ಬೆಂಗಳೂರು:ದೂರು ನೀಡಲು ಬಂದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ ಆರೋಪ, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ ಸಬ್​ ಇನ್ಸ್​ಪೆಕ್ಟರ್ ವಿರುದ್ಧ ಕೇಳಿಬಂದಿದೆ. ​
ವರದಕ್ಷಿಣೆ ಪ್ರಕರಣ ಸಂಬಂಧ ಮಹಿಳೆಯ ಹೇಳಿಕೆ ಪಡೆಯುವ ನೆಪದಲ್ಲಿ ಮಹಿಳೆಯ ಜತೆ ಎಸ್​ಐ ಮಂಜುನಾಥ ಸ್ವಾಮಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಮಹಿಳೆಯ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಆಪಾದನೆ ಇದೆ.
ಇದನ್ನೂ ಓದಿ: ಗಟ್ಟಿಯಾಗಿ ತಬ್ಬಿ ಗುಪ್ತಾಂಗವನ್ನು ಮುಟ್ಟಿದ: ಡ್ರೆಸ್ಸಿಂಗ್​ ರೂಮಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ
ನಗರ ಪೊಲೀಸರಿಗೆ ಟ್ಯಾಗ್ಈ ಘಟನೆ ಏಪ್ರಿಲ್ 8ರಂದು ನಡೆದಿದೆ. ಠಾಣೆಯಲ್ಲಿ ಮಾತ್ರವಲ್ಲದೆ, ವಾಟ್ಸ್​ಆ್ಯಪ್​ ಮೆಸೇಜ್ ಮೂಲಕವೂ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಮನೆಗೆ ಹೋದ ಬಳಿಕವು ಮಹಿಳೆಗೆ ಕರೆ ಮಾಡಿ ನಿಮ್ಮ ಪೋಟೊಗಳನ್ನು ಕಳುಹಿಸಿ ಎಂದರು ಎಂದು ಮಹಿಳೆ ಹೇಳಿದ್ದಾರೆ. ಸರಣಿ ಟ್ವೀಟ್​ ಮೂಲಕ ಸಬ್ ಇನ್ಸ್‌ಪೆಕ್ಟರ್ ಕೃತ್ಯದ ಬಗ್ಗೆ ಮಹಿಳೆ ವಿವರಣೆ ನೀಡಿದ್ದು, ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ಟ್ವೀಟ್​ನಲ್ಲಿ ಏನಿದೆ?ವಿಚ್ಛೇದನ ಪ್ರಕರಣಕ್ಕೆ ಸಾಕ್ಷಿ ಹೇಳಿಕೆ ನೀಡಲು ನಾನು ಪೊಲೀಸ್ ಠಾಣೆಗೆ ಹೋಗಿದ್ದೆ, ಅದು ನನ್ನ ಸ್ನೇಹಿತನ ಸಹೋದರನಿಗಾಗಿ. ಪೊಲೀಸ್ ಠಾಣೆಯಲ್ಲಿ ನಾನು ಹೇಳಿಕೆ ನೀಡಲು ಸಬ್​ ಇನ್ಸ್​ಪೆಕ್ಟರ್​ ಜತೆ ಮಾತನಾಡಬೇಕಿತ್ತು. ಆರಂಭದಲ್ಲಿ ಆತ ತುಂಬಾ ಸ್ನೇಹಪರನಾಗಿದ್ದರು. ಆದರೆ, ನಂತರ ಅವರ ನಿಜವಾದ ಬಣ್ಣಗಳು ಹೊರಹೊಮ್ಮಲು ಪ್ರಾರಂಭಿಸಿದವು ಮತ್ತು ಪರಿಸ್ಥಿತಿ ತುಂಬಾ ಅಹಿತಕರವಾಗಲು ಪ್ರಾರಂಭಿಸಿತು. ನನ್ನೊಂದಿಗೆ ಚೆಲ್ಲಾಟವಾಡಲು ಪ್ರಾರಂಭಿಸಿದರು. ವಿಚಾರಣೆ ಸಮಯದಲ್ಲಿ ನನ್ನ ಕೈಯನ್ನು ಹಿಡಿದು ಮುದ್ದಿಸಲು ಪ್ರಾರಂಭಿಸಿದರು. ನಾನು ಭಯಭೀತಳಾದೆ. ಮೊದಲು ನನ್ನ ಹೇಳಿಕೆಯನ್ನು ಪೂರ್ಣಗೊಳಿಸೋಣ ಅಂತ ಭಯದಿಂದ ಸುಮ್ಮನಾದೆ. ಹೇಳಿಕೆಯನ್ನು ಕೊಟ್ಟ ಬಳಿಕ ಆತ ತನ್ನ ಮೊಬೈಲ್​ ನಂಬರ್ ತೆಗೆದಿಟ್ಟು ಕರೆ ಮಾಡಲು ಕೇಳಿದರು.
This happened late evening yesterday,I went to the police station to provide a witness statement for a divorce case, it was for my friend’s brother.At the police station I had to talk to this cop to give the statement.
— Sheethal Susan Abraham (@SusanSheethal)April 10, 2023

ಸೊಂಟ ಹಿಡಿದರುಆ ಸಮಯದಲ್ಲಿ ಬೇರೊಬ್ಬರು ಕರೆದಿದ್ದರಿಂದ ಆತ ತನ್ನ ಕ್ಯಾಬಿನ್​ನಿಂದ ಕೆಲ ಕ್ಷಣ ಹೊರಗೆ ಹೋಗಬೇಕಾಯಿತು. ಕ್ಯಾಬಿನ್‌ನಿಂದ ಹೊರಡುವಾಗ ಆತ ನನ್ನ ಸೊಂಟವನ್ನು ಹಿಡಿದರು ಮತ್ತು ನನ್ನ ನಿತಂಬವನ್ನು ಮುಟ್ಟಿದರು. ಇದರಿಂದ ನಾನು ಆಘಾತಕ್ಕೆ ಒಳಗಾದೆ. ಅಸಹ್ಯವು ಆಯಿತು ಮತ್ತು ನಾನು ಅಸಹಾಯಕಳಾಗಿದ್ದೆ. ಏನು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ನಾನು ಕುಳಿತಿದ್ದ ಕ್ಯಾಬಿನ್‌ನ ಪಕ್ಕದಲ್ಲಿದ್ದ ಇನ್‌ಸ್ಪೆಕ್ಟರ್​ ಕ್ಯಾಬಿನ್‌ಗೆ ಹೋಗಬೇಕೆಂದು ಬಯಸಿದೆ. ಆದರೆ ಬದಲಿಗೆ ನಾನು ಜಡವಾಗಿದ್ದೆ. ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಅದೃಷ್ಟವಶಾತ್, ನನ್ನ ತಾಯಿ ನನಗೆ ಸರಿಯಾದ ಸಮಯಕ್ಕೆ ಕರೆ ಮಾಡಿದರು ಮತ್ತು ನಾನು ಅವರ ಕರೆಯನ್ನು ಸ್ವೀಕರಿಸಿ ಹೊರಡಲು ಮುಂದಾದೆ.
ಇದನ್ನೂ ಓದಿ:ದರದಲ್ಲೂ, ಗುಣಮಟ್ಟದಲ್ಲೂ ನಂದಿನಿಗಿಲ್ಲ ಸಾಟಿ; ಬೇರೆ ಹಾಲು ಖರೀದಿಸಿದರೆ ಗ್ರಾಹಕರಿಗೆ ಹೊರೆ
ಫೋಟೋಗಳನ್ನು ಕಳುಹಿಸಲು ಒತ್ತಾಯಪೋಲೀಸರು ನನ್ನ ಹೇಳಿಕೆಯನ್ನು ತೆಗೆದುಕೊಳ್ಳಲಿಲ್ಲ, ಆದರೆ ಆತ ಕರೆ ಮಾಡಿದಾಗ ಮತ್ತೆ ಬರುವಂತೆ ನನ್ನನ್ನು ಕೇಳಿದರು ಮತ್ತು ನಾನು ಮನೆಗೆ ಬಂದ ನಂತರ ನನ್ನ ಫೋಟೋಗಳನ್ನು ಕಳುಹಿಸಲು ಒತ್ತಾಯಿಸಿದರು. ಅಲ್ಲದೆ, ವಾಟ್ಸ್​ಆ್ಯಪ್​ ಮೂಲಕ ತಡರಾತ್ರಿ ಸಂಭಾಷಣೆಯನ್ನು ಪ್ರಾರಂಭಿಸಿದರು. ನಾನದನ್ನು ನಿರ್ಲಕ್ಷಿಸುವುದನ್ನು ಮುಂದುವರೆಸಿದೆ.
I feel terrible, low cause I was in a police station and I didn’t do anything about it. I’m in mentally traumatic state and I don’t know how to tackle this situation. I have to continue to follow up with the case but I’m petrified. Please advisepic.twitter.com/oddpIF1ee7
— Sheethal Susan Abraham (@SusanSheethal)April 10, 2023

ಮಾನಸಿಕವಾಗಿ ಆಘಾತನಾನು ಪೊಲೀಸ್ ಸ್ಟೇಷನ್‌ನಲ್ಲಿ ಇದ್ದಿದ್ದರಿಂದ, ಅದರ ಬಗ್ಗೆ ಏನನ್ನೂ ಮಾತನಾಡಲಿಲ್ಲ. ಏಕೆಂದರೆ ನನಗೆ ತುಂಬಾ ಭಯವಾಗಿತ್ತು. ನಾನು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದೇನೆ ಮತ್ತು ಈ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ನನಗೆ ತಿಳಿದಿಲ್ಲ. ನಾನು ಪ್ರಕರಣವನ್ನು ಡಿವೋರ್ಸ್​ ಪ್ರಕರಣವನ್ನು ಅನುಸರಿಸುವುದನ್ನು ಮುಂದುವರಿಸಬೇಕಾಗಿದೆ ಆದರೆ, ನಾನು ಭಯಭೀತಳಾಗಿದ್ದೇನೆ. ದಯವಿಟ್ಟು ಸಲಹೆ ನೀಡಿ ಎಂದು ಮಹಿಳೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.
ಇದೀಗ ಮಹಿಳೆಯ ಟ್ವೀಟ್​ ದೂರಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು ಮಾಹಿತಿಯನ್ನು ಕೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ತನ್ನ ದೊಡ್ಡ ನಿತಂಬಗಳಿಂದಾದ ಅವಮಾನದ ಬಗ್ಗೆ ಮಾತನಾಡಿದ ಗೋವಾ ಬ್ಯೂಟಿ ಇಲಿಯಾನಾ..!

ನಿನ್ನ ಜತೆ ಸೆಕ್ಸ್​ ಮಾಡಿದ್ದೀನಿ, ಆ ಭಾಗವನ್ನು ತುಂಬಾ ಇಷ್ಟಪಡ್ತೇನೆ! ಅರಿಯಾನಾಗೆ ಶಾಕ್​ ಕೊಟ್ಟ ಆರ್​ಜಿವಿ​

ಯುವತಿಯ ನಿತಂಬ ಸ್ಪರ್ಶಿಸಿದ ಅಜರ್ಬೈಜಾನ್ ಅಧ್ಯಕ್ಷರು? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + twenty =
Remember me
