ಬಾಗಲಕೋಟೆ: ಜೆಎನ್​ಯುನಲ್ಲಿ ಅಂದು ಕನ್ಹಯ್ಯ ಕುಮಾರ್ ದೇಶ ದ್ರೋಹಿ ಘೋಷಣೆ ಕೂಗಿದ ಆ ಸಂದರ್ಭದಲ್ಲಿ ನಾನೇನಾದರೂ ಅಲ್ಲಿ ಇದ್ದಿದ್ದರೆ, ನನ್ನ ಕೈಯಲ್ಲಿ ಎಕೆ 47 ಇದ್ದಿದ್ದರೆ ಅಂವನ್ನ ಅಲ್ಲೇ ಗುಂಡಿಕ್ಕಿ ಕೊಲ್ತಿದ್ದೆ..!
ಹೀಗಂತ ಆದರೆ, ಹೋದರೆ, ಇದ್ದರೆ ಎನ್ನುತ್ತ ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ!. ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ವಿಎಚ್ ಪಿ ಹಾಗೂ ವಿದ್ಯಾಗಿರಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ದೇಶದ್ರೋಹಿಗಳ ವಿರುದ್ಧ ಪ್ರತಿಭಟನೆ ಮಾಡಿದರೆ ದೇಶಪ್ರೇಮಿಗಳ ಮೇಲೆ ಹಲವು ಕೇಸ್ ಹಾಕ್ತಾರೆ. ದೇಶದ್ರೋಹಿ‌ ಘೋಷಣೆ ಕೂಗಿದವರಿಗೆ ಜಾಮೀನು ಸಿಗುವ ಕೇಸ್ ಹಾಕ್ತಾರೆ. ದೇಶದ್ರೋಹಿ ಘೋಷಣೆ ಜಾಮೀನಿನ ಮೇಲೆ ಬಿಡುವ ಕೇಸಾ…? ಎಂದು ಪ್ರಶ್ನಿಸಿದ ಅವರು, ದೇಶದ್ರೋಹಿ ಘೋಷಣೆ ಕೂಗಿದವರ ಕೈಕಾಲುಗಳನ್ನು ಪೊಲೀಸ್ ಠಾಣೆಯಲ್ಲಿ ತೆಗೆದು ಹಾಕಬೇಕಿತ್ತು. ಅಂಥವರ ನಾಲಿಗೆ ಕತ್ತರಿಸುವ ಕೆಲಸವನ್ನು ನಾವು ಇಂದು ಮಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ದೇಶ ಆಮೇಲೆ ಪಕ್ಷ, ಧರ್ಮ ಎಂಬುದನ್ನು ನಾವು ಅರಿತಿರಬೇಕು. ಜೆಎನ್​ಯುದಲ್ಲಿ ಯಾಂವರೀ ಅಂವಾ? ಕನ್ಹಯ್ಯ ಯಾರು? ಹೇ ಮೊದಲು ನಿನ್ನ ಹೆಸರು ಬದಲಿ ಮಾಡಿಕೋ. ಕನ್ಹಯ್ಯ ಅಂದ್ರೆ ಕೃಷ್ಣ. ಕೃಷ್ಣ ಅಂತ ಹೆಸರು ಇಟ್ಕೊಂಡು ದೇಶವನ್ನು ವಿಭಜನೆ ಮಾಡು ಅಂತಿಯಾ…? ಎಂದ ಭಾಂಡಗೆ, ಜೆಎನ್ ಯುದಲ್ಲಿ ದೇಶದ್ರೋಹಿ ಘೋಷಣೆ ಕೂಗಿದವರಿಗೆ ಕಾಂಗ್ರೆಸ್ ಲೀಡರ್ ಗಳು ಶಹಬ್ಬಾಸ್ ಹೇಳ್ತಾರೆ. ಜೆಎನ್ ಯುನಲ್ಲಿ ದೇಶದ್ರೋಹಿ ಘೋಷಣೆ ಕೂಗಿದಾಗ ನಾನೇನಾದ್ರೂ ಇದ್ರೆ. ನನ್ನ ಕೈಯಲ್ಲಿ ಎಕೆ 47 ಇದ್ದಿದ್ರೆ ಅವನನ್ನು ಅಲ್ಲೆ ಗುಂಡಿಕ್ಕಿ ಕೊಲ್ತಿದ್ದೆ ಎಂದು ಕಿಡಿಕಾರಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 14 =
Remember me
