ಬೆಂಗಳೂರು: ಲೋಕಸಭೆ ಚುನಾವಣೆಯ ನಾಮಪತ್ರ ಪರಿಶೀಲನೆ ಪೂರ್ಣಗೊಂಡಿದ್ದು, ಇನ್ನೇನಿದ್ದರೂ ಕಣದಿಂದ ಹಿಂದೆ ಸರಿಸುವ ಕಸರತ್ತು ನಡೆಯುತ್ತಿದೆ.ಜಾತಿ, ಅಧಿಕಾರಿ, ಹಣ ಮತ್ತಿತರ ಆಮಿಷ ಒಡ್ಡಿ ಅಭ್ಯರ್ಥಿಗಳನ್ನು ಉಮೇದುವಾರಿಕೆಯಿಂದ ಹಿಂದಕ್ಕೆ ಸರಿಸುವುದರ ಕಡೆಗೆ ರಾಜಕೀಯ ಪಕ್ಷಗಳು ಪ್ರಯತ್ನ ನಡೆಸಿವೆ.
ಅನೇಕ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಅಡ್ಡಗಾಲಾಗುವ ಅಭ್ಯರ್ಥಿಗಳನ್ನು ಗುರುತಿಸಿ ಅವರ ಮನವೊಲಿಸುವ ಪ್ರಕ್ರಿಯೆ ಆರಂಭವಾಗಿದೆ. ತಮ್ಮ ತಮ್ಮ ಪಕ್ಷದ ಹೈಕಮಾಂಡ್ ಮೂಲಕ ಗೆಲುವಿಗೆ ಕಂಠಕಪ್ರಾಯರಾಗುವವರನ್ನು ಗುರುತಿಸಿ ವಾಪಸ್ ತೆಗೆಸುವ ಕೆಲಸ ನಡೆಯಲಿದೆ.
ಒಂದೇ ಹೆಸರಿನ ಇಬ್ಬರು, ಮೂವರು, ನಾಲ್ಕು ಜನ ಕಣದಲ್ಲಿರುವುದೂ ಕೂಡ ಕೆಲವು ಅಭ್ಯರ್ಥಿಗಳಿಗೆ ಮಗ್ಗಲು ಮುಳ್ಳಾಗಿದೆ. ತಮಗೆ ಬರಬೇಕಾದ ಮತಗಳು ಇನ್ನಾರ ಪಾಲಾಗುವ ಆತಂಕದಲ್ಲಿ ಅಂತಹವರನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನಗಳೂ ನಡೆಯುತ್ತಿವೆ.
ಕೆಲವು ಕಡೆ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಅವರನ್ನು ಆಯಾ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಕೆಲವು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳು ಕೂಡ ಬಂಡಾಯ/ಸ್ವತಂತ್ರ್ಯ ಅಭ್ಯರ್ಥಿಗಳ ಸ್ಪರ್ಧೆಯಿಂದ ಆತಂಕಿತರಾಗಿದ್ದಾರೆ.
ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಪರಿಶೀಲನೆ ಬಳಿಕ 276 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಏ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಒಟ್ಟು 333 ಪುರುಷ, 25 ಮಹಿಳೆಯರು ಸೇರಿದಂತೆ ಒಟ್ಟು 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದರು. 384 ನಾಮಪತ್ರ ಸ್ವೀಕೃತಗೊಂಡಿದ್ದು, ನಾಮಪತ್ರ ಪರಿಶೀಲನೆ ಬಳಿಕ 60 ನಾಮಪತ್ರಗಳು ತಿರಸ್ಕೃತಗೊಂಡಿವೆ.ಅಂತಿಮವಾಗಿ 276 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಉಡುಪಿ-ಚಿಕ್ಕಮಗಳೂರು 10, ಹಾಸನ 18, ದಕ್ಷಿಣ ಕನ್ನಡ 10, ಚಿತ್ರದುರ್ಗ 24, ತುಮಕೂರು 22, ಮಂಡ್ಯ 19, ಮೈಸೂರು 24, ಚಾಮರಾಜನಗರ 22, ಬೆಂಗಳೂರು ಗ್ರಾಮಾಂತರ 27, ಬೆಂಗಳೂರು ಉತ್ತರ 21, ಬೆಂಗಳೂರು ಕೇಂದ್ರ 28, ಬೆಂಗಳೂರು ದಕ್ಷಿಣ (ಮುಂದೂಡಲಾಗಿದೆ),ಚಿಕ್ಕಬಳ್ಳಾಪುರ 32, ಕೋಲಾರ 19 ಸೇರಿದಂತೆ 276 ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಸಿಂಧುಗೊಂಡಿವೆ. ನಾಮಪತ್ರ ವಾಪಸ್ ಪಡೆಯಲು ಏ.8 ಕೊನೆಯ ದಿನವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 9 =
Remember me
