ಬೆಂಗಳೂರು:ಎಂಜಿನಿಯರಿಂಗ್ ಪ್ರವೇಶಾತಿ ಬಯಸಿ, “ಬಿ, ಸಿ, ಡಿ, ಇ, ಎಫ್‌, ಜಿ, ಎಚ್, ಐ, ಜೆ, ಕೆ, ಎಲ್‌, ಎಂ, ಎನ್‌ ಮತ್ತು ಓ” ಅರ್ಹತಾ ಕಂಡಿಕೆಗಳನ್ನು (ಎಲಿಜಬಲಿಟಿ ಕ್ಲಾಸಸ್‌- ಉದಾಹರಣೆಗೆ ಗಡಿನಾಡ ಕನ್ನಡಿಗರು, ರಾಜ್ಯದ ಸೈನಿಕರು, ರಕ್ಷಣಾ ಸಿಬ್ಬಂದಿ‌‌ ಮಕ್ಕಳು ಇತ್ಯಾದಿ) ಕ್ಲೇಮ್‌ ಮಾಡಿರುವ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಯು ಜುಲೈ 18ರಿಂದ 21ರವರೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ತಿಳಿಸಿದ್ದಾರೆ.
ಇದನ್ನೂ ಓದಿ:ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ…ಕೃತಿ ಶೆಟ್ಟಿಗೆ ಆಹ್ವಾನ ಕೊಟ್ಟ ಸ್ಟಾರ್ ನಟನ ಮಗ
ಈ ಬಗ್ಗೆ ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಮೇಲ್ಕಂಡ ನಾಲ್ಕೂ ದಿನ ಬೆಳಿಗ್ಗೆ 9.30ರಿಂದ ದಾಖಲಾತಿಗಳ ಪರಿಶೀಲನೆ ಆರಂಭವಾಗಲಿದೆ. ಯಾವ್ಯಾವ ರ್‍ಯಾಂಕ್‌ ಪಡೆದಿರುವ ಅಭ್ಯರ್ಥಿಗಳು ಯಾವ ದಿನದಂದು ಈ ಪ್ರಕ್ರಿಯೆಗೆ ಮೂಲದಾಖಲಾತಿಗಳು ಮತ್ತು ಒಂದು ಸೆಟ್‌ ಜೆರಾಕ್ಸ್‌ ಪ್ರತಿಗಳೊಂದಿಗೆ ಹಾಜರಾಗಬೇಕು ಎನ್ನುವುದನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದರಂತೆ ಅಭ್ಯರ್ಥಿಗಳು ಆಗಮಿಸಬೇಕು” ಎಂದು ಮಾಹಿತಿ ನೀಡಿದ್ದಾರೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ಜಾಲತಾಣ http://kea.kar.nic.in ನೋಡಬಹುದು.
‘ನಾಟಾ’ (National Aptitude Test in Architecture) ಅಂಕ ಸಲ್ಲಿಕೆಗೆ ಮತ್ತೊಮ್ಮೆ ಅವಕಾಶ:ಆರ್ಕಿಟೆಕ್ಚರ್ ಕೋರ್ಸಿಗೆ ಪ್ರವೇಶಾತಿ ಬಯಸಿ, ತಮ್ಮ ಅರ್ಜಿಯಲ್ಲಿ ಇದುವರೆಗೂ ನಾಟಾ-1 ಅಥವಾ ನಾಟಾ-2 ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳನ್ನು ನಮೂದಿಸದೆ ಇರುವ ಅಭ್ಯರ್ಥಿಗಳು ನಿಯಮಾನುಸಾರ ರ್‍ಯಾಂಕಿಂಗ್ ಪಡೆಯಲು ಅನುಕೂಲವಾಗಲೆಂಬ ಹಿನ್ನೆಲೆಯಲ್ಲಿ, ಜುಲೈ 5ರ ಬೆಳಿಗ್ಗೆ 11 ಗಂಟೆಯವರೆಗೂ ಪ್ರಾಧಿಕಾರವು ಮತ್ತೊಂದು ಅವಕಾಶ ಕಲ್ಪಿಸಿದೆ ಎಂದು ಇದೇ ಪ್ರಕಟಣೆ ತಿಳಿಸಿದೆ.
ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದ; ಯುವಕನ ಕಿರುಕುಳದಿಂದ ಬೇಸತ್ತು ಪ್ರಾಣ ಬಿಟ್ಟ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
