
ಬೆಂಗಳೂರು:ಐದು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ, ಸಂಘಟಕರಾಗಿ ಸೇವೆ ಸಲ್ಲಿಸಿದ ಹಿರಿಯ ಚೇತನಸಿ.ಆರ್.ಕೃಷ್ಣರಾವ್ (95) ಅವರು ಬೆಂಗಳೂರಿನಲ್ಲಿ ಮಂಗಳವಾರ ನಿಧನರಾದರು.ಸಿಆರ್‌ಕೆ ಎಂದೇ ಖ್ಯಾತರಾಗಿದ್ದ ಅವರು ಪತ್ನಿ ಶಾರದ, ಇಬ್ಬರು ಮಕ್ಕಳು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.ಜನಶಕ್ತಿ ಪತ್ರಿಕೆಯಲ್ಲಿ ವೃತ್ತಿ ಜೀವನ ನಡೆಸಿದ ಅವರು, ವಿ.ಎನ್.ಸುಬ್ಬರಾವ್ ಜೊತೆಗೆ ಸೇರಿ ಸಿನಿಮಾಕ್ಕೆಂದೇ ಮೇನಕಾ ಪತ್ರಿಕೆಯನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ ಕೀರ್ತಿ ಅವರದು. ಹೊಸತು ಪತ್ರಿಕೆಯ ಅಂಕಣಕಾರರಾಗಿ, ನವಕರ್ನಾಟಕ ಪ್ರಕಾಶನ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಖಜಾಂಚಿ ಮತ್ತು ಕಾರ್ಯದರ್ಶಿಯಾಗಿ, ಕೆಯುಡಬ್ಲ್ಯೂಜೆ ರಜತ ಮಹೋತ್ಸವದ ಸಂಚಾಲಕರಾಗಿ ಸಲ್ಲಿಸಿದ್ದರು.ಕೆಯುಡಬ್ಲ್ಯೂಜೆಯಲ್ಲಿ ಕೇವಲ 150 ಸದಸ್ಯರಿದ್ದ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಂಘಟನೆಯನ್ನು ಆ ಕಾಲಘಟ್ಟದಲ್ಲಿ ಬೆಳೆಸಿದ ಹಿರಿಮೆ ಅವರದು.ಸಿಆರ್‌ಕೆ ಅವರ ಸೇವೆ ಸ್ಮರಿಸಿ 75ನೇ ಅಮೃತ ಸ್ವಾತಂತ್ರ್ಯತ್ಸವದ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಅವರ ಮನೆಗೆ ತೆರಳಿ ಅತ್ಯಂತ ಅಭಿಮಾನದಿಂದ ಸನ್ಮಾನಿಸಿತ್ತು.
ಕೆಯುಡಬ್ಲ್ಯೂಜೆ ಸಂತಾಪ:ಹಿರಿಯ ಚೇತನ ಸಿ.ಆರ್.ಕೃಷ್ಣರಾವ್ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ.ಪತ್ರಕರ್ತರಾಗಿ ಮತ್ತು ಸಂಘಟಕರಾಗಿ ದುಡಿದ ಸಿಆರ್‌ಕೆ ನಡೆದಾಡುವ ಮಾಹಿತಿ ಕೋಶ ಎಂದೇ ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ಸುದ್ದಿ ಮನೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 14 =
Remember me
