ಬೆಂಗಳೂರು:ಕರೊನಾ ನಿರ್ವಹಣೆ ನೆಪದಲ್ಲಿ ಸರ್ಕಾರ ಕೋಟ್ಯಂತರ ರೂ. ಅವ್ಯವಹಾರ ನಡೆಸಿದೆ ಎಂದು ಆರೋಪಿಸುತ್ತಲೇ ಇದ್ದ ವಿರೋಧ ಪಕ್ಷ, ಇಂದು(ಜು.18)ವಿಜಯವಾಣಿಮುಖಪುಟದಲ್ಲಿ ಪ್ರಕಟಗೊಂಡಿದ್ದ‘ವೆಂಟಿಲೇಟರ್​ ಗೋಲ್ಮಾಲ್​’ವರದಿಯನ್ನೇ ಸಾಕ್ಷೀಕರಿಸಿ ‘ಉತ್ತರ ಕೊಡಿ ಬಿಜೆಪಿ’ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.
ಪಿಪಿಇ ಕಿಟ್​, ಸ್ಯಾನಿಟೈಸರ್​, ಥರ್ಮಲ್​ ಸ್ಕ್ರೀನಿಂಗ್​ ಉಪಕರಣ ಖರೀದಿ ಹಗರಣ ಬಯಲಾದ ಬೆನ್ನಲ್ಲೇ ವೆಂಟಿಲೇಟರ್​ ಖರೀದಿಯಲ್ಲೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. 15.86 ಕೋಟಿ ರೂ. ವೆಚ್ಚದಲ್ಲಿ 200 ವೆಂಟಿಲೇಟರ್​ ಖರೀದಿಸುವ ಸಂಬಂಧ ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ಸ್ಟೇಟ್​ ಡ್ರಗ್ಸ್ ಲಾಜಿಸ್ಟಿಕ್​ ಆ್ಯಂಡ್​ ವೇರ್​ಹೌಸಿಂಗ್​ ಸೊಸೈಟಿ(ಕೆಡಿಎಲ್​ಡಬ್ಲ್ಯುಎಸ್​) ಆದೇಶ ಹೊರಡಿಸಿದೆ. ಇದರಲ್ಲಿ ಮಾರುಕಟ್ಟೆ ದರಕ್ಕಿಂತ 3 ಪಟ್ಟು ಅಂದರೆ ಪ್ರತಿ ವೆಂಟಿಲೇಟರ್​ಗೆ ಗರಿಷ್ಠ 18.20 ಲಕ್ಷ ರೂ. ಪಾವತಿಸಿ ಖರೀದಿಸಿರುವುದು ಬಹಿರಂಗವಾಗಿದೆ. ಈ ಗೋಲ್ಮಾಲ್​ಗೆ ಸಂಬಂಧಿಸಿದ ದಾಖಲೆ ಪತ್ರಗಳು ‘ವಿಜಯವಾಣಿ’ಗೆ ಲಭ್ಯವಾಗಿವೆ. ಈ ಬಗ್ಗೆ ವಿಸ್ತೃತ ವರದಿ ಇಂದು ಪ್ರಕಟವಾಗಿದೆ. ವರದಿಯ ಪ್ರತಿಯನ್ನು ಟ್ವೀಟ್​ ಮಾಡಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​‘ಉತ್ತರ ಕೊಡಿ ಬಿಜೆಪಿ’ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿರಿಸಿಎಂ ಯಡಿಯೂರಪ್ಪಗೆ ಕರೊನಾ ನೆಗೆಟಿವ್​
ಕರೊನಾ ಉಪಕರಣ ಹಾಗೂ ಔಷಧ ಸಾಮಗ್ರಿಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿ ಲೆಕ್ಕ ಕೇಳುತ್ತಿರುವಾಗಲೇ ಮಾರುಕಟ್ಟೆ ದರಕ್ಕಿಂತ ಎರಡ್ಮೂರು ಪಟ್ಟು ಹೆಚ್ಚು ಹಣ ಪಾವತಿಸಿ ವೆಂಟಿಲೇಟರ್​ ಖರೀದಿಸಿರುವ ಈ ಗೋಲ್ಮಾಲ್​ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ತಮಿಳುನಾಡು ಸರ್ಕಾರ ಪ್ರತಿ ವೆಂಟಿಲೇಟರ್​ಗೆ 4.78 ಲಕ್ಷ ರೂ. ನಂತೆ 4.78 ಕೋಟಿ ರೂ. ವೆಚ್ಚದಲ್ಲಿ 100 ವೆಂಟಿಲೇಟರ್​ ಖರೀದಿಸಿದೆ. ಆದರೆ, ಕರ್ನಾಟಕದ ಅಧಿಕಾರಿಗಳು ಮಾತ್ರ ಮಾರುಕಟ್ಟೆ ದರದ ಬದಲು ಕಮಿಷನ್​ ಆಸೆಗಾಗಿ ಪ್ರತಿ ವೆಂಟಿಲೇಟರ್​ಗೆ ಗರಿಷ್ಠ 18.20 ಲಕ್ಷ ರೂ.ನಂತೆ 15.86 ಕೋಟಿ ರೂ. ವೆಚ್ಚದಲ್ಲಿ 200 ವೆಂಟಿಲೇಟರ್​ ಖರೀದಿಸಿದ್ದಾರೆ. ಹೆಚ್ಚುವರಿ ಮೊತ್ತದಿಂದಾಗಿ ಸರ್ಕಾರಕ್ಕೆ 6.30 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
'CORONA CORRUPTION' of BJP govt is exposed in this Ventilator purchase scam.
TN Govt purchases at ₹4.78 lakh per ventilator, Karnataka Govt has purchased it at ₹18.20 lakh per ventilator!
CM@BSYBJP, answer us on this corruption by your govt.#ಉತ್ತರಕೊಡಿಬಿಜೆಪಿ#AnswerUsBJPpic.twitter.com/YHzVm8U8QB
— DK Shivakumar (@DKShivakumar)July 18, 2020

ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಡಿಕೆಶಿ, ಕರೊನಾ ಸಂಕಷ್ಟದ ಕಾಲದಲ್ಲೂ ವೆಂಟಿಲೇಟರ್ ಖರೀದಿ ಹೆಸರಲ್ಲಿ ನಡೆದಿರುವ ಹಗರಣ ಬಯಲಾಗಿದೆ. ನಿಮ್ಮ ಸರ್ಕಾರದಲ್ಲಿ ನಡೆದಿರುವ ಈ ಭ್ರಷ್ಟಾಚಾರದ ಬಗ್ಗೆ ನಮಗೆ ಉತ್ತರಿಸಿ ಎಂದು ರಾಜ್ಯ ಸರ್ಕಾರವನ್ನು ಆಗ್ರಸಿದ್ದಾರೆ.
ಪಿಪಿಇ ಕಿಟ್​ನ ಗುಣಮಟ್ಟದ ಬಗ್ಗೆವಿಜಯವಾಣಿಕಳೆದ ಏಪ್ರಿಲ್​ನಲ್ಲೇ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿ ಸರ್ಕಾರವನ್ನು ಎಚ್ಚರಿಸಿತ್ತು. ಅಲ್ಲದೆ, ಅಧಿಕಾರಿಗಳ ನಿರಂತರ ಕರ್ಮಕಾಂಡಗಳ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
https://www.facebook.com/VVani4U/videos/2018084505156707/
video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + nineteen =
Remember me
