ಬೆಂಗಳೂರು:ಇತ್ತೀಚಿಗೆ ಸುರಿದ ಮಳೆಯಿಂದ ತರಕಾರಿಗಳು ಕೊಳೆತು ನಾಶವಾಗಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿವೆ. ನಗರದ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
* ಬೀನ್ಸ್ (ಕೆಜಿಗೆ 125 ರೂಪಾಯಿ)* ಮೂಲಂಗಿ (ಕೆಜಿಗೆ 46 ರೂಪಾಯಿ)* ಗುಂಡುಬದನೆ (ಕೆಜಿಗೆ 78ರೂಪಾಯಿ)* ಟೊಮೊಟೋ (ಕೆಜಿಗೆ 46 ರೂಪಾಯಿ)* ಬಟಾಣಿಗಳು (ಕೆಜಿಗೆ 148 ರೂಪಾಯಿ)* ಬ್ರೋಕೋಲಿ (ಕೆಜಿಗೆ 200 ರೂಪಾಯಿ)* ನವಿಲು ಕೋಸು (ಕೆಜಿಗೆ 63 ರೂಪಾಯಿ)* ನುಗ್ಗೆಕಾಯಿ (ಕೆಜಿಗೆ 80 ರೂಪಾಯಿ)* ಕೊತ್ತಂಬರಿಸೊಪ್ಪು (ಕೆಜಿಗೆ 106 ರೂಪಾಯಿ)* ಬೆಂಡೆಕಾಯಿ (ಕೆಜಿಗೆ 54 ರೂಪಾಯಿ)* ಶುಂಠಿ (ಕೆಜಿಗೆ 230 ರೂಪಾಯಿ)* ಕ್ಯಾರೆಟ್ (ಕೆಜಿಗೆ 50 ರೂಪಾಯಿ)
ಇದನ್ನೂ ಓದಿ:ಪಾಕಿಸ್ತಾನಿ ಯೂಟ್ಯೂಬರ್​ನಿಂದ ಭಾರತ ಪ್ರವಾಸ: ಭಾರತೀಯರ ಆತಿಥ್ಯಕ್ಕೆ ಪಾಕ್​ ವ್ಲಾಗರ್​ ಫಿದಾ!
ಮುಂದಿನ 2 ತಿಂಗಳ ಕಾಲ ಇದೇ ದರ ಮುಂದುವರಿಯುವ ಸಾಧ್ಯತೆ ಇದೆ. ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲಿ ಮಾತ್ರವಲ್ಲ ಹಾಪ್‌ಕಾಮ್ಸ್​ನಲ್ಲೂ ತರಕಾರಿಗಳ ಬೆಲೆ‌ ಏರಿಕೆಯಾಗಿವೆ. ಕಾಂಗ್ರೆಸ್​ ಉಚಿತ ಗ್ಯಾರಂಟಿಗಾಗಿ ಬೆಲೆ ಏರಿಸಿವೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ತರಕಾರಿಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿಯೊಂದು ತರಕಾರಿಗಳ ಬೆಲೆ 100 ರೂ. ದಾಟಿದೆ. ಕಾಂಗ್ರೆಸ್​ನವರು ಗ್ಯಾರಂಟಿ ತಂದು ಇಲ್ಲಿ ಜಾಸ್ತಿ ಮಾಡಿದ್ದಾರೆ. ನಮಗೆ ಸರ್ಕಾರದಿಂದ ಯಾವುದೇ ಉಚಿತ ಬೇಕಿಲ್ಲ. ಪ್ರತಿಯೊಂದು ಬೆಲೆ ಜಾಸ್ತಿ ಆದರೆ ಜೀವನ ನಡೆಸಲು ತುಂಬಾ ಕಷ್ಟ ಎಂದು ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿ ಸಹ ಹೇಳಿಕೆ ನೀಡಿದ್ದಾರೆ. ಪ್ರತಿಯೊಂದು ತರಕಾರಿಗಳ ಬೆಲೆ ಜಾಸ್ತಿ ಆಗಿದೆ. ವ್ಯಾಪಾರ ಏನು ಇಲ್ಲ. ಗ್ರಾಹಕರು ಸಹ ಬರುತ್ತಿಲ್ಲ. ಬೆಲೆ ಏರಿಕೆಯಿಂದ ಒಂದು ಕೆಜಿ ತೆಗೆದುಕೊಳ್ಳವರು ಅರ್ಧ ಕೆಜೆ ತೆಗೆದುಕೊಳ್ಳುತ್ತಿದ್ದಾರೆ. ಮಳೆಯಿಂದಾಗಿ ಬೆಲೆ ಏರಿಕೆ ಆಗಿದೆ ಎಂದು ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ಇಡಿ ಅಧಿಕಾರಿಗಳ ದಾಳಿ: ಆಸ್ಪತ್ರೆಯಲ್ಲಿ ಗಳಗಳನೇ ಕಣ್ಣೀರಿಟ್ಟ ತಮಿಳುನಾಡು ಸಚಿವ

ಅಂಗನವಾಡಿಗಳಿನ್ನು ಸ್ಮಾರ್ಟ್: ಮಕ್ಕಳು, ವೃದ್ಧರಿಗಾಗಿ ವಿಶಿಷ್ಟ ಯೋಜನೆ; ಲಕ್ಷ್ಮೀ ಹೆಬ್ಬಾಳ್ಕರ್ ಕನಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + seventeen =
Remember me
