ಬೆಂಗಳೂರು:ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹಲವು ವಾಹನಗಳ ಗಾಜು ಪುಡಿಪುಡಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದು, ಆ ಪೈಕಿ ರೌಡಿಶೀಟರ್​ ಹೆಂಡತಿಗೆ ಕಿಡಿಗೇಡಿಯೊಬ್ಬ ಮೆಸೇಜ್ ಮಾಡುತ್ತಿದ್ದುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವೆಂಬುದು ತಿಳಿದುಬಂದಿದೆ.
ಕಾಮಾಕ್ಷಿಪಾಳ್ಯದಿಂದ ಚಂದ್ರಾ ಲೇಔಟ್ ಮತ್ತು ಗೋವಿಂದರಾಜನಗರದ ತ‌ನಕ ರಸ್ತೆ ಬದಿಯಲ್ಲಿದ್ದ ಕಾರು-ಆಟೋಗಳ ಗಾಜುಗಳನ್ನು ಒಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಸಾಗರ್ ಹಾಗೂ ಅಶೋಕ್ ಎಂಬಿಬ್ಬರನ್ನು ಬಂಧಿಸಿದ್ದಾರೆ.
ರೌಡಿ ಶೀಟರ್ ವಿನಯ್ ಎಂಬಾತನ ಪತ್ನಿಯ ಕ್ಲಾಸ್​ಮೇಟ್ ಆಗಿರುವ ಸಾಗರ್ ಅಲಿಯಾಸ್ ಕುಳ್ಳ ಸಾಗರ್ ಆಕೆಗೆ ಮೆಸೇಜ್ ಮಾಡುತ್ತಿದ್ದ. ಕೆಲವು ದಿನಗಳ ಹಿಂದೆ ಬಾರ್​ ಒಂದರಲ್ಲಿ ಸಾಗರ್ ಸಿಕ್ಕಿದ್ದಾಗ, ಯಾಕೆ ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತಿ ಎಂದು ವಿನಯ್​ ಕೇಳಿದ್ದ. ಆಗ ಸಾಗರ್​ ವಿನಯ್​ಗೇ ಬೈದಿದ್ದ. ಬಳಿಕ ಬಾರ್​​ನಿಂದ ವಿನಯ್ ಮತ್ತು ಸಾಗರ್​ನನ್ನು ಹೊರಹಾಕಲಾಗಿತ್ತು.
ನಂತರ ಸಾಗರ್​ ಜತೆ ಅಶೋಕ್ ಮತ್ತು ಪ್ರಜ್ವಲ್ ಸೇರಿಕೊಂಡಿದ್ದು, ಮೂವರೂ ಒಟ್ಟಾಗಿ ವಿನಯ್​ಗೆ ಹೊಡೆಯಲು ಯೋಜನೆ ಹಾಕಿಕೊಂಡಿದ್ದರು. ಅದಕ್ಕೆ ಆರೋಪಿಗಳು ಕಾಮಾಕ್ಷಿಪಾಳ್ಯದ ಕಾವೇರಿ ನಗರದ ವಿನಯ್ ನಿವಾಸಕ್ಕೆ ರಾಡ್ ಸಹಿತ ಹೋಗಿದ್ದು, ಅಲ್ಲಿ ವಿನಯ್ ಸಿಕ್ಕಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಆರೋಪಿಗಳು, ಬಳಿಕ ವಾಪಸ್ಸು ಬರುವ ದಾರಿಯಲ್ಲಿದ್ದ ವಾಹನಗಳ ಗಾಜುಗಳನ್ನು ಒಡೆದು ಹಾಕಿದ್ದರು. ಈ ಕೃತ್ಯಕ್ಕೆ ಸಂಬಂಧಿಸಿದ ಸಿಸಿಟಿವಿ ಕ್ಲಿಪ್ಪಿಂಗ್​ಗಳನ್ನು ಪರಿಶೀಲಿಸಿದ ಕಾಮಾಕ್ಷಿಪಾಳ್ಯದ ಪೊಲೀಸರು ಸಾಗರ್​ ಮತ್ತು ಅಶೋಕ್​ನನ್ನು ಬಂಧಿಸಿದ್ದಾರೆ.
ಕಾರು ನಿಲ್ಲಿಸಿ ಹೋಗುತ್ತಿದ್ದೀರಾ, ಎಚ್ಚರ!; ಒಂದೇ ದಿನ ಒಂದೇ ಥರದ ಎರಡು ಪ್ರಕರಣ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
