| ಬೇಲೂರು ಹರೀಶ ಬೆಂಗಳೂರು
ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆಂಡ್ ವೇರ್​ಹೌಸಿಂಗ್ ಸೊಸೈಟಿಯ (ಕೆಡಿಎಲ್​ಡಬ್ಲ್ಯುಎಸ್) ಅಕ್ರಮಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಪಿಪಿಇ ಕಿಟ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಉಪಕರಣ ಖರೀದಿ ಹಗರಣ ಬಯಲಾದ ಬೆನ್ನಲ್ಲೇ ವೆಂಟಿಲೇಟರ್ ಖರೀದಿಯಲ್ಲೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಕರೊನಾ ಉಪಕರಣ ಹಾಗೂ ಔಷಧ ಸಾಮಗ್ರಿಗಳಲ್ಲಿ ಅಕ್ರಮ ನಡೆದಿದೆಯೆಂದು ಪ್ರತಿಪಕ್ಷಗಳು ಆರೋಪಿಸಿ ಲೆಕ್ಕ ಕೇಳುತ್ತಿರುವಾಗಲೇ ಮಾರುಕಟ್ಟೆ ದರಕ್ಕಿಂತ 2-3 ಪಟ್ಟು ಹೆಚ್ಚು ಹಣ ಪಾವತಿಸಿ ವೆಂಟಿಲೇಟರ್ ಖರೀದಿಸಿರುವ ಈ ಗೋಲ್ಮಾಲ್ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.
15.86 ಕೋಟಿ ರೂ. ವೆಚ್ಚದಲ್ಲಿ 200 ವೆಂಟಲೇಟರ್ ಖರೀದಿಸುವ ಸಂಬಂಧ ಕೆಡಿಎಲ್​ಡಬ್ಲ್ಯುಎಸ್ ಆದೇಶ ಹೊರಡಿಸಿದೆ. ಇದರಲ್ಲಿ ಮಾರುಕಟ್ಟೆ ದರಕ್ಕಿಂತ 3 ಪಟ್ಟು ಅಂದರೆ ಪ್ರತಿ ವೆಂಟಿಲೇಟರ್​ಗೆ ಗರಿಷ್ಠ 18.20 ಲಕ್ಷ ರೂ. ಪಾವತಿಸಿ ಖರೀದಿಸಿರುವುದು ಬಹಿರಂಗವಾಗಿದೆ. ಈ ಹಗರಣದಲ್ಲಿ ಉನ್ನತ ಅಧಿಕಾರಿಗಳೂ ಶಾಮೀಲಾಗಿರುವ ಅನುಮಾನವಿದ್ದು, ಈ ಗೋಲ್ಮಾಲ್​ಗೆ ಸಂಬಂಧಿಸಿದ ದಾಖಲೆಪತ್ರಗಳು ವಿಜಯವಾಣಿಗೆ ಲಭ್ಯವಾಗಿವೆ.
ಕಮಿಷನ್​ಗಾಗಿ ನಿಯಮ ಉಲ್ಲಂಘನೆ: 2020ರ ಮಾರ್ಚ್ ಹಾಗೂ ಏಪ್ರಿಲ್​ನಲ್ಲಿ ಹೊರಡಿಸಿರುವ ಆದೇಶದಲ್ಲಿ ಒಂದೊಂದು ವೆಂಟಿಲೇಟರ್​ಗೆ ಬೇರೆ ಬೇರೆ ದರ ನಿಗದಿಪಡಿಸಿ ಖರೀದಿಸಲಾಗಿದೆ. ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಖರೀದಿಸಿರುವ ಪ್ರತಿ ವೆಂಟಿಲೇಟರ್​ನಲ್ಲಿ ಲಕ್ಷಾಂತರ ರೂ. ವ್ಯತ್ಯಾಸ ಇದೆ. ಈ ಸಂಬಂಧ ಟೆಂಡರ್ ಆಹ್ವಾನಿಸಿದ್ದರೆ ಅಥವಾ ಇ-ಪ್ರೊಕ್ಯೂರ್​ವೆುಂಟ್​ನಲ್ಲಿ ದರ ಪಟ್ಟಿ ಪ್ರಕಟಿಸಿ ಆಹ್ವಾನಿಸಿದರೆ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ವೆಂಟಿಲೇಟರ್ ಖರೀದಿಸಲು ಅವಕಾಶವಿತ್ತು. ಆದರೆ, ಕರೊನಾ ತುರ್ತು ಸಂದರ್ಭವನ್ನೇ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳು ಕಮಿಷನ್ ಆಸೆಗಾಗಿ ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಕೇಳಿಬಂದಿದೆ.
ಯಾವಾಗ ಎಷ್ಟು ಖರೀದಿ?
2020 ಮಾ.22ರಂದು ಮೊದಲಿಗೆ ತಲಾ 5.60 ಲಕ್ಷ ರೂ.ನಂತೆ 130 ವೆಂಟಿಲೇಟರ್ ಖರೀದಿಗೆ ಆದೇಶವಾಗಿತ್ತು. ಇದರಂತೆ 1,75,60,000 ಹಣ ಪಾವತಿಸಲಾಗಿದೆ. 130ರಲ್ಲಿ ಬರೀ 35 ವೆಂಟಿಲೇಟರ್ ಪೂರೈಸಲಾಗಿದೆ. ಅದೇ ದಿನ ಇನ್ನೊಂದು ಆದೇಶವಾಗಿದ್ದು, ಅದರಲ್ಲಿ ತಲಾ 11.92 ಲಕ್ಷ ರೂ.ನಂತೆ 4 ವೆಂಟಿಲೇಟರ್ ಖರೀದಿಗೆ 47.71 ಲಕ್ಷ ರೂ. ಪಾವತಿಸಲಾಗಿದೆ. ಆ ನಾಲ್ಕೂ ವೆಂಟಿಲೇಟರ್ ಸರಬರಾಜಾಗಿವೆ. ಮತ್ತೆ ತಲಾ ಒಂದಕ್ಕೆ 12.38 ಲಕ್ಷ ರೂ.ನಂತೆ 10 ವೆಂಟಿಲೇಟರ್ ಖರೀದಿಗೆ ಆದೇಶ ಕೊಟ್ಟಿದ್ದು, 8 ಪೂರೈಕೆಯಾಗಿರುವುದು ಅನುಮಾನ ಹುಟ್ಟಿಸುತ್ತದೆ.
ಸಾಲುಸಾಲು ಅಕ್ರಮ ಆರೋಪ
ಕೆಡಿಎಲ್​ಡಬ್ಲ್ಯುಎಸ್​ನಲ್ಲಿ ಸಾಲುಸಾಲು ಅಕ್ರಮಗಳ ಆರೋಪ ಕೇಳಿಬರುತ್ತಲೇ ಇವೆ. ಪಿಪಿಇ ಕಿಟ್, ಸ್ಯಾನಿಟೈಸರ್, ಡಯಾಲಿಸಿಸ್, ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್ ಮತ್ತಿತರ ಕರೊನಾ ಪರಿಕರ ಹಾಗೂ ಔಷಧ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರದ ಆರೋಪವಿದ್ದು, ಇದರಲ್ಲಿ ಉನ್ನತ ಅಧಿಕಾರಿಗಳೇ ಶಾಮೀಲಾಗಿದ್ದಾರೆನ್ನಲಾಗಿದೆ.
ಎಚ್ಚರಿಸಿತ್ತು ವಿಜಯವಾಣಿ
ಕಿಟ್​ನ ಗುಣಮಟ್ಟದ ಬಗ್ಗೆ ವಿಜಯವಾಣಿ ಕಳೆದ ಏಪ್ರಿಲ್​ನಲ್ಲೇ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿ ಸರ್ಕಾರವನ್ನು ಎಚ್ಚರಿಸಿತ್ತು. ಅಲ್ಲದೆ, ಅಧಿಕಾರಿಗಳ ನಿರಂತರ ಕರ್ಮಕಾಂಡಗಳ ಬಗ್ಗೆ ವಿಸõತ ವರದಿ ಪ್ರಕಟಿಸಿತ್ತು.
ಬೊಕ್ಕಸಕ್ಕೆ -ಠಿ;6.30 ಕೋಟಿ ನಷ್ಟ
ಮಾರುಕಟ್ಟೆ ದರದಲ್ಲೇ ವೆಂಟಿಲೇಟರ್ ಉತ್ಪಾದಿಸಿ ಸರಬರಾಜು ಮಾಡುವ ಪ್ರಮುಖ ಕಂಪನಿಗಳು ದೇಶದಲ್ಲೇ ಇವೆ. ಕರೊನಾ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ದರಕ್ಕೂ ವೆಂಟಿಲೇಟರ್ ತಯಾರಿಸಿಕೊಡಲು ಕಂಪನಿಗಳು ಮುಂದೆ ಬರುತ್ತಿವೆ. ತಮಿಳುನಾಡು ಸರ್ಕಾರ ಪ್ರತಿ ವೆಂಟಿಲೇಟರ್​ಗೆ 4.78 ಲಕ್ಷ ರೂ. ನಂತೆ 4.78 ಕೋಟಿ ರೂ. ವೆಚ್ಚದಲ್ಲಿ 100 ವೆಂಟಿಲೇಟರ್ ಖರೀದಿಸಿದೆ. ಆದರೆ, ಕರ್ನಾಟಕದ ಅಧಿಕಾರಿಗಳು ಮಾತ್ರ ಮಾರುಕಟ್ಟೆ ದರದ ಬದಲು ಕಮಿಷನ್ ಆಸೆಗಾಗಿ 2-3 ಪಟ್ಟು ಹೆಚ್ಚು ಅಂದರೆ ಪ್ರತಿ ವೆಂಟಿಲೇಟರ್​ಗೆ ಗರಿಷ್ಠ 18.20 ಲಕ್ಷ ರೂ.ನಂತೆ 15.86 ಕೋಟಿ ರೂ. ವೆಚ್ಚದಲ್ಲಿ 200 ವೆಂಟಿಲೇಟರ್ ಖರೀದಿಸಿದ್ದಾರೆ. ಅಂದರೆ, ಪ್ರತಿ ವೆಂಟಿಲೇಟರ್​ಗೆ ತಮಿಳುನಾಡು ಸರ್ಕಾರಕ್ಕಿಂತ 13.42 ಲಕ್ಷ ರೂ. ಹೆಚ್ಚುವರಿ ಯಾಗುತ್ತದೆ. ಪ್ರತಿ ವೆಂಟಿಲೇಟರ್​ಗೆ 4.78 ಲಕ್ಷ ರೂ.ನಂತೆ 200 ವೆಂಟಿಲೇಟರ್ ಖರೀದಿಸಿದ್ದರೆ 9.56 ಕೋಟಿ ರೂ.ಆಗುತ್ತಿತ್ತು. ಆದರೆ, ಹೆಚ್ಚುವರಿ ಮೊತ್ತದಿಂದಾಗಿ ಸರ್ಕಾರಕ್ಕೆ 6.30 ಕೋಟಿ ರೂಪಾಯಿ ನಷ್ಟವಾಗಿದೆ ಎಂದು
ಅಂದಾಜುಮಾಡಲಾಗಿದೆ.
2020 ಮಾ.24
2020 ಮಾ.30
2020 ಏ.16
ಕಂಪನಿಗಳ ಹೆಸರೇ ಇಲ್ಲ
ಯಾವ ಕಂಪನಿಗೆ ಖರೀದಿ ಆದೇಶ ನೀಡಲಾಗಿದೆ, ಸರಬರಾಜು ಮಾಡಿರುವ ವೆಂಟಿಲೇಟರ್​ಗಳನ್ನು ರಾಜ್ಯದ ಯಾವ ಆಸ್ಪತ್ರೆಗಳಿಗೆ ಪೂರೈಸಲಾಗಿದೆ, ವೆಂಟಿಲೇಟರ್ ಗುಣಮಟ್ಟ ಹಾಗೂ ಮತ್ತಿತರ ಪ್ರಮುಖ ಮಾಹಿತಿಗಳೇ ಅಧಿಕಾರಿಗಳ ಬಳಿ ಇಲ್ಲ.
ಟ್ರೋಲ್​ ಆಗುವ ಬಗ್ಗೆ ಮೊದಲೇ ಗೊತ್ತಿತ್ತಂತೆ: ಹೋಟೆಲ್​ ಮಾಲೀಕ-ಪ್ರತಾಪ್​ ನಡುವೆ ನಡೆದಿತ್ತು ರೋಚಕ ಮಾತುಕತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 9 =
Remember me
