ಆದಾಯಕ್ಕಿಂತ ಅಧಿಕ ಆಸ್ತಿ-ಪಾಸ್ತಿ ಹೊಂದಿರುವ ಆರೋಪ ಎದುರಿಸುತ್ತಿದ್ದ ಪಿಡಬ್ಲ್ಯುಡಿ ನಿವೃತ್ತ ನೌಕರರೊಬ್ಬರು ಕಳೆದ 30 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದು ಅಂತಿಮ ತೀರ್ಪು ಬರಬೇಕೆನ್ನುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಇಂಥದ್ದೊಂದು ಅಪರೂಪದ ಸಂಗತಿ ಲೋಕಾಯುಕ್ತ ಪ್ರಕರಣದಲ್ಲಿ ಸಂಭವಿಸಿದ್ದು, ಪಿಡಬ್ಲ್ಯುಡಿ ಇಲಾಖೆಯಲ್ಲಿ ಎಇಇ ಆಗಿದ್ದ ನಾರಾಯಣ ರೆಡ್ಡಿ (81) ಕೋರ್ಟ್​ಗೆ ಅಲೆದರೂ ಅಂತಿಮ ತೀರ್ಪು ಆಲಿಸದೇ ಪ್ರಾಣ ಬಿಟ್ಟಿದ್ದಾರೆ.
ಪ್ರಕರಣ ಅಂತಿಮ ಹಂತದ ವಿಚಾರಣೆಯಲ್ಲಿದ್ದು, ಕೆಲ ದಿನಗಳ ಹಿಂದೆ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡುವಂತೆ ನಾರಾಯಣರೆಡ್ಡಿಗೆ ಕೋರ್ಟ್ ಸೂಚಿಸಿತ್ತು. ಈ ವೇಳೆಇವರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ್ಯಾಯಕ್ಕಾಗಿ ಹಠ ಬಿಡದ ರೆಡ್ಡಿ, ಕಳೆದ ಜನವರಿಯಲ್ಲಿ ತಮ್ಮ ವಕೀಲರ ಸಹಾಯದಿಂದ ಆಸ್ಪತ್ರೆಯಿಂದ ವೀಲ್​ಚೇರ್​ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ, ನನ್ನ ಆಸ್ತಿ ದಾಖಲೆಗಳು ಸರಿಯಾಗಿದೆ ಎಂದು ಹೇಳಿಕೆ ನೀಡಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಮಾ.13ಕ್ಕೆ ಅಂತಿಮ ತೀರ್ಪನ್ನು ಕಾಯ್ದಿರಿಸಿತ್ತು. 30 ವರ್ಷಗಳ ಕಾಲ ಅಲೆದು ನ್ಯಾಯಕ್ಕಾಗಿ ಹೋರಾಟ ನಡೆಸಿದ ಕಾರಣ ನ್ಯಾಯ ಸಿಕ್ಕಿಯೇ ತೀರುತ್ತೇನೆ ಎಂಬ ಕನಸು ಕಂಡಿದ್ದ ನಾರಾಯಣ ರೆಡ್ಡಿ ಫೆ.26ಕ್ಕೆ ನಿಧನ ಹೊಂದಿದ್ದಾರೆ. ತಾನು ನಿರಪರಾಧಿ ಎಂಬ ತೀರ್ಪು ಆಲಿಸಬೇಕೆಂದಿದ್ದ ರೆಡ್ಡಿ ಕನಸು ಕನಸಾಗಿಯೇ ಉಳಿದಿದೆ.
ಏನಿದು ಪ್ರಕರಣ?: ನಾರಾಯಣ ರೆಡ್ಡಿ 1965 ಆ.26ರಂದು ಜೆ.ಇ. ಆಗಿ ಪಿಡಬ್ಲ್ಯುಡಿ ಇಲಾಖೆಗೆ ನೇಮಕವಾಗಿದ್ದರು. ಕೆಲ ವರ್ಷದ ಬಳಿಕ ಎಇಇ ಆಗಿ ಬಡ್ತಿ ಹೊಂದಿದ್ದರು. ಆ ಸಂದರ್ಭದಲ್ಲಿ ಇವರು ಭ್ರಷ್ಟಾಚಾರ ಎಸಗಿ ಲಕ್ಷಾಂತರ ರೂ. ಸಂಪಾದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ 1991 ಡಿ.11ರಂದು ಲೋಕಾಯುಕ್ತ ಪೊಲೀಸರು ಇವರ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ಡಿ.12ರಂದು ನಾರಾಯಣ ರೆಡ್ಡಿ ಮನೆ ಮೇಲೆ ದಾಳಿ ನಡೆಸಿದ್ದರು. ಈ ಬಗ್ಗೆ ತನಿಖೆ ನಡೆಸಿ ಲೋಕಾಯುಕ್ತ ಪೊಲೀಸ್ ವಿಭಾಗದ ಅಂದಿನ ಇನ್​ಸ್ಪೆಕ್ಟರ್ ಲಕ್ಷ್ಮಣ್ ಸಿಂಗ್ ಪ್ರಕರಣದ ತನಿಖೆ ನಡೆಸಿ 1997ರಲ್ಲಿ ಲೋಕಾ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 21,02,88 ರೂ. ಆದಾಯ ಹೊಂದಿದ್ದು, 6,08,941 ರೂ. ಖರ್ಚು ಮಾಡಿದ್ದಾರೆ. 14,93,147 ರೂ.ಆಸ್ತಿ-ಪಾಸ್ತಿ ಹೊಂದಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದರು. ಕೆಲ ತಿಂಗಳು ವಿಚಾರಣೆ ನಡೆಸಿದ ಲೋಕಾ ನ್ಯಾಯಾಲಯವು 1998 ಅ.13ರಂದು ಪ್ರಕರಣ ವಜಾ ಮಾಡಿತ್ತು. ನಾರಾಯಣ ರೆಡ್ಡಿ ಮಂಡ್ಯದಲ್ಲಿ ತೋಟ ಹೊಂದಿದ್ದು, 1965ರಿಂದ 1990ರವರೆಗೆ ಅದರಿಂದ 16,42,500 ರೂ. ಆದಾಯ ಬಂದಿತ್ತು. ವಿಜಯನಗರ,ರಾಜಾಜಿನಗರದಲ್ಲಿರುವ ಮನೆಗಳನ್ನು 10 ಲಕ್ಷ ರೂ.ಗೆ 30 ವರ್ಷಕ್ಕೆ ಲೀಸ್​ಗೆ ಕೊಟ್ಟಿದ್ದರು. ಲೋಕಾ ಪೊಲೀಸರು ಚಾರ್ಜ್​ಶೀಟ್​ನಲ್ಲಿ ಇದಕ್ಕೆ ಸಂಬಂಧಿಸಿದ ಆದಾಯದ ದಾಖಲೆ ನಮೂದಿಸಿದರೂ, ಈ ಆದಾಯವನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಇದರಿಂದ ಪ್ರಕರಣ ವಜಾ ಆಗಿತ್ತು. ಬಳಿಕ 1998ರಲ್ಲಿ ಮೇ.31 ರಂದು ನಾರಾಯಣ ರೆಡ್ಡಿ ನಿವೃತ್ತಿ ಹೊಂದಿದ್ದರು.
ಹೈಕೋರ್ಟ್​ಗೆ ಮೊರೆ:ಇಷ್ಟಕ್ಕೆ ಸುಮ್ಮನಾಗದ ಲೋಕಾ ಪೊಲೀಸರು 1999ರಲ್ಲಿ ಈ ಬಗ್ಗೆ ಹೈ ಕೋರ್ಟ್​ಗೆ ರಿವಿಜನ್ ಪಿಟಿಷನ್​ಗೆ ಹಾಕಿದ್ದರು. 2001 ನ.8ರಂದು ಹೈ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿ ಲೋಕಾ ಕೋರ್ಟ್ ನೀಡಿದ ಆದೇಶ ಸರಿಯಿದೆ. ಸೆಕ್ಷನ್ 17ರ ಪ್ರಕಾರ ಇನ್​ಸ್ಪೆಕ್ಟರ್​ಗೆ ತನಿಖೆ ನಡೆಸಲು ಅಧಿಕಾರಿ ಇರಲಿಲ್ಲ ಎಂದು ಹೇಳಿತ್ತು. ಈಗಾಗಲೇ ಸಲ್ಲಿಸಿದ ಚಾರ್ಜ್​ಶೀಟ್ ಹೊರತುಪಡಿಸಿ, ನಾರಾಯಣ ರೆಡ್ಡಿ ಅಕ್ರಮ ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ಹೊಸ ದಾಖಲೆಗಳಿದ್ದರೆ ಸಲ್ಲಿಸಬಹುದು ಎಂದು ಹೈ
ಕೋರ್ಟ್ ಸೂಚಿಸಿತ್ತು. ಅಲ್ಲದೆ, ಇನ್​ಸ್ಪೆಕ್ಟರ್​ಅನ್ನು ತನಿಖಾಧಿಕಾರಿಯಾಗಿ ನೇಮಿಸುವ ಬದಲು ಅವರಿಗಿಂತ ಮೇಲಿರುವ ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚಿಸಬೇಕು ಎಂದು ತಿಳಿಸಿತ್ತು.
ಅಂದಿನ ಲೋಕಾಯುಕ್ತ ಪೊಲೀಸ್ ವಿಭಾಗದ ಅಧಿಕಾರಿಗಳು ಬಳ್ಳಾರಿ ಲೋಕಾಯುಕ್ತ ಕಚೇರಿಯಲ್ಲಿದ್ದ ಇನ್​ಸ್ಪೆಕ್ಟರ್ ಒಬ್ಬರಿಗೆ ಮರು ತನಿಖೆ ನಡೆಸಲು ಸೂಚಿಸಿದ್ದರು. 2001 ಮಾರ್ಚ್​ನಿಂದ ಬಳ್ಳಾರಿ ಇನ್​ಸ್ಪೆಕ್ಟರ್ ಪ್ರಕರಣದ ತನಿಖೆ ನಡೆಸಿ ಲಕ್ಷ್ಮಣ್ ಸಿಂಗ್ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿದ್ದ ಅಂಶವನ್ನೇ ತಮ್ಮ ವರದಿಯಲ್ಲಿ ಉಲ್ಲೇಖಿಸಿ 2005ರಲ್ಲಿ ಮತ್ತೆ ಲೋಕಾ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಹಾಕಿದ್ದರು. ಬಳ್ಳಾರಿ ಇನ್​ಸ್ಪೆಕ್ಟರ್
ಹೊಸದಾಗಿ ತನಿಖೆ ನಡೆಸದೆ ಹಳೇ ಚಾರ್ಜ್​ಶೀಟ್​ನಲ್ಲಿದ್ದ ಅಂಶವನ್ನೇ ಸೇರಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿದ್ದರು. ತನಿಖಾಧಿಕಾರಿ ಪ್ರಕರಣವಿಲ್ಲ ಎಂದು ವರದಿ ಕೊಟ್ಟರೂ, ಮೇಲಧಿಕಾರಿಗಳು ಅದನ್ನು ಮರೆ ಮಾಚಿ ಮತ್ತೆ ಚಾರ್ಜ್​ಶೀಟ್ ಹಾಕಿರುವುದರಿಂದ ಒಬ್ಬ ಅಮಾಯಕ ವ್ಯಕ್ತಿ 30 ವರ್ಷ ಕಾಲ ಅಲೆಯಬೇಕಾಯಿತು.
| ಸುಂದರ್ಹಿರಿಯ ವಕೀಲರು

| ಅವಿನಾಶ್ ಮೂಡಂಬಿಕಾನ ಬೆಂಗಳೂರು

VIDEO| ಬಾವಲಿ, ನಾಯಿಗಳನ್ನು ಅದ್ಹೇಗೆ​ ತಿಂತೀರೋ, ನಿಮ್ಮಿಂದ ವಿಶ್ವವೇ ಅಪಾಯದಲ್ಲಿದೆ: ಚೀನಿಯರ ವಿರುದ್ಧ ಅಖ್ತರ್ ಗರಂ

FACT CHECK: ಕರೋನಾ ವೈರಸ್​ ತುರ್ತುಪರಿಸ್ಥಿತಿ ಕುರಿತು ಆರೋಗ್ಯ ಸಚಿವಾಲಯ ಹೊರಡಿಸಿದೆ ಎನ್ನಲಾದ ಸುತ್ತೋಲೆ ಫೇಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
