ಬೆಂಗಳೂರು:ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಪ್ರಯಾಣಿಕರಿಗೆ ರೈಲ್ವೆ ಸೇವೆ ನೀಡುವುದರ ಜತೆಗೆ ವಾಹನಗಳ ಸಾಗಣೆಗೂ ಹೆಚ್ಚು ಒತ್ತು ನೀಡುತ್ತಿದೆ. ಅದರಂತೆ ಶುಕ್ರವಾರ ಹೊಸೂರಿನಿಂದ ಹರಿಯಾಣದ ಬಲ್ಲಬ್ಗರ್‌ಗೆ ಅಶೋಕ ಲೇಲ್ಯಾಂಡ್‌ನ 64 ಭಾರಿ ವಾಣಿಜ್ಯ ವಾಹನದ ಚಾಸೀಸ್‌ಗಳನ್ನು ರೈಲಿನ ಮೂಲಕ ಸಾಗಿಸಲಾಗಿದೆ.
ಕಳೆದೊಂದು ವರ್ಷದಿಂದ ವಾಹನಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ರೈಲಿನ ಮೂಲಕ ಸಾಗಿಸಲಾಗುತ್ತಿದೆ. 2020ರ ಏಪ್ರಿಲ್ 29ರಂದು ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದಿಂದ ರಾಜಸ್ತಾನದ ಪುಲೇರಿಯಾಕ್ಕೆ 175 ಟ್ರ್ಯಾಕ್ಟರ್‌ಗಳನ್ನು ಸಾಗಿಸುವ ಮೂಲಕ ರೈಲಿನಲ್ಲಿ ವಾಹನಗಳ ಸಾಗಣೆಗೆ ಚಾಲನೆ ನೀಡಲಾಗಿತ್ತು.
ಅದರ ಜತೆಗೆ 2020-21ನೇ ಸಾಲಿನಲ್ಲಿ ಪೆನುಕೊಂಡಾದಿಂದ 91 ರೇಕ್‌ಗಳಲ್ಲಿ ಕಾರುಗಳು, ಮಾಲೂರಿನಿಂದ 7 ರೇಕ್‌ಗಳಲ್ಲಿ ದ್ವಿಚಕ್ರ ವಾಹನ, ಹೊಸೂರಿನಿಂದ 6 ರೇಕ್‌ಗಳಲ್ಲಿ ಲಘು ವಾಣಿಜ್ಯ ವಾಹನಗಳನ್ನು ಸಾಗಿಸಲಾಗಿದೆ.

ಭೀಕರ ಅಪಘಾತ, ಕಾರು ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು…

ಮತ್ತೆ ಕೋವಿಡ್ ನಿರ್ಬಂಧ: ಶಾಲೆ, ಜಿಮ್​, ಕ್ಲಬ್, ಪಾರ್ಟಿಹಾಲ್​, ಈಜುಕೊಳ ಬಂದ್​; ಬಾರ್-ರೆಸ್ಟೋರೆಂಟ್​, ಚಿತ್ರಮಂದಿರಗಳಲ್ಲಿ ಗರಿಷ್ಠ ಶೇ. 50 ಆಸನ ಭರ್ತಿಗಷ್ಟೇ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 6 =
Remember me
