ಬೆಂಗಳೂರು:ಆಕ್ಸಿಡೆಂಟ್​​ ಕೇಸ್​ನಲ್ಲಿ ಜಪ್ತಿಯಾದ ವಾಹನಗಳು ಬೇಗನ ವಾಹನ ಮಾಲೀಕರ ಪಾಲಾಗುತ್ತಿರಲಿಲ್ಲ. ಮಾಲೀಕರು ಮತ್ತೆ ತಮ್ಮ ವಾಹನಗಳನ್ನು ಪಡೆದುಕೊಳ್ಳಲು ಸಾಕಷ್ಟು ಸಮಯ ತಗಲುತ್ತಿತ್ತು. ಆದರೆ ಇನ್ನು ಮುಂದೆ ಆಕ್ಸಿಡೆಂಟ್ ಕೇಸ್ ಇರುವ ವಾಹನ ಮಾಲೀಕರು ತಮ್ಮ ವಾಹನಗಳನ್ನು 24 ಗಂಟೆಗಳಲ್ಲಿ ಪಡೆದುಕೊಳ್ಳಬಹುದು.
ಹೌದು, ಆಕ್ಸಿಡೆಂಟ್ ಕೇಸ್ ವಾಹನ ಮಾಲೀಕರಿಗೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಹೇಳಿಕೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಹಿಂದೆ ಕೇಸ್​​ನ ತನಿಖೆಯಿಂದಾಗಿ ಜಪ್ತಿಯಾದ ವಾಹನಗಳು ತಿಂಗಳುಗಟ್ಟಲೆ ಸ್ಟೇಷನ್​ ವಠಾರದಲ್ಲೇ ಇರುತ್ತಿದ್ದವು. ಆದರೆ ಇನ್ನು ಮುಂದೆ ಆ್ಯಕ್ಸಿಡೆಂಟ್ ಆದ 24ಗಂಟೇಲೆ ವಾಪಸ್ ನೀಡುವಂತೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಆದೇಶ ನೀಡಿದ್ದಾರೆ.
ಆ್ಯಕ್ಸಿಡೆಂಟ್ ಆದ ವಾಹನಗಳನ್ನು ಪೊಲೀಸರು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಆರ್​ಟಿಓ ದಿಂದ ಪರಿಶೀಲನೆ ನಡೆದ ಬಳಿಕ, ಮೆಕಾನಿಕಲ್ ಆಗಿ ಏನಾದ್ರು ತೊಂದರೆ ಆಗಿದೆಯಾ ಎಂದು ರಿಪೋರ್ಟ್ ಮಾಡಲಾಗುತ್ತದೆ. ನಂತರ ಸಿಬ್ಬಂದಿ ಮಾಲೀಕರಿಗೆ ಸೂಚನೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ವಾಹನ ಕೊಡಲಾಗುತ್ತದೆ. ಆ್ಯಕ್ಸಿಡೆಂಟ್ ಆಗಿದೆ ಅಂತಾ ವಾಹನಗಳನ್ನು ಸ್ಟೇಷನ್ ಮುಂದೆ ಇಟ್ಟುಕೊಂಡರೆ ಸಾಕಷ್ಟು ವಾಹನ ಬಂದು ಬೀಳುತ್ತವೆ. ಇದರಿಂದ ಸ್ಟೇಷನ್ ಕೂಡ ಲಕ್ಷಣವಾಗಿ ಕಾಣಿಸುವುದಿಲ್ಲ. ಹೀಗಾಗಿ ಆ್ಯಕ್ಸಿಡೆಂಟ್ ವಾಹನಗಳು ಇಟ್ಟುಕೊಳ್ಳೋ ಅವಶ್ಯಕತೆ ಇಲ್ಲ. ಇನ್ನು ಮುಂದೆ 24 ಗಂಟೆಯಲ್ಲಿ ಪರಿಶೀಲನೆ ನಡೆಸಿ ವಾಪಸ್ ನೀಡಲಾಗುತ್ತದೆ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + eleven =
Remember me
