ಬೆಂಗಳೂರು:ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ಸೊಂದು ಕಾರು, ಬೈಕುಗಳಿಗೆ ಗುದ್ದಿ ಸರಣಿ ಅಪಘಾತ ಮಾಡಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಯಲ್ಲಿ ನಡೆದಿದೆ. ಬಸ್​ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆಯಾಗಿದ್ದು, ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೋಮವಾರ (ಆಗಸ್ಟ್​ 12) ಬೆಳಗ್ಗೆ 9.25ರ ಸುಮಾರಿಗೆ ಹೆಬ್ಬಾಳ ಫ್ಲೈಓವರ್ ಮೇಲೆ ನಿಧಾನ ಗತಿಯಲ್ಲಿ ಏರ್​ಪೋರ್ಟ್​​ನಿಂದ ಹೆಚ್ಎಸ್ಆರ್ ಲೇಔಟ್ ಕಡೆ ಬಸ್​​ ಹೋಗುತ್ತಿತ್ತು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್​ ಮುಂಬದಿ ನಿಂತಿದ್ದ ನಾಲ್ಕು ಬೈಕ್​ಗಳು ಹಾಗೂ 4 ಕಾರಿಗೆ ಡಿಕ್ಕಿ ಹೊಡೆದಿದೆ. ಬಸ್​ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯಲ್ಲಿ ಸವಾರರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
CCTV captures terrifying moment when BMTC Volvo bus smashes atleast 3 bikes and 2 cars in Bengaluru.Looks like the driver tried to apply brakes but didn't work.pic.twitter.com/OQzHIcyt9u
ಇದನ್ನೂ ಓದಿ:ನಾನು ಆರಾಮಾಗಿದ್ದೇನೆ, ಆ ವೈರಲ್​ ವಿಡಿಯೋವನ್ನು ನಂಬಬೇಡಿ: ವಿನೋದ್​ ಕಾಂಬ್ಳಿ
ಬಿಎಂಟಿಸಿ ವೋಲ್ವೋ ಬಸ್ ಸಂಖ್ಯೆKA-57F-1794ಎಂದು ಗುರುತಿಸಲಾಗಿದೆ. ಇದರಿಂದ ಒಬ್ಬ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋರ್ವ ಬೈಕ್​ ಸವಾರನ ಆರೋಗ್ಯ ಸ್ಥಿತಿ ಇನ್ನಷ್ಟೇ ತಿಳಿಯಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಾಗೂ ಬಿಎಂಟಿಸಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೆಲವರು ವಾಹನ ಸವಾರರು ಓವರ್‌ಟೇಕ್ ಮಾಡಿದ್ದಾರೆ ಎಂದು ಹೇಳಿದರೆ, ಇನ್ನೂ ಕೆಲವರು ಬಿಎಂಟಿಸಿ ಬಸ್‌ ಚಾಲಕನದ್ದೇ ತಪ್ಪು ಎಂದಿದ್ದಾರೆ. ಇನ್ನೂ ಕೆಲವರು ಟ್ರಾಫಿಕ್ ಜಾಮ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − seven =
Remember me
