ಬೆಂಗಳೂರು:ಸಸ್ಯಾಹಾರಿ ಆಹಾರ ಆರ್ಡರ್ ಮಾಡಿದವನಿಗೆ ಚಿಕನ್ ಡಿಶ್ ಡೆಲಿವರ್ ಮಾಡಿದ ಆನ್​ಲೈನ್ ಫುಡ್ ಡೆಲಿವರಿ ಕಂಪೆನಿಯೊಂದಕ್ಕೆ ಗ್ರಾಹಕರ ನ್ಯಾಯಾಲಯವು 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ಬೆಂಗಳೂರಿನ ನಿವಾಸಿ ವಿ.ಬಿ.ನಾಗೇಂದ್ರ ಎಂಬುವರು 2018 ರ ಏಪ್ರಿಲ್ 23 ರಂದು ಕೆಲಸದ ನಡುವೆ ಫ್ರೆಶ್ ಮೆನು ಆನ್​ಲೈನ್ ಫುಡ್​ ಪೋರ್ಟಲ್​ನಲ್ಲಿ ‘ಕಾಪ್ರೀಸ್ ಖಿನೋವಾ’ ಎಂಬ ಸಸ್ಯಾಹಾರಿ ಡಿಶ್ ಆರ್ಡರ್ ಮಾಡಿದರು. ವೆಜಿಟೇರಿಯನ್ ಎಂದು ಮಾರ್ಕ್ ಮಾಡಲಾದ ಬಾಕ್ಸ್​ನಲ್ಲಿ ಅವರಿಗೆ ಆಹಾರವನ್ನು ಡೆಲಿವರಿ ಮಾಡಲಾಯಿತು. ಆದರೆ ಅದನ್ನು ತೆಗೆದು ಸೇವಿಸಿದಾಗ ಅವರಿಗೆ ಅದು ಚಿಕನ್ ಡಿಶ್ ಆಗಿರುವುದು ತಿಳಿದುಬಂತು.
ಇದನ್ನೂ ಓದಿ:ಸರ್ಕಾರಿ ಆಸ್ಪತ್ರೆ ಮೆನುವಿನಲ್ಲಿ ಚಿಕನ್​ ಸಾಂಬಾರ್: ಆದ್ರೆ ಈ ರೋಗಿಗಳಿಗೆ ಮಾತ್ರ!
ತಕ್ಷಣ ಕಂಪೆನಿಯ ಹೆಲ್ಪ್​ಲೈನಿಗೆ ಕರೆ ಮಾಡಿದಾಗ, ಅವರು ಕ್ಷಮೆ ಕೇಳಿ ಅವರ ಹಣವನ್ನು ಕೂಡಲೇ ವಾಪಸ್ ಮಾಡುವುದಾಗಿ ತಿಳಿಸಿದರು. ಆದರೆ ಕಟ್ಟಾ ಸಸ್ಯಾಹಾರಿಯಾದ ನಾಗೇಂದ್ರ ಅವರಿಗೆ ಈ ಅನುಭವ ನುಂಗಲಾರದ ತುತ್ತಾಗಿತ್ತು. ಈ ಬಗ್ಗೆ ಕಂಪೆನಿಗೆ ಲೀಗಲ್ ನೋಟೀಸ್ ಕೊಟ್ಟು, ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಕೇಸು ದಾಖಲಿಸಿದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯವು ಸೇವೆಯಲ್ಲಿ ನ್ಯೂನತೆ ಉಂಟಾಗಿದೆ ಎಂದು ತೀರ್ಪು ನೀಡಿದೆ. ಆಹಾರದ ಬೆಲೆಯಾಗಿದ್ದ 210 ರೂಪಾಯಿಯನ್ನು ರೀಫಂಡ್ ಮಾಡುವ ಜೊತೆಗೆ ಕಂಪೆನಿಯು ನಾಗೇಂದ್ರ ಅವರಿಗೆ 5,000 ರೂ. ಪರಿಹಾರ ಮತ್ತು 5,000 ರೂ. ಕೋರ್ಟ್ ವೆಚ್ಚವಾಗಿ ನೀಡಬೇಕೆಂದು ಆದೇಶಿಸಿದೆ.(ಏಜೆನ್ಸೀಸ್)
ಏಳು ಹುದ್ದೆಗಳಲ್ಲಿ ಒಂದೇ ಹುದ್ದೆ ಭರ್ತಿ! ಸರ್ಕಾರದ ಸ್ಪಷ್ಟನೆ ಕೇಳಿದ ಹೈಕೋರ್ಟ್
ಸುಶಾಂತ್ ಸಿಂಗ್ ಸೋದರಿ ಪ್ರಿಯಾಂಕಾ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅಸ್ತು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − six =
Remember me
