ಬೆಂಗಳೂರು:ಸಿಲಿಕಾನ್​ ಸಿಟಿ ಬೆಂಗಳೂರು ಟ್ರಾಫಿಕ್​ ಸಮಸ್ಯೆಯಿಂದಲೇ ಹೆಚ್ಚು ಕುಖ್ಯಾತಿ ಪಡೆದಿದ್ದು, ಟ್ರಾಫಿಕ್​ ಸಮಸ್ಯೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದರು ವಾಹನ ಸವಾರರೇ ಇದಕ್ಕೆ ಅಡ್ಡಲಾಗಿ ನಿಂತಿದ್ದಾರೆ. ಬೇಕಂತಲೇ ಒನ್​ವೇನಲ್ಲಿ ಗಾಡಿ ಚಲಾಯಿಸುವುದು, ಹೆಲ್ಮೆಟ್​ ಧರಸದೆ ಬೈಕ್​ ಚಾಲನೆ ಸೇರಿದಂತೆ ಅನೇಕ ಉಲ್ಲಂಘನೆಗಳನ್ನು ಮಾಡುತ್ತಿರುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಟ್ರಾಫಿಕ್​ ನಿಯಮ ಉಲ್ಲಂಘಿಸಿದ ಸವಾರನಿಗೆ ಯೋಧರೊ್ಬರು ತಮ್ಮದೇ ಶೈಲಿಯಲ್ಲಿ ಬುದ್ದಿ ಕಲಿಸಿರುವ ಘಟನೆ ಬೆಳಕಿಗೆ ಬಂದಿದೆ.
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಒನ್​ವೇನಲ್ಲಿ ಬರುವ ದ್ವಿಚಕ್ರ ವಾಹನ ಸವಾರನೋರ್ವ ಎದುರು ಬರುವ ಕಾರಿಗೆ ದಾರಿ ಬಿಡದೆ ಪಕ್ಕಕೆ ಹೋಗುವಂತೆ ಸೂಚಿಸುತ್ತಾನೆ. ಕಾರಿನ ಚಾಲಕ ಹಾರ್ನ್​ ಮಾಡಿದರೂ ಆತ ದಾರಿ ಬಿಡದೆ ಉದ್ಧಟತನ ತೋರುತ್ತಾನೆ. ಈ ವೇಳೆ ಸಿಗ್ನಲ್​​ನಲ್ಲಿ ನಿಂತಿರುವ ಸೇನಾ ವಾಹನದ ಚಾಲಕರೊಬ್ಬರು ಇದನ್ನು ಗಮನಿಸಿ ಕೂಡಲೇ ಇಳಿದು ಬಂದು ದ್ವಿಚಕ್ರ ವಾಹನ ಸವಾರನ ತಲೆಗೆ ಹೊಡೆದು ದಾರಿ ಬಿಡುವಂತೆ ಸೂಚಿಸುತ್ತಾನೆ.
Satisfying videos road rage versionpic.twitter.com/LSETqhvU0K
ಇದನ್ನೂ ಓದಿ:ಹಿರಿಯ ನಟಿ ಪದ್ಮಜಾ ರಾವ್​ಗೆ ಮೂರು ತಿಂಗಳು ಸಜೆ; ಪ್ರಕರಣದ ವಿವರ ಇಲ್ಲಿದೆ
ಇಷ್ಟಾದರೂ ಮಾತು ಕೇಳದ ದ್ವಿಚಕ್ರ ವಾಹನ ಸವಾರನಿಗೆ ಬುದ್ದಿ ಕಳಿಸಲು ಸೇನಾ ವಾಹನದಲ್ಲಿರುವ ಬೆತ್ತ ಒಂದನ್ನು ತರುತ್ತಾರೆ. ಇದನ್ನು ಗಮನಿಸಿದ ಟ್ರಾಫಿಕ್​ ಪೊಲೀಸ್​ ಒಬ್ಬರು ಕೂಡಲೇ ಮಧ್ಯಪ್ರವೇಶಿಸಿ ವಾಹನ ಸವಾರನಿಗೆ ದಾರಿ ಬಿಡುವಂತೆ ಸೂಚಿಸುತ್ತಾರೆ. ಇದಾದ ಬಳಿಕ ಆತ ದಾರಿ ಬಿಡುತ್ತಾನೆ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಕಾರಿನ ಡ್ಯಾಶ್​ಬೋರ್ಡ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್​ ಆಗಿದ್ದು, ಈವರೆಗೆ ಐದು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.
ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯೋಧನ ನಡೆಗೆ ಮೆಚ್ಚುಗೆಯೆ ಮಹಾಪೂರವೇ ಹರಿದು ಬರುತ್ತಿದ್ದು, ಈ ರೀತಿ ಟ್ರಕ್​ ಪ್ಯಾಟ್ರೋಲಿಂಗ್​ ನಗರದ ತುಂಬಾ ಮಾಡಿದರೆ ಟ್ರಾಫಿಕ್​ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಈ ರೀತಿ ನಿಯಮ ಉಲ್ಲಂಘನೆ ಮಾಡುವವರಿಗೆ ತಲೆಯ ಬದಲಾಗಿ ಕಪಾಳಕ್ಕೆ ಹೊಡೆಯಬೇಕು ಎಂದು ಕಮೆಂಟ್​ ಮಾಡಿ ಯೋಧನ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
