ಬೆಂಗಳೂರು:ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೂರಾರು ರೋಗಿಗಳು ವೈದ್ಯರಿಗಾಗಿ ಕಾಯುತ್ತಿದ್ದ ದೃಶ್ಯ ಎಂದು ಅಲ್ಲಿನ ಅವ್ಯವಸ್ಥೆಯನ್ನು ಬಿಂಬಿಸಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟವನ ವಿರುದ್ಧ ಇದೀಗ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ರೋಗಿಗಳು ವೈದ್ಯರಿಗಾಗಿ ಪರದಾಡುತ್ತಿರುವ ದೃಶ್ಯವನ್ನು ಯಾವುದೋ ಒಂದು ಆಸ್ಪತ್ರೆಯಿಂದ ವಿಡಿಯೋ ಮಾಡಲಾಗಿತ್ತು. ಅದನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.
ಇದನ್ನೂ ಓದಿ:ರೆಸ್ಟೊರೆಂಟ್​ ಬಾಗಿಲು ಮುಚ್ಚಿಸಿದ ಪೊಲೀಸರ ವಿರುದ್ಧ ಮಾಲೀಕನ ಸೇಡು; ಎಫ್​ಐಆರ್​ ದಾಖಲು
ಅದನ್ನೇ ನಂಬಿ ಅನೇಕ ಮಂದಿ ಆಸ್ಪತ್ರೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಡಿಯೋವನ್ನು ಪರಿಶೀಲಿಸಿದಾಗ ಇದು ನಕಲಿ ವಿಡಿಯೋ ಎಂದು ತಿಳಿದುಬಂದಿದೆ.
ಇದರ ಬೆನ್ನತ್ತಿ ಹೋದ ಸೈಬರ್‌ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಐಟಿ ಕಾಯ್ದೆ, ಎನ್‌ಡಿಎಂ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 505ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಂತಹ ವಿಡಿಯೋಗಳನ್ನು ಸಾರ್ವಜನಿಕರು ಯಾರಿಗೂ ಕಳುಹಿಸಬಾರದು. ಕರೊನಾ ಸಂದರ್ಭದಲ್ಲಿ ಜನರಲ್ಲಿ ಆತಂಕ ಮೂಡಿಸುವ ಇಂತಹ ವಿಡಿಯೋಗಳ ಬಗ್ಗೆ ಜನರು ಎಚ್ಚರಿಕೆ ವಹಿಸಿಬೇಕು, ನಕಲಿ ವಿಡಿಯೋಗಳನ್ನು ಫಾರ್ವರ್ಡ್‌ ಮಾಡಬಾರದು ಎಂದು ಪೊಲೀಸರು ವಿನಂತಿಸಿಕೊಂಡಿದ್ದಾರೆ.
ಹಸುಗಳ ಶವಗಳ ರಾಶಿ- ಬಾಳೆಹಣ್ಣಿನಲ್ಲಿ ವಿಷ ಹಾಕಿರುವ ಶಂಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + one =
Remember me
