್ಯೋಗಿಗಳ ಮತ್ತು ನವೋದ್ಯಮಿಗಳಿಗೆ ಮಾರ್ಗದರ್ಶನ ಸಿಗಲಿದೆ. ಕೈಗಾರಿಕೆಗಳ ತಜ್ಞರಿಂದ ಮತ್ತು ಮಾಲೀಕರಿಂದ ಗುಂಪು ಚರ್ಚೆ, ವೀರಶೈವ ಲಿಂಗಾಯತ ಸಮುದಾಯದ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರಚುರಪಡಿಸಲಾಗತ್ತದೆ. ಮಳಿಗೆಗಳ ಬುಕಿಂಗ್, ಇತರ ವಿವರಕ್ಕಾಗಿ 99002 69651, 0821-2541100 ಸಂಪರ್ಕಿಸಬಹುದು.
‘ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊ’ ಎಂದ ಸಂಬಂಧಿಕರಿಬ್ಬರಿಗೂ ಇರಿದ; ಒಬ್ಬನ ಸಾವು, ಇನ್ನೊಬ್ಬನ ಪರಿಸ್ಥಿತಿ ಗಂಭೀರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − seven =
Remember me
