ಬೆಂಗಳೂರು: ಕರೊನಾ ರೋಗಿಗಳ ಸೇವೆಗೆ ಅಗತ್ಯವಿರುವ 500 ವಾಹನಗಳನ್ನು ಒದಗಿಸುವಂತೆ ಖುದ್ದು ಸಾರಿಗೆ ಇಲಾಖೆ ಆಯುಕ್ತರು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಯೇ ಲಿಖಿತ ಆದೇಶ ಹೊರಡಿಸಿದರೂ ಕೂಡ ಸರ್ಕಾರಿ ಇಲಾಖೆಗಳ ಮುಖ್ಯಸ್ಥರು ವಾಹನಗಳನ್ನು ಒಪ್ಪಿಸದೆ ಅಸಡ್ಡೆ ತೋರಿದ್ದಾರೆ.
ನಗರದಲ್ಲಿ ಕ್ವಾರಂಟೈನ್​ನಲ್ಲಿ ಇರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲು 500 ವಾಹನಗಳನ್ನು ಒದಗಿಸುವಂತೆ ನಗರ ಜಿಲ್ಲಾಧಿಕಾರಿಗೆ ಆರೋಗ್ಯ ಇಲಾಖೆ ಸೂಚಿಸಿದೆ. ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳನ್ನು ಹೊರತುಪಡಿಸಿ ಉಳಿದಿರುವ ಸರ್ಕಾರಿ ಇಲಾಖೆಗಳ ಜೀಪ್ ಮತ್ತು ಕಾರುಗಳನ್ನು ಒದಗಿಸುವಂತೆ 15 ದಿನಗಳ ಹಿಂದೆಯೇ ಆದೇಶವಾಗಿದ್ದರೂ ಇಲಾಖೆಗಳು ಅದನ್ನು ಪಾಲನೆ ಮಾಡಿಲ್ಲ.
ಲಾಕ್​ಡೌನ್ ಆದೇಶದ ಹಿನ್ನೆಲೆಯಲ್ಲಿ ಕಚೇರಿ ಗಳಿಗೆಲ್ಲ ರಜೆ ಇದೆ. ಆರ್​ಟಿಒ ಅಧಿಕಾರಿಗಳು ಪ್ರತಿಯೊಂದು ಕಚೇರಿಗೂ ತೆರಳಿ ಚಾಲಕನ ಸಮೇತ ವಾಹನಗಳನ್ನು ಕೊಡುವಂತೆ ನೋಟಿಸ್​ಕೊಟ್ಟು ಕೇಳುತ್ತಿದ್ದಾರೆ. ಆದರೆ, ಕೆಲ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಾಹನ ಕೊಡದೆ ಆರ್​ಟಿಒ ಅಧಿಕಾರಿಗಳ ಮೇಲೆಯೇ ದರ್ಪ ತೋರುತ್ತಿದ್ದಾರೆ.
ಶುಕ್ರವಾರ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ವಾಹನಗಳನ್ನು ನೀಡುವಂತೆ ನೋಟಿಸ್ ಕೊಡಲು ಹೋದ ಆರ್​ಟಿಒ ಅಧಿಕಾರಿಗಳಿಗೆ ಅವಮಾನ ಮಾಡಿ ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ‘ನಮ್ಮ ವಾಹನಗಳ ಚಾಲಕರಿಗೆ ಏನಾದರೂ ಆದ್ರೆ ನೆರವಿಗೆ ನೀವು ಬರುತ್ತೀರೆನ್ರೀ’ ಎಂದು ಇನ್​ಸ್ಪೆಕ್ಟರ್​ಗೆ ಬೈದು ಕಳುಹಿಸಿದ್ದಾರೆ ಎನ್ನಲಾಗಿದೆ. ಸಮವಸ್ತ್ರದಲ್ಲಿದ್ದ ಅಧಿಕಾರಿಗಳನ್ನು ಅವಮಾನಿಸಿರುವ ಬಗ್ಗೆ ಪೊಲೀಸ್ ಕಮಿಷನರ್ ಹಾಗೂ ನಗರ ಜಿಲ್ಲಾಧಿಕಾರಿಗೆ ದೂರು ಕೊಡಲು ನಿರ್ಧರಿಸಲಾಗಿದೆ.
ಖುದ್ದು ಡಿಸಿಎಂ ಸವದಿ ಮನವಿ:ಮಹಾಮಾರಿ ಕರೊನಾ ವೈರಸ್ ನಿಯಂತ್ರಣಕ್ಕೆ ಇಡೀ ಸರ್ಕಾರ ಹೋರಾಡುತ್ತಿದ್ದರೂ ಇಲಾಖಾ ಮುಖ್ಯಸ್ಥರ ನಿರ್ಲಕ್ಷ್ಯಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ರೋಗಿಗಳ ಸೇವೆಯಲ್ಲಿ ನಿರತರಾಗಿರುವ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಕಾರ್ಯಗಳಿಗೆ ವಾಹನಗಳನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.
ಕರೊನಾ ಲಾಕ್​ಡೌನ್​ನಿಂದಾಗಿ ಬೆಂಗಳೂರಿನ ಮೇಲಾದ ಧನಾತ್ಮಕ ಪರಿಣಾಮ ಏನು ಗೊತ್ತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
